ಟೇಕ್‌ ಆಫ್ ಆಗಬೇಕಿದ್ದ ವಿಮಾನ ವಾಪಸ್‌ ಬರಲು ಕಾರಣವಾಯ್ತು ಕೊರೊನಾ

ನವದೆಹಲಿ, ಮಾರ್ಚ್ 05: ಪ್ರಯಾಣಿಕರೊಬ್ಬರಿಗೆ ಕೊರೊನಾ ಸೋಂಕು ಇತ್ತು ಎಂಬ ವಿಚಾರ ತಿಳಿಯುತ್ತಿದ್ದಂತೆ ಟೇಕ್‌ ಆಫ್‌ಗೆ ಸಿದ್ಧವಾಗಿದ್ದ ವಿಮಾನದಲ್ಲಿ ಭಾರೀ ಗದ್ದಲ ಉಂಟಾದ ಪ್ರಸಂಗ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಾರ್ಚ್ 4ರಂದು ದೆಹಲಿಯಿಂದ ಪುಣೆಗೆ ವಿಮಾನ ಹೊರಟಿದ್ದು, ಆ ವಿಮಾನದಲ್ಲಿದ್ದ ಪ್ರಯಾಣಿಕ, ತನ್ನ ಬಗ್ಗೆ ವಿಮಾನ ಸಿಬ್ಬಂದಿಗೆ ವಿವರ ನೀಡುವಾಗ ತಾನು ಪುಣೆಗೆ ಪ್ರಯಾಣಿಸುತ್ತಿದ್ದು, ತನಗೆ ಹಿಂದೆ ಕೊರೊನಾ ಸೋಂಕು ತಗುಲಿತ್ತು ಎಂದು ಹೇಳಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ವಿಮಾನದ ಇನ್ನುಳಿದ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ.

ವಿಮಾನ ರನ್‌ವೇನಲ್ಲಿದ್ದು, ಇನ್ನೇನು ಪುಣೆಗೆ ಟೇಕ್‌ ಆಫ್ ಆಗುವ ಸಂದರ್ಭ ವಿಮಾನದೊಳಗೆ ಗದ್ದಲ ಆರಂಭವಾಗಿದೆ.

 Chaos At Flight After Passenger Tells He Was Covid Patient

ಇದು ದೊಡ್ಡ ವಿಷಯವಾಗುತ್ತಿದ್ದಂತೆ ಪೈಲಟ್, ವಿಮಾನವನ್ನು "ಟ್ಯಾಕ್ಸಿ ಬೇ"ಗೆ ಮರಳಿ ತಂದಿದ್ದು, ಎಲ್ಲಾ ಪ್ರಯಾಣಿಕರನ್ನು ಇಳಿಸಲಾಯಿತು. ನಂತರ ಇಡೀ ವಿಮಾನವನ್ನು ಸ್ಯಾನಿಟೈಸ್ ಮಾಡಿ ಎಲ್ಲಾ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಯಿತು. ಈ ಸಂಗತಿಗಳಿಂದ ವಿಮಾನ ಎರಡು ಗಂಟೆ ತಡವಾಯಿತು.

ತನಗೆ ಕೊರೊನಾ ಪಾಸಿಟಿವ್ ಇತ್ತು ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಿದ್ದು, ಪರೀಕ್ಷೆ ನಡೆಸಲಾಯಿತು. ಆತನ ವರದಿ ಕೊರೊನಾ ಪಾಸಿಟಿವ್ ಎಂದು ಬಂದಿದೆ.

ಆದರೆ ಸರ್ಕಾರ ಹಾಗೂ ವಿಮಾನಯಾನ ಆಡಳಿತ ಸೂಚಿಸಿರುವ ಎಲ್ಲಾ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿರುವುದಾಗಿ ವಿಮಾನ ಸಂಸ್ಥೆ ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+