'ಉನ್ನತ ಹುದ್ದೆಯಲ್ಲಿ ಸಾಮಾನ್ಯ ವ್ಯಕ್ತಿ:' ನಾಯ್ಡುಗೆ ಮೋದಿ ಅಭಿನಂದನೆ
ನವದೆಹಲಿ, ಆಗಸ್ಟ್ 11: ಭಾರತದ 13 ನೇ ಉಪರಾಷ್ಟ್ರಪತಿಯಾಗಿ ಇಂದು(ಆಗಸ್ಟ್ 11) ಪ್ರಮಾಣ ವಚನ ಸ್ವೀಕರಿಸಿದ ಎಂ.ವೆಂಕಯ್ಯ ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಾಯ್ಡು ಅವರ ಕುರಿತು ಮಾತನಾಡಿದ ಮೋದಿ, 'ಸ್ವಾತಂತ್ರ್ಯಾನಂತರ ಹುಟ್ಟಿ, ದೇಶ ಉನ್ನತ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ ನಾಯ್ಡು' ಎಂದರು.

"ಇಂದು ಭಾರತದ ಸಾಮಾನ್ಯ ವ್ಯಕ್ತಿಯೊಬ್ಬರು ದೇಶದ ಉನ್ನದ ಹುದ್ದೆ ಅಲಂಕರಿಸಿದ್ದಾರೆ, ಒಬ್ಬ ರೈತರ ಮಗನಾಗಿ ಬಂದ ನಾಯ್ಡು ಅವರು ಯಾವತ್ತಿಗೂ ಬಡವರ ಪರವಾಗಿ ಕೆಲಸ ಮಾಡುವವರು, ರೈತನ ಮಗ ಈ ಹುದ್ದೆಯಲ್ಲಿರುವುದು ಪ್ರಬುದ್ಧ ಪ್ರಜಾಪ್ರಭುತ್ವದ ಸಾಕ್ಷಿ" ಎಂದು 68 ವರ್ಷದ ನಾಯ್ಡು ಅವರನ್ನು ಶ್ಲಾಘಿಸಿದರು.
ಆಗಸ್ಟ್ 5 ರಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರನ್ನು ಮಣಿಸಿದ್ದ ಆಂಧ್ರದ ನೆಲ್ಲೂರು ಜಿಲ್ಲೆಯ ಚಾವಟಪಾಲೆಂನ ವೆಂಕಯ್ಯ ನಾಯ್ಡು ಅವರು ಇನ್ನು ಐದು ವರ್ಷಗಳ ಕಾಲ ಭಾರತದ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.












Click it and Unblock the Notifications