ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'22 ಲಕ್ಷ ಕೋಟಿ ಪ್ಯಾಕೇಜ್ ದೇಶದ ಕ್ರೂರ ಅಣಕ'

|
Google Oneindia Kannada News

ನವದೆಹಲಿ, ಮೇ 22: ಕೇಂದ್ರ ಸರ್ಕಾರದ 22 ಲಕ್ಷ ಕೋಟಿ ರುಪಾಯಿಯ ಕೊರೊನಾ ಲಾಕ್‌ಡೌನ್ ಪರಿಹಾರ ಪ್ಯಾಕೇಜ್‌ ಬಗ್ಗೆ ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.

''ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರುಪಾಯಿ ದೇಶದ ಕ್ರೂರ ಅಣಕ. ಏಕೆಂದರೆ ಈ ಪ್ಯಾಕೇಜ್‌ನಲ್ಲಿ ದೇಶದ 13 ಕೋಟಿ ಬಡ ಕುಟುಂಬಗಳನ್ನು ನಿರ್ಲಕ್ಷಿಸಲಾಗಿದೆ'' ಎಂದು ಅವರು ಹರಿಹಾಯ್ದಿದ್ದಾರೆ.

ಸೋನಿಯಾ ವಿರುದ್ಧ ಎಫ್ಐಆರ್ ರದ್ದು ಮಾಡಲು ದುಂಬಾಲು ಬಿದ್ದ ಡಿಕೆಶಿಸೋನಿಯಾ ವಿರುದ್ಧ ಎಫ್ಐಆರ್ ರದ್ದು ಮಾಡಲು ದುಂಬಾಲು ಬಿದ್ದ ಡಿಕೆಶಿ

ಶುಕ್ರವಾರ ಕೊರೊನಾ ಲಾಕ್‌ಡೌನ್ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಆಯೋಜಿಸಿದ್ದ ವಿಡಿಯೋ ಕಾನ್ಪರೆನ್ಸನಲ್ಲಿ ಸೋನಿಯಾ ಗಾಂಧಿ ಈ ಮಾತುಗಳನ್ನು ಹೇಳಿದ್ದಾರೆ.

Congress President Sonia Gandhi Hits On Central Governmnet

''ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಗಾಳಿಗೆ ತೂರಿ ನಡೆದುಕೊಳ್ಳುತ್ತಿದೆ. ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುವುದನ್ನೇ ಮರೆತಿದೆ. ಲಾಕ್‌ಡೌನ್ ಬಗ್ಗೆ ದೇಶದ ಜನರಲ್ಲಿ ಅನಿಶ್ಚಿತತೆ ಭುಗಿಲೆದಿದ್ದಿದೆ. ಎರಡು ತಿಂಗಳು ಕಳೆದರೂ ಲಾಕ್‌ಡೌನ್ ಅಂತ್ಯ ಹಾಗೂ ಆ ನಂತರದ ಕಾರ್ಯಚಟುವಟಿಕೆಗಳ ಬಗ್ಗೆ ಯಾವುದೇ ನೀಲನಕ್ಷೆ ಇಲ್ಲ'' ಎಂದು ಸೋನಿಯಾ ಹೇಳಿ, ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

English summary
Congress President Sonia Gandhi Hits On Central Governmnet, 22 lakh crore rupees pakage is a big cruel joke, she said in oposition parties video call meeting on friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X