• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಂಚಕ್ಕಾಗಿ ರಫೇಲ್ ಡೀಲನ್ನು ಕಾಂಗ್ರೆಸ್ ವಾಪಸ್ ಕಳಿಸಿತ್ತು : ಆರ್‌ಎಸ್‌ಪಿ

|

ನವದೆಹಲಿ, ಸೆಪ್ಟೆಂಬರ್ 22 : "ಇದು ಅತ್ಯಂತ ನಾಚಿಕೆಗೇಡಿನ ವಿಷಯ, ಬೇಜವಾಬ್ದಾರಿಯುತವಾದದ್ದು. ಒಂದು ರಾಷ್ಟ್ರದ ಪ್ರಧಾನಿಯ ವಿರುದ್ಧ ಯಾವುದೇ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಇಂಥ ಪದಗಳನ್ನು ಬಳಿಸಿಲ್ಲ. ರಾಹುಲ್ ಅಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?"

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರು ದೇಶಕ್ಕೆ ಮೋಸ ಮಾಡಿದ್ದಾರೆ, ದೇಶದ ಪ್ರಧಾನಿ 'ಕಳ್ಳ' (ಚೋರ್) ಎಂದು ಜರಿದು, ತಮ್ಮ ಹುದ್ದೆಯ ಘನೆಯನ್ನೂ ಮೀರಿ ಬಳಸಿರುವ ಪದಗಳಿಗಾಗಿ ರಾಹುಲ್ ಗಾಂಧಿಯವರನ್ನು ಮಾತಿನಲ್ಲೇ ಜರಿದುಹಾಕಿದ್ದಾರೆ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಾಯಿಯವರೊಂದಿಗೆ ರಾಹುಲ್ ಗಾಂಧಿ ಅವರ ಮೇಲೆಯೂ ಚಾರ್ಜ್ ಶೀಟ್ ಹಾಕಲಾಗಿದೆ. ತಮ್ಮ ಸ್ವಂತ ಭಾವನ ವಿರುದ್ಧ ಭೂಕಬಳಿಕೆಯ ಕೇಸನ್ನು ಜಡಿಯಲಾಗಿದ್ದರೂ ಒಂದೇ ಒಂದು ಮಾತನ್ನೂ ಆಡಿಲ್ಲ ಎಂದು ರವಿ ಶಂಕರ್ ಪ್ರಸಾದ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

2012ರಲ್ಲಿ ಡಸಾಲ್ಟ್ ಅತ್ಯಂತ ಕಡಿಮೆಯ ಬಿಡ್ಡರ್ ಆಗಿದ್ದರೂ ರಫೇಲ್ ಡೀಲನ್ನು ಏಕೆ ವಾಪಸ್ ಕಳಿಸಲಾಯಿತು? ನಮ್ಮ ನೇರವಾದ ಆರೋಪ ಏನೆಂದರೆ, ಕಾಂಗ್ರೆಸ್ ಗೆ ಆಗ ಯಾವುದೇ ಲಂಚ ದೊರೆಯಲಿಲ್ಲ, ಆ ಕಾರಣಕ್ಕಾಗಿ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.

ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಜೊತೆ ಯುದ್ಧ ವಿಮಾನ ಕೊಳ್ಳುವ ವ್ಯವಹಾರದಲ್ಲಿ ಭಾರತದ ಭಾಗೀದಾರ ಕಂಪನಿಯಾಗಿ ರಿಯನ್ಸ್ ಡಿಫೆನ್ಸ್ ಕಂಪನಿ ಪರ ನರೇಂದ್ರ ಮೋದಿ ಲಾಬಿ ಮಾಡಿದರು ಎಂದು ಸಂದರ್ಶನವೊಂದರಲ್ಲಿ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಹೇಳಿದ್ದು ಜೇನಿನ ಗೂಡಿಗೆ ಕಲ್ಲು ಎಸೆದಂತಾಗಿದೆ.

ರಫೇಲ್ ಡೀಲ್ : ನರೇಂದ್ರ ಮೋದಿ ರಾಜೀನಾಮೆಗೆ ಖರ್ಗೆ ವೈಯಕ್ತಿಕ ಆಗ್ರಹ

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಿದ್ದಾಗಲೂ ರಫೇಲ್ ಫೈಟರ್ ಜೆಟ್ ಖರೀದಿ ಪ್ರಕರಣದಲ್ಲಿ ರಿಲಯನ್ಸ್ ಹೆಸರು ಇತ್ತು. ಅಂದು ಮುಖೇಶ್ ಅಂಬಾನಿ ಅದರ ಮುಖ್ಯಸ್ಥರಾಗಿದ್ದರು. ನಂತರ ಆ ಕಂಪನಿಯನ್ನು ಮುಚ್ಚಲಾಯಿತು. ಇಂದು ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಡಸಾಲ್ಟ್ ಕಂಪನಿಯ ಜೊತೆ ಜಂಟಿ ವ್ಯವಹಾರ ನಡೆಸಿದೆ ಎಂದು ಪ್ರತಿಪಾದಿಸಿದರು.

ಮತ್ತೆ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ 'ರಫೇಲ್' ಯುದ್ಧ

ಒಬ್ಬ ದುರಹಂಕಾರಿ ಮತ್ತು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಿರುವ ಮಾಹಿತಿಯೇ ಇಲ್ಲದ ನಾಯಕನೊಬ್ಬನನ್ನು ಸಂತುಷ್ಟ ಪಡಿಸಲೆಂದು ರಫೇಲ್ ಡೀಲ್ ಹಗರಣದ ತನಿಖೆಗೆಂದು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅವರು ಬೇಡಿಕೆಯನ್ನು ಕಡ್ಡಿ ಮುರಿದಂತೆ ತಳ್ಳಿಹಾಕಿದ್ದಾರೆ.

ಈಗಾಗಲೆ ಫ್ರಾನ್ಸ್ ರಕ್ಷಣಾ ಸಚಿವಾಲಯ, ಆಫ್ ಸೆಟ್ ಭಾಗೀದಾರಿ ಕಂಪನಿಯನ್ನು ಆಯುವಲ್ಲಿ ಭಾರತದ ಅಥವಾ ಫ್ರಾನ್ಸ್ ಕಂಪನಿಯ ಕೈವಾಡವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರೂ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ. ರಾಹುಲ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪವನ್ನು ಕೂಡ ರವಿ ಶಂಕರ್ ಪ್ರಸಾದ್ ಅವರು ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಳ್ಳಿಹಾಕಿದರು.

English summary
Congress returned Rafale deal for bribes : Ravi Shankar Prasad has lambasted Rahul Gandhi and Congress for attacking Narendra Modi and calling him thief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X