'ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಹಣ ಕೊಟ್ಟು ಪಾಕ್ ನಲ್ಲಿ ಪ್ರಚಾರ'

ನವದೆಹಲಿ, ಅಕ್ಟೋಬರ್ 18: ಪ್ರಧಾನಿ ಮೋದಿ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಲ್ಲಿ ಫೇಸ್ ಬುಕ್ ನಲ್ಲಿ "ಪೇಯ್ಡ್ ಕ್ಯಾಂಪೇನ್" (ಹಣ ಕೊಟ್ಟು ಅಭಿಯಾನ) ನಡೆಸುತ್ತಿದೆ. ಇದು ತೀರಾ ಗಂಭೀರವಾದ ವಿಚಾರ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಗುರುವಾರ ಹೇಳಿದ್ದಾರೆ.

"ದೇಶ್ ಬಚಾವೋ, ಮೋದಿ ಹಠಾವೋ" (ಮೋದಿಯನ್ನು ತೊಲಗಿಸಿ, ದೇಶವನ್ನು ರಕ್ಷಿಸಿ) ಎಂದು ಫೇಸ್ ಬುಕ್ ಪುಟದಲ್ಲಿ ಬಂದಿರುವುದರ ಪ್ರತಿಯನ್ನು ಸಂಬಿತ್ ಪಾತ್ರ ಪ್ರದರ್ಶಿಸಿದರು. ಅದರಲ್ಲಿ ಪಾಕಿಸ್ತಾನ ಎಂದು ಇದ್ದಿದ್ದನ್ನು ಗಮನ ಸೆಳೆಯುವಂತೆ ಮಾಡಲಾಗಿತ್ತು.

ಇದರ ಅರ್ಥ ಏನು? ನಮ್ಮ ಜನಪ್ರಿಯ ಪ್ರಧಾನಿ ವಿರುದ್ಧ ಪಾಕಿಸ್ತಾನದಲ್ಲಿ ಅಭಿಯಾನ ನಡೆಸುತ್ತಿದ್ದೀರಿ. ವಿರೋಧ ಪಕ್ಷವು ಭಾರತದಲ್ಲಿ ಇಂಥ ಅಭಿಯಾನ ನಡೆಸಿದರೆ ಏನು ಅಂತ ಅರ್ಥ ಮಾಡಿಕೊಳ್ಳಬಹುದು. ಆದರೆ ಪಾಕಿಸ್ತಾನದಲ್ಲಿ ಏಕೆ ಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

Sambit Patra

ಪಾಕಿಸ್ತಾನದ ಬಗ್ಗೆ ಇರುವ ಪ್ರೀತಿಯನ್ನು ಕಾಂಗ್ರೆಸ್ ನಾಯಕರು ತೋರಿಸುತ್ತಿದ್ದಾರೆ ಎಂದ ಅವರು, ಇತ್ತೀಚೆಗೆ ಪಂಜಾಬ್ ನ ಸಚಿವ ಸಿಧು ನೀಡಿದ ಹೇಳಿಕೆ ಉದಾಹರಣೆಯಾಗಿ ನೀಡಿದರು. "ನನಗೆ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನ ಹೆಚ್ಚು ಪರಿಚಿತ ಸ್ಥಳ ಎಂದೆನಿಸುತ್ತದೆ" ಎಂದು ಸಿಧು ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+