ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಐದನೇ ದಿನ ಚಂದಾ ಕೊಚ್ಚರ್ ದಂಪತಿ ವಿಚಾರಣೆ ನಡೆಸಿದ ಇ.ಡಿ.

|
Google Oneindia Kannada News

ನವದೆಹಲಿ, ಮೇ 17: ಜಾರಿ ನಿರ್ದೇಶನಾಲಯವು (ಇಡಿ) ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಆಕೆಯ ಪತಿ ದೀಪಕ್ ಕೊಚ್ಚರ್ ನನ್ನು ಸತತ ಐದನೇ ದಿನವಾದ ಶುಕ್ರವಾರವೂ ವಿಚಾರಣೆ ನಡೆಸಿದೆ. ವಿಡಿಯೋಕಾನ್ ನ 1875 ಕೋಟಿ ರುಪಾಯಿ ಸಾಲ ಹಗರಣದ ಸಂಬಂಧ ಈ ವಿಚಾರಣೆ ನಡೆದಿದೆ.

ದಕ್ಷಿಣ ದೆಹಲಿಯ ಖಾನ್ ಮಾರ್ಕೆಟ್ ನಲ್ಲಿರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಗೆ ಬೆಳಗ್ಗೆ 11 ಗಂಟೆ ಹೊತ್ತಿಗೆ ಈ ದಂಪತಿ ಬಂದರು. ಇಡಿಯಿಂದ ಕೇಳಲಾಗಿದ್ದ ದಾಖಲಾತಿಗಳ ಹೊಸ ಸೆಟ್ ಗಳನ್ನು ತಂದಿದ್ದರು. ವಿಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಜತೆಗಿನ ವ್ಯಾಪಾರಗಳು ಹಾಗೂ ಹಣಕಾಸು ವ್ಯವಹಾರಗಳನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!

ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗೆ ಮಂಜೂರಾದ 1875 ಕೋಟಿ ರುಪಾಯಿಯಲ್ಲಿನ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಆರೋಪ ಇದೆ. ಇದು ಎಂಟರಿಂದ ಹತ್ತು ವರ್ಷಗಳ ಹಿಂದೆ ಐಸಿಐಸಿಐ ಬ್ಯಾಂಕ್ ಹಾಗೂ ವಿಡಿಯೋಕಾನ್ ನ ಮಧ್ಯೆ ನಡೆದ ವ್ಯವಹಾರವಾಗಿದೆ.

Chanda Kocchar

ಒಂದು ಕಡೆ ಬ್ಯಾಂಕ್ ನಿಂದ ಸಾಲ ಕೊಡಿಸಿ, ಆಗ ಸಿಇಒ ಆಗಿದ್ದ ಚಂದಾ ಕೊಚ್ಚರ್ ತಮ್ಮ ಪತಿಗೆ ಸೇರಿದ ನ್ಯೂಪವರ್ ರೀನಿವಬಲ್ಸ್ ಕಂಪೆನಿಗೆ ಕಾನೂನು ಬಾಹಿರವಾಗಿ ಕೋಟ್ಯಂತರ ರುಪಾಯಿ ಪಡೆದಿದ್ದಾರೆ ಎಂಬುದು ಆರೋಪ. ಕಳೆದ ತಿಂಗಳು ಕೂಡ ಕೊಚ್ಚರ್ ದಂಪತಿಯನ್ನು ಮುಂಬೈನಲ್ಲಿ ಹಲವು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ವಿಚಾರಣೆ ನಡೆಸಲಾಗಿದೆ.

ಐಸಿಐಸಿಐ ಬ್ಯಾಂಕ್ ಹಗರಣ: ಬೆಳಗ್ಗೆ 4ರ ತನಕ ಚಂದಾ ಕೊಚ್ಚರ್ ವಿಚಾರಣೆಐಸಿಐಸಿಐ ಬ್ಯಾಂಕ್ ಹಗರಣ: ಬೆಳಗ್ಗೆ 4ರ ತನಕ ಚಂದಾ ಕೊಚ್ಚರ್ ವಿಚಾರಣೆ

ಮೇ ಹದಿಮೂರನೇ ತಾರೀಕಿನಿಂದ ಪ್ರತಿ ದಿನ ಎಂಟರಿಂದ ಒಂಬತ್ತು ಗಂಟೆ ವಿಚಾರಣೆ ನಡೆಸಲಾಗುತ್ತಿದೆ. 2017ರ ಕೊನೆಗೆ 40 ಸಾವಿರ ಕೋಟಿ ರುಪಾಯಿಯನ್ನು ವಿಡಿಯೋಕಾನ್ ಗ್ರೂಪ್ ಬಾಕಿ ಉಳಿಸಿಕೊಂಡಿತ್ತು. ಆ ನಂತರ ಬ್ಯಾಂಕ್ ನಿಂದ 2810 ಕೋಟಿ ರುಪಾಯಿಯನ್ನು ಅನುತ್ಪಾದಕ ಸಾಲ (ನಾನ್ ಪರ್ ಫಾರ್ಮಿಂಗ್ ಅಸೆಟ್ಸ್) ಎಂದು ಘೋಷಿಸಲಾಯಿತು.

English summary
Chanda Kocchar and her husband faces enquiry of ED consecutive 5th day in New Delhi on Friday related to ICICI bank Videocon loan case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X