ವಾಯುಗುಣಮಟ್ಟ ನಿರ್ವಹಣೆಗಾಗಿ ರಚನೆಯಾಗಿದ್ದ ಆಯೋಗ 5 ತಿಂಗಳಲ್ಲೇ ಸ್ಥಗಿತ

ನವದೆಹಲಿ, ಮಾರ್ಚ್‌ 13: ಎನ್‌ಸಿಆರ್ ವಾಯುಗುಣಮಟ್ಟ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ರಚನೆ ಮಾಡಿದ್ದ ಆಯೋಗ ಐದು ತಿಂಗಳಲ್ಲೇ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಆಯೋಗವು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಯೋಗ ರಚನೆಗೊಂಡಿತ್ತು. ಆದರೆ, ಅದರ ಸ್ಥಾಪನೆಗೆ ಸಂಬಂಧಿಸಿದ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಮಂಡನೆಯಾಗದ ಹಿನ್ನೆಲೆಯಲ್ಲಿ ಆಯೋಗ ಮುಚ್ಚಲ್ಪಟ್ಟಿದೆ.

ರಾಷ್ಟ್ರೀಯ ರಾಜಧಾನಿ ಮತ್ತು ಅದಕ್ಕೆ ಹೊಂದಿಕೊಂಡಂತ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ರಚನೆಯಾದ ಕೇಂದ್ರ ಸರ್ಕಾರದ ಆಯೋಗ ಐದು ತಿಂಗಳಲ್ಲಿಯೇ ಸ್ಥಗಿತಗೊಂಡಿದೆ.

Centres Panel For Air Quality Management In NCR Shuts Down Within 5 Months Of Formation

ಸುಗ್ರೀವಾಜ್ಞೆ ಎಂದಿಗೂ ಕಾಯಿದೆಯಾಗಲಿಲ್ಲ. ಯಾವುದೇ ಸುಗ್ರೀವಾಜ್ಞೆಯನ್ನು ಆರು ವಾರಗಳಲ್ಲಿ ಸಂಸತ್ತಿನಲ್ಲಿ ಮಂಡಿಸಬೇಕಾಗುತ್ತದೆ. ಅದು ಆಗಲಿಲ್ಲ, ಆದ್ದರಿಂದ ಸುಗ್ರೀವಾಜ್ಞೆ ಮಹತ್ವ ಕಳೆದುಕೊಂಡಿದ್ದು, ಆಯೋಗವನ್ನು ವಿಸರ್ಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಯೋಗ ರಚನೆಯಾದ ಆರು ವಾರಗಳಲ್ಲಿ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಮಂಡನೆಯಾಗದ ಹಿನ್ನೆಲೆಯಲ್ಲಿ ಅದು ಮುಚ್ಚಲ್ಪಟ್ಟಿದೆ ಎಂದು ಕೇಂದ್ರ ಪರಿಸರ ಕಾರ್ಯದರ್ಶಿ ಆರ್ ಪಿ ಗುಪ್ತಾ ಮಾಹಿತಿ ನೀಡಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂಎಂ ಕುಟ್ಟಿ ಆಯೋಗದ ಅಧ್ಯಕ್ಷರಾಗಿದ್ದರು. ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಗುಣಮಟ್ಟ ತೀರಾ ಕಳಪೆಯಾಗಿದೆ. ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಮಾಲಿನ್ಯ ವಿಪರೀತವಾಗುತ್ತದೆ, ಇದರಿಂದ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+