ಸೆಲ್ಫೀ ನಿಷೇಧಿತ ವಲಯಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸೂಚನೆ
ನವದೆಹಲಿ, ಏಪ್ರಿಲ್ 04: ಸೆಲ್ಫೀ ತೆಗೆದುಕೊಳ್ಳುವುದು ಒಂದು ರೋಗವಾಗಿದೆ. ದಿನನಿತ್ಯದ ಅಭ್ಯಾಸವಾದಂತಾಗಿದೆ. ಅದರಲ್ಲಿಯೂ ಯಾರೂ ಹೋಗಲು ಸಾಧ್ಯವಾಗಂತಹ ಜಾಗಗಳಿಗೆ ಹೋಗಿ ಸೆಲ್ಫೀ ತೆಗೆಯುವುದಂತೂ ಸಾಮಾನ್ಯವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಇದರಿಂದ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಎಷ್ಟೇ ಸಾವುಘಲು ಸಂಭವಿಸಿದರೂ ತಮಗೇನೂ ತಿಳಿದೇ ಇಲ್ಲ ಎಂಬಂತೆ ಸೆಲ್ಫೀ ತೆಗೆಯುವುದರಲ್ಲಿ ಮುಳಿಗಿರುತ್ತಾರೆ. ನೀರು, ಎತ್ತರದ ಬೆಟ್ಟ, ಮರದ ಮೇಲೆ, ನೀರಿನೊಳಗೆ, ಜಾರುವ ಬಂಡೆಯ ತುದಿಯಲ್ಲಿ ಹೀಗೆ ಹಲವಾರು ಅಪಾಯದ ಸ್ಥಳಗಳಲ್ಲಿ ಸೆಲ್ಪೀ ತೆಗೆಯುವ ಕ್ರೇಜ್ ಹೆಚ್ಚಾಗಿದೆ.
ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರವಾಸಿ ತಾಣಗಳಲ್ಲಿ ಸೆಲ್ಫೀ ನಿಷೇಧಿತ ವಲಯವನ್ನು ಗುರುತಿಸಿ ಮಾಹಿತಿ ನೀಡುವಂತೆ ಎಲ್ಲಾ ಸರ್ಕಾರಗಳಿಗೆ ಸೂಚನೆ ನೀಡಿದೆ.

ಈ ಕುರಿತು ಮಂಗಳವಾರ ಲೋಕಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗರಾಮ್ ಅಹಿರ್ ಉತ್ತರಿಸಿ, ಸೆಲ್ಫಿ ತೆಗೆಯುವಾಗ ಸಂಭವಿಸುವ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಪ್ರವಾಸೋದ್ಯಮ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರವಾಸಿಗರನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಜನಪ್ರಿಯ ಪ್ರವಾಸಿ ತಾಣಗಳಲ್ಲಿ ನೋ-ಸೆಲ್ಫಿ-ಝೋನ್ ಫಲಕ ಹಾಕುವುದು ಮತ್ತು ಅಪಘಾತ ವಲಯಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವ ಮೂಲಕ ಪ್ರವಾಸಿಗರ ರಕ್ಷಣೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಮೂಲಕ ಸಂಭವನೀಯ ಅಪಾಯವನ್ನು ತಡೆಗಟ್ಟುವುದು ಆಯಾ ರಾಜ್ಯಗಳ ಜವಾಬ್ದಾರಿ ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ತಾಣಗಳಲ್ಲಿ ಸ್ವಯಂ ಸೇವಕರಾಗಲು ಉದ್ದೇಶಿಸುವವರನ್ನು ಮತ್ತು ಪ್ರವಾಸಿ ಪೊಲೀಸರನ್ನು ನಿಯೋಜಿಸುವ ಕುರಿತು ಚಿಂತಿಸಲು ರಾಜ್ಯಗಳಿಗೆ ಮನವಿ ಮಾಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಿದೆ.












Click it and Unblock the Notifications