ಮೋದಿ ಜತೆ ವಿದೇಶಕ್ಕೆ ಪ್ರಯಾಣಿಸಿದವರ ಹೆಸರು ಬಹಿರಂಗಕ್ಕೆ ಸೂಚನೆ

ನವದೆಹಲಿ, ಆಗಸ್ಟ್ 4: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಭೇಟಿಗಳ ಸಂದರ್ಭದಲ್ಲಿ ಅವರ ಜತೆಗೆ ಪ್ರಯಾಣಿಸಿದ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಪ್ರಧಾನಿ ಮೋದಿ ಅವರು 2015-16, 2016-17ನೇ ಸಾಲಿನಲ್ಲಿ ಮಾಡಿದ ವಿದೇಶ ಪ್ರಯಾಣಗಳ ವೆಚ್ಚ ಹಾಗೂ ಅವರ ಜತೆಗೆ ಪ್ರಯಾಣಿಸಿದವರ ಹೆಸರುಗಳ ಪಟ್ಟಿಯ ಮಾಹಿತಿ ನೀಡುವಂತೆ ಕಳೆದ ಅಕ್ಟೋಬರ್‌ನಲ್ಲಿ ಕರಬಿ ದಾಸ್ ಎಂಬುವವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಆದರೆ, ಸಚಿವಾಲಯದಿಂದ ತೃಪ್ತಿಕರ ಉತ್ತರ ದೊರಕದ ಹಿನ್ನೆಲೆಯಲ್ಲಿ ಅವರು ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು.

CIC directed MEA disclose names of private persons PM Modi on foreign tours

ಮಾಹಿತಿ ಒದಗಿಸಲು 224 ರೂ. ಠೇವಣಿ ಇರಿಸುವಂತೆ ಸಚಿವಾಲಯ ಸೂಚಿಸಿತ್ತು ಎಂದು ಅರ್ಜಿದಾರರ ಪರ ಹಾಜರಿದ್ದ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಮಾಹಿತಿ ಆಯುಕ್ತ ಆರ್‌ಕೆ ಮಾಥೂರ್ ಅವರಿಗೆ ವಿಚಾರಣೆ ವೇಳೆ ತಿಳಿಸಿದರು.

ಪ್ರಧಾನಿಯವರ ಪ್ರಯಾಣದ ದಿನಾಂಕ, ಭೇಟಿಯ ಸ್ಥಳ ಮತ್ತು ವಿಮಾನ ಪ್ರಯಾಣದ ವೆಚ್ಚ ಹೊರತುಪಡಿಸಿ ಉಳಿದ ಯಾವುದೇ ಮಾಹಿತಿಗಳನ್ನು ನಿರ್ವಹಿಸಿಲ್ಲ. 224 ರೂ ಹಣ ಪಾವತಿಯ ಬಗ್ಗೆ ಮರುಪರಿಶೀಲನೆ ನಡೆಸಿ ಹೊಸ ಮಾಹಿತಿಯನ್ನು ಒದಗಿಸುವುದಾಗಿ ಸಚಿವಾಲಯ ಆಯೋಗಕ್ಕೆ ತಿಳಿಸಿತು.

ಆದರೆ, ಅರ್ಜಿದಾರರ ವಾದವನ್ನು ಮಾನ್ಯ ಮಾಡಿದ ಆಯುಕ್ತರು, ಸರ್ಕಾರಿ ವೆಚ್ಚದಲ್ಲಿ ಮೋದಿ ಅವರೊಂದಿಗೆ ಪ್ರಯಾಣಿಸಿದ ಖಾಸಗಿ ವ್ಯಕ್ತಿಗಳಿಗೆ (ಭದ್ರತೆಗೆ ಸಂಬಂಧಿಸದವರು) ಮಾಡಿದ ವೆಚ್ಚ ಮತ್ತು ಹೆಸರುಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಆದೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+