ಪ್ರಿಯಾಂಕಾ ಗಾಂಧಿ ಮೊದಲ ಟ್ವೀಟ್ ನಲ್ಲಿ ಇಣುಕಿದ ಗಾಂಧೀಜಿ
Recommended Video

ನವದೆಹಲಿ, ಮಾರ್ಚ್ 13: ಇತ್ತೀಚೆಗಷ್ಟೇ ಟ್ವೀಟ್ ಲೋಕಕ್ಕೆ ಪದಾರ್ಪಣೆ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮ ಮೊತ್ತಮೊದಲ ಟ್ವೀಟ್ ನಲ್ಲಿ ಮಹಾತ್ಮಾ ಗಾಂಧಿ ಅವರನ್ನು ನೆನೆದಿದ್ದಾರೆ.
ಸಾಬರಮತಿಯ ಸರಳ ಘನತೆಯಲ್ಲಿ ಸತ್ಯ ಎಂದಿಗೂ ಜೀವಂತವಾಗಿರುತ್ತದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮಹಾತ್ಮಾ ಗಾಂಧೀಜಿ ಅವರ ಸುಭಾಷಿತವೊಂದನ್ನೂ ಟ್ವೀಟ್ ಮಾಡಿದ್ದಾರೆ.

"ನಾನು ಎಂದಿಗೂ ಹಿಂಸೆಯನ್ನು ವಿರೋಧಿಸುತ್ತೇನೆ. ಮೇಲ್ನೋಟಕ್ಕೆ ಅದು ಒಳಿತನ್ನು ಮಾಡುವುದಕ್ಕಾಗಿ ಮಾಡಿದ ಹಿಂಸೆ ಎನ್ನಲಿಸಬಹುದು. ಆದರೆ ಆ ಒಳಿತು ತಾತ್ಕಾಲಿಕ, ಆದರೆ ಹಿಂಸೆಯಿಂದ ಸಂಭವಿಸಿದ ಅನಾಹುತ ಮಾತ್ರ ಶಾಶ್ವತ" ಎಂದು ಮಹಾತ್ಮಾ ಗಾಂಧಿ ಅವರ ಮಾತನ್ನು ಪುನರುಚ್ಚರಿಸಿದ್ದಾರೆ.
“I object to violence because when it appears to do good, the good is only temporary; the evil it does is permanent.”
— Priyanka Gandhi Vadra (@priyankagandhi) March 12, 2019
Mahatma Gandhi pic.twitter.com/bxh4cT3Y5O
ಇತ್ತೀಚೆಗಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೆಸರಿರಲಿಲ್ಲ.
In the simple dignity of Sabarmati, the truth lives on.
— Priyanka Gandhi Vadra (@priyankagandhi) March 12, 2019












Click it and Unblock the Notifications