• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಪ್ರೀಂ ವಕೀಲೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ಆರೋಪ ಪಟ್ಟಿ

|

ಸುಪ್ರೀಂ ಕೋರ್ಟ್ ವಕೀಲೆ ಫರಾ ಫೈಜ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಅರೋಪ ಪಟ್ಟಿ ಸಲ್ಲಿಸಿದೆ. ತ್ರಿವಳಿ ತಲಾಖ್ ರದ್ದು ಕೋರಿ ಆಕೆ ಅರ್ಜಿ ಸಲ್ಲಿಸಿದ್ದರು. ಅವರ ಮೇಲೆ ಸಾಕಿಬ್ (ಶಂಕಿತ ಉಗ್ರ) ಮತ್ತು ಆತನ ಸಹಚರರು ಗೋಲ್ಡನ್ ಟೆಂಪಲ್ ರೈಲಿನ ಒಳಗೆ ಮೂರು ವರ್ಷದ ಹಿಂದೆ ದಾಳಿ ನಡೆಸಿದ್ದರು.

ಆ ವರ್ಷದ ಜೂನ್ ನಲ್ಲಿ ಫೈಜ್ ದೆಹಲಿ ಜಿಆರ್ ಪಿಯಲ್ಲಿ ದೂರು ದಾಖಲಿಸಿದ್ದರು. ಮದರಸಾದ ಇಬ್ಬರು ವಿದ್ಯಾರ್ಥಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು, ಎರಡು ವರ್ಷಗಳ ಕಾಲ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿರಲಿಲ್ಲ. ಕಳೆದ ಡಿಸೆಂಬರ್ ನಲ್ಲಿ ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಐಎಸ್ ಐಎಸ್ ನ ಹರ್ಕತ್-ಉಲ್-ಹರ್ಬ್-ಇ-ಇಸ್ಲಾಂ ಮಾದರಿಯನ್ನು ಬಯಲು ಮಾಡಿತ್ತು.

ಐಎಸ್‌ಐಎಸ್‌ ಜೊತೆ ನಂಟು, ಹೈದರಾಬಾದ್‌ನಲ್ಲಿ ಇಬ್ಬರ ಬಂಧನ

ಆ ವೇಳೆ ದೆಹಲಿ, ಉತ್ತರಪ್ರದೇಶದ ಹತ್ತು ಶಂಕಿತ ಉಗ್ರರನ್ನು ಬಂಧಿಸಲಾಯಿತು. ಅವರು ರಾಜಕಾರಣಿಗಳ ಮೇಲೆ ದಾಳಿಗೆ ಸಂಚು ಮಾಡುತ್ತಿದ್ದರು ಎಂಬುದು ತಿಳಿದುಬಂದಿತ್ತು. ಆ ಹತ್ತು ಮಂದಿಯಲ್ಲಿ ಹಾಪುರ್ ಮಸೀದಿಯ ಇಮಾಮ್ ಸಾಕಿಬ್ ಕೂಡ ಒಬ್ಬನಾಗಿದ್ದ. ಸಾಕಿಬ್ ನ ಫೋಟೋವನ್ನು ಪತ್ರಿಕೆಯಲ್ಲಿ ನೋಡಿದಾ ವಕೀಲೆ ಫೈಜ್ ಅವರು ನಿಜಾಮುದ್ದೀನ್ ಜಿಆರ್ ಪಿ ಅವರನ್ನು ಸಂಪರ್ಕಿಸಿ, ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

ತನಿಖೆ ವೇಳೆ ಗೊತ್ತಾಗಿದ್ದೇನೆಂದರೆ, ಟೀವಿ ಚರ್ಚೆಯಲ್ಲಿ ತ್ರಿವಳಿ ತಲಾಖ್ ರದ್ದು ಬೆಂಬಲಿಸಿ ಫೈಜ್ ಮಾತನಾಡುತ್ತಿದ್ದುದನ್ನು ಸಾಕಿಬ್ ನೋಡಿದ್ದ. ಅದೇ ಮಹಿಳೆಯನ್ನು ತಾವು ಸಂಚರಿಸುತ್ತಿದ್ದ ರೈಲಿನಲ್ಲಿ ನೋಡಿದಾಗ ಆಕೆಗೆ ಪಾಠ ಕಲಿಸಲು ಸಾಕಿಬ್ ನಿರ್ಧರಿಸಿದ್ದ. ಆದ್ದರಿಂದ ಆಕೆ ಮೇಲೆ ಹಲ್ಲೆ ನಡೆದಿತ್ತು. ಅದಕ್ಕೂ ಮುನ್ನ: ಕೆಲವು ಮಹಿಳೆಯರು ತಾವು ಷರಿಯಾ ಬದಲಿಸಬಹುದು ಅಂದುಕೊಳ್ತಾರೆ ಅಂದಿದ್ದ ಸಾಕಿಬ್.

ದುಷ್ಕರ್ಮಿಗಳು ಫೈಜ್ ರನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಇತರ ಪ್ರಯಾಣಿಕರು ರಕ್ಷಣೆ ಮಾಡಿದ್ದಾರೆ. ಸಾಕಿಬ್ ಮತ್ತು ಇತರರು ಘಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಇಳಿದುಕೊಂಡಿದ್ದರು.

English summary
Charge sheet by Delhi police who assaulted Supreme Court lawyer Farah Faiz. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X