ದೆಹಲಿ ಸೇರಿ ಮಹಾನಗರಗಳಲ್ಲಿ ಸಿಎನ್‌ಜಿ, ಪಿಎನ್‌ಜಿ ಬೆಲೆ ಏರಿಕೆ
ನವದೆಹಲಿ, ಅಕ್ಟೋಬರ್ 13: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಲಾಗಿದೆ. ದೆಹಲಿ ಮತ್ತು ನೆರೆಯ ನಗರಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಸೇರಿದಂತೆ ಹಲವು ನಗರಗಳಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ದರ ಏರಿಕೆ ಬಗ್ಗೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಘೋಷಿಸಿದೆ.
ಅಕ್ಟೋಬರ್ 13ರ ಮಂಗಳವಾರ ಬೆಳಗ್ಗೆ 6 ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತಿಳಿಸಿದೆ. ಬೆಲೆ ಏರಿಕೆಯ ನಂತರ ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 49.76 ರೂಪಾಯಿ ಆಗಿದ್ದರೆ, ಪಿಎನ್‌ಜಿಯನ್ನು ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (ಎಸ್‌ಸಿಎಂ) 35.11 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎಂದು ಗ್ಯಾಸ್ ವಿತರಣಾ ಕಂಪನಿ ತಿಳಿಸಿದೆ.
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಪಿಎನ್‌ಜಿ ಬೆಲೆ ಈಗ ಪ್ರತಿ ಎಸ್‌ಸಿಎಂಗೆ 34.86 ರೂಪಾಯಿ ಆಗಿರುತ್ತದೆ. ಸಿಎನ್‌ಜಿ ಪ್ರತಿ ಕೆಜಿಗೆ 56.02 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ ಎಂದು IGL ಉಲ್ಲೇಖಿಸಿದೆ.

ಇತರ ನಗರಗಳಲ್ಲಿ ಹೊಸ ದರಗಳ ಪಟ್ಟಿ:
* ಗುರುಗ್ರಾಮದಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 58.20 ರೂಪಾಯಿ ಆಗಿರುತ್ತದೆ; ಪಿಎನ್‌ಜಿ ಬೆಲೆಯನ್ನು ಪ್ರತಿ SCM ಗೆ .33.31 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ.
* ರೇವಾರಿಯಲ್ಲಿ ಸಿಎನ್‌ಜಿಯನ್ನು ಪ್ರತಿ ಕೆಜಿಗೆ 58.90 ರೂಪಾಯಿ, ಕರ್ನಾಲ್ ಮತ್ತು ಕೈತಾಲ್‌ನಲ್ಲಿ ಪ್ರತಿ ಕೆಜಿಗೆ. 57.10 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ; ರೇವಾರಿ ಮತ್ತು ಕರ್ನಾಲ್‌ನಲ್ಲಿ ಪಿಎನ್‌ಜಿ ಬೆಲೆ ಪ್ರತಿ SCM ಗೆ 33.92 ರೂಪಾಯಿ ಆಗಿದೆ.
* ಮುಜಾಫರ್ ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 63.28 ರೂಪಾಯಿ ಆಗಿದ್ದು, ಪಿಎನ್‌ಜಿ ಬೆಲೆಯನ್ನು ಪ್ರತಿ SCM ಅಡಿ 38.37 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.
* ಕಾನ್ಪುರ, ಫತೇಪುರ್ ಮತ್ತು ಹಮೀರ್‌ಪುರದಲ್ಲಿ ಸಿಎನ್‌ಜಿಯನ್ನು ಪ್ರತಿ ಕೆಜಿಗೆ 66.54 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.
* ಅಜ್ಮೇರ್, ಪಾಲಿ ಮತ್ತು ರಾಜಸಮಂಡ್‌ನಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 65.02 ರೂಪಾಯಿ ಆಗಿರುತ್ತದೆ.
15 ರೂಪಾಯಿ ವಿನಾಯಿತಿ:
"ಐಜಿಎಲ್ ಕನೆಕ್ಟ್ ಮೊಬೈಲ್ ಆಪ್ ಮೂಲಕ ಬಿಲ್ ಪಾವತಿಸುವ ಆಯ್ಕೆಯನ್ನು ಹೊಂದಿರುವವರಿಗೆ 15 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು," ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಹೇಳಿದೆ.
ಎರಡನೇ ಬಾರಿ ಬೆಲೆ ಏರಿಕೆ:
ಅಕ್ಟೋಬರ್ ತಿಂಗಳೊಂದರಲ್ಲೇ ಎರಡನೇ ಬೆಲೆ ಏರಿಕೆ ಮಾಡಲಾಗಿದೆ. ಸಿಎನ್‌ಜಿ ಮತ್ತು ಪಿಎನ್‌ಜಿ ದರಗಳು ಪ್ರತಿ ಕೆಜಿಗೆ 2.28 ರೂಪಾಯಿ ಮತ್ತು 2.10 ರೂಪಾಯಿ ಹೆಚ್ಚಳವಾಗಿದ್ದು, ಅಕ್ಟೋಬರ್ 1 ರಂದು ನೈಸರ್ಗಿಕ ಅನಿಲ ಬೆಲೆಯನ್ನು ಶೇ. 62%ರಷ್ಟು ಹೆಚ್ಚಿಸಲಾಗಿತ್ತು.
ವಾರದ ಹಿಂದೆಯಷ್ಟೇ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ:
ಕಳೆದ ಅಕ್ಟೋಬರ್ 6ರಂದು ಸಬ್ಸಿಡಿ ರಹಿತ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 15 ರೂ ಏರಿಕೆ ಮಾಡಿರುವುದಾಗಿ ಸರ್ಕಾರಿ ತೈಲ ಕಂಪನಿಗಳು ತಿಳಿಸಿದ್ದವು. ಈ ಬೆಲೆ ಏರಿಕೆಯೊಂದಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50ರೂ ಇಂದ 899.50 ರೂಗೆ ಏರಿಕೆಯಾಗಿತ್ತು. ದೇಶದ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.
ದೇಶದ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ:
* ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ಸಿಲಿಂಡರ್ ಬೆಲೆ 899.50 ರೂ
* ಕೋಲ್ಕತ್ತಾದಲ್ಲಿ 911 ರೂ ಇಂದ 926 ರೂ
* ಮುಂಬೈನಲ್ಲಿ 844.50 ರೂ ಇಂದ 899.50 ರೂ ಗೆ ಏರಿಕೆ
* ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 915.50 ರೂ












Click it and Unblock the Notifications