• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭ್ರಷ್ಟಾಚಾರ ಆರೋಪ: 12 ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ ಕೇಂದ್ರ

|
   ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮೋದಿಯಿಂದ ದಿಟ್ಟ ಕಾರ್ಯ | Oneindia Kannada

   ನವದೆಹಲಿ, ಜೂನ್ 10: ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಭಾರಿ ಪೆಟ್ಟು ನೀಡಿ, ಭ್ರಷ್ಟಾಚಾರ ಪರವಹಿಸುವ ಉನ್ನತ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.

   ಭ್ರಷ್ಟಾಚಾರದ ಆರೋಪ ಹೊಂದಿದ್ದ 12 ಮಂದಿ ಹಿರಿಯ ಐಟಿ ಅಧಿಕಾರಿಗಳಿಗೆ ಕೇಂದ್ರ ಸರ್ಕಾರವು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿದೆ.

   ಕೊನೆಗೂ ಸಿಬಿಐ ಮುಂದೆ ಹಾಜರಾದ ದೀದಿ ಆಪ್ತ ಐಪಿಎಸ್‌ ಅಧಿಕಾರಿ

   ಹಣಕಾಸು ಇಲಾಖೆ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, 12 ಹಿರಿಯ ಅಧಿಕಾರಿಗಳನ್ನು ಮನೆಗೆ ಕಳುಹಿಸಿರುವ ನಿರ್ಧಾರದ ಹಿಂದೆ ಇಲಾಖೆಯನ್ನು ಸ್ವಚ್ಛ ಮಾಡುವ ಆಶಯ ಇದೆ.

   ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪ ಹೊಂದಿರುವ 12 ಹಿರಿಯ ಅಧಿಕಾರಿಗಳನ್ನೇ ಮನೆಗೆ ಕಳುಹಿಸಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊಬಿದ್ದಿಲ್ಲವಾದರೂ ಇದೇ ಕಾರಣಕ್ಕೆ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.

   ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿದ್ದ ನೊಯ್ಡಾದ ಐಆರ್‌ಎಸ್ ಅಧಿಕಾರಿ ಒಬ್ಬರು, 3.17 ಕೋಟಿ ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿರುವ ಆರೋಪ ಹೊತ್ತಿರುವ ಮತ್ತೊಬ್ಬ ಹಿರಿಯ ಅಧಿಕಾರಿ, ಐಟಿ ಇಲಾಖೆಯ ಆಯುಕ್ತರೊಬ್ಬರು, ಸಿಬಿಐ ನ ಹಣಕಾಸು ವಿಭಾಗದ ಮುಖ್ಯ ಅಧಿಕಾರಿ ಹೀಗೆ ಹಲವು ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿ ನೀಡಿ ಕಳುಹಿಸಲಾಗಿದೆ.

   English summary
   The central government sends 12 senior IT officers on compulsory retirement because they were on corruption charges.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X