ದೇವೇಗೌಡರ ಕುಟುಂಬಕ್ಕೆ ತುಮಕೂರು ಜನತೆ ಶಾಪದಿಂದ ಸರ್ಕಾರ ಪತನ: ಸಂಸದ ಬಸವರಾಜು

ನವದೆಹಲಿ, ಜುಲೈ 24: ತುಮಕೂರಿನ ಜನರು ದೇವೇಗೌಡರ ಕುಟುಂಬಕ್ಕೆ ನೀಡಿದ ಶಾಪದಿಂದಲೇ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದರು.

ಕುಡಿಯಲು ನೀರು ಕೊಡದ ಕಾರಣಕ್ಕೆ ದೇವೇಗೌಡರ ಕುಟುಂಬಕ್ಕೆ ಶಾಪ ತಟ್ಟಿದೆ. ಅನೇಕ ವರ್ಷಗಳಿಂದ ನೀರಾವರಿಗೆ ಹಾಗೂ ಕುಡಿಯುವುದಕ್ಕೆ ನೀರಿಲ್ಲದೆ ಸಂಕಟಪಡುತ್ತಿದ್ದ ತುಮಕೂರಿನ ಜನರ ಆಕ್ರಂದನದ ಫಲವೇ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಪತನ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿರುವುದು ಜನತೆ ನಮ್ಮ ಪರವಾಗಿ ತೀರ್ಪು ನೀಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

coalition government collapsed curse of Tumakuru people to Deve gowda family bjp basavaraj

ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ 14 ತಿಂಗಳು ನರಕವನ್ನು ನೋಡಿದ್ದೇವೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆಯೇ ಇರುವ ಪರಿಸ್ಥಿತಿಯನ್ನು ಕಂಡಿದ್ದೇವೆ. ಇದಕ್ಕೆ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದು ಸಾಕ್ಷಿ ಎಂದರು.

ನೂತನ ಸರ್ಕಾರವು ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಬೆಮಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ನೀರಾವರಿ ಸೌಲಭ್ಯ ಒದಗಿಸಲು ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡಬೇಕು ಎಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+