ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ ದಂಗೆ ಆರೋಪಿಗಳಿಗೆ ಮತ್ತೆ ನಡುಕ ಶುರು

By Mahesh
|
Google Oneindia Kannada News

ನವದೆಹಲಿ, ಫೆ.1: 1984ರಲ್ಲಿ ನಡೆದಿದ್ದ ಸಿಖ್ ದಂಗೆಯ ಸಂದರ್ಭ ಹಿಂಸಾಚಾರಕ್ಕೆ ಬಲಿಯಾದ ಕುಟುಂಬಗಳ ನೋವಿಗೆ ಮತ್ತೆ ಸ್ಪಂದನೆ ಸಿಗುತ್ತಿದೆ. ಮೂರು ದಶಕಗಳ ಹಿಂದಿನ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಹಿಂದೆ ತನಿಖೆ ನಡೆಸಿದ್ದ ಪೊಲೀಸರು ಈ ಪ್ರಕರಣಕ್ಕೆ ಆಗಲೇ ಮುಕ್ತಾಯ ಹಾಡಿದ್ದಾರೆ. ಆರೋಪಿಗಳಾದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್, ಸೋನಿಯಾ ಗಾಂಧಿ ವಿರುದ್ಧ ಕೂಡಾ ಪ್ರಕರಣಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದ್ಯಕ್ಕೆ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಬಿಸಿ ಇದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ. ಚುನಾವಣಾ ಪ್ರಕ್ರಿಯೆಗಳು ಮುಗಿದ ನಂತರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ತಿಳಿದು ಬಂದಿದೆ. [ಸಿಖ್ ನರಮೇಧ : ಸಜ್ಜನ್‌ ಕುಮಾರ್ ಖುಲಾಸೆ]

Centre to set up SIT to probe 1984 anti-Sikh riots

ಇಂಥ ಹಲವು ಪ್ರಕರಣಗಳನ್ನು ಕುರಿತಂತೆ ವರದಿ ನೀಡಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಸಿ.ಮಾಥುರ್ ನೇತೃತ್ವದ ಸಮಿತಿಯು ಅಧ್ಯಯನ ನಡೆಸಿ, ಸುಮಾರು 225 ಇದೇ ರೀತಿಯ ಮರು ಪರಿಶೀಲನೆಗೆ ಅರ್ಹವಾದ ಪ್ರಕರಣದ ಕಡತಗಳು ಬಾಕಿ ಇವೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಖಾತೆ ಸಚಿವಾಲಯ ಈ ಸಮಿತಿ ರಚಿಸಿದೆ. [ಸಿಖ್ ದಂಗೆ: ರಾಹುಲ್ ಗೆ ವಿಶ್ವೇಶ್ವರ್ ಭಟ್ ಪ್ರಶ್ನೆಗಳು]

ಹಲವು ಪ್ರಕರಣಗಳಲ್ಲಿ ನಿರ್ಣಾಯಕ ಸಾಕ್ಷಿ ಪುರಾವೆಗಳನ್ನು ನಿರ್ಲಕ್ಷಿಸಲಾಗಿದ್ದು, ಅವನ್ನು ಮರು ಪರಿಶೀಲಿಸುವ ಅಗತ್ಯವಿದೆ. ಪ್ರಕರಣಗಳ ಮರು ಪರಿಶೀಲನೆಗೆ ಕಳೆದ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ಜಿ.ಸಿ.ಮಾಥುರ್ ಸಮಿತಿ ರಚಿಸಿ 45 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸಜ್ಜನ್ ಕುಮಾರ್ ಹಾಗೂ ಜಗದೀಶ್ ಟೈಟ್ಲರ್ ಅವರ ಹೆಸರುಗಳು ಪ್ರಮುಖವಾಗಿವೆ.

ಏನಿದು ಪ್ರಕರಣ?: 1984ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರು ಪ್ರಮುಖ ಆರೋಪಿಯಾಗಿದ್ದರು.

ಸಜ್ಜನ್ ಕುಮಾರ್ ಅವರು ದೆಹಲಿಯ ಕಂಟೋನ್ಮೆಂಟ್ ಬಳಿ ಸಿಖ್ ಧರ್ಮೀಯರ ಮೇಲೆ ತಮ್ಮ ಬೆಂಬಲಿಗರಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರೂ ಎಂದು ಅವರ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಲಾಗಿತ್ತು.

ನ್ಯಾಯಮೂರ್ತಿ ನಾನಾವತಿ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಸಜ್ಜನ್‌ ಕುಮಾರ್ ವಿರುದ್ಧ 2005ರಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಲ್ಲದೆ ಸಿಬಿಐ 2010 ಜನವರಿಯಲ್ಲಿ ಕುಮಾರ್ ವಿರುದ್ಧ 2 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು. (ಪಿಟಿಐ)

English summary
A government-appointed committee has recommended constitution of a SIT for re-investigation of the 1984 anti-Sikh riot cases said Union Minister Rajnath Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X