• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇ.3ರ ಬಳಿಕ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ

|

ನವದೆಹಲಿ, ಏಪ್ರಿಲ್.29: ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ಪಿಡುಗಿನಿಂದಾಗ ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿಯಿದೆ. ಭಾರತ ಲಾಕ್ ಡೌನ್ ನಿಂದಾಗಿ ಹಲವು ವಲಯಗಳಿಗೆ ಒಂದೊಂದು ರೀತಿ ಸಮಸ್ಯೆಗಳು ಎದುರಾಗಿದೆ. ಶಿಕ್ಷಣ ವಲಯಕ್ಕೂ ಲಾಕ್ ಡೌನ್ ಬಿಸಿ ತಟ್ಟಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಭಾರತದಲ್ಲಿ ಸಿಬಿಎಸ್ಇ ಪರೀಕ್ಷೆಗಾಗಿ ಕಾಯುತ್ತಿರುವ ಹಾಗೂ ಈಗಾಗಲೇ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ಮತ್ತಷ್ಟು ದಿನ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಸಿಬಿಎಸ್ಇ ಕೆಲವು ಪರೀಕ್ಷೆಗಳು ಹಾಗೂ ಫಲಿತಾಂಶಗಳು ಮತ್ತಷ್ಟು ವಿಳಂಬವಾಗಲಿವೆ ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ತಿಳಿಸಿದ್ದಾರೆ.

Fact Check: ಸಿಬಿಎಸ್ಇ ಕ್ಲಾಸ್ 10, 12 ರ ಪರೀಕ್ಷೆ ದಿನಾಂಕ ಘೋಷಣೆ?

ದೇಶದಲ್ಲಿ ನಡೆದ ಸಿಬಿಎಸ್ಇ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಬೇಕಿತ್ತು. ಆದರೆ ಭಾರತ ಲಾಕ್ ಡೌನ್ ನಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಇನ್ನೆರೆಡು ತಿಂಗಳು ಮುಂದೂಡಿಕೆ ಆಗಲಿದೆ ಎಂದು ಆನುರಾಗ್ ತ್ರಿಪಾಠಿ ತಿಳಿಸಿದ್ದಾರೆ.

ಶೇ.70ರಷ್ಟು ಮೌಲ್ಯಮಾಪನ ನಡೆಯಬೇಕಿದೆ:

ಭಾರತ ಲಾಕ್ ಡೌನ್ ಹಿನ್ನೆಲೆ ದೇಶದಲ್ಲಿ ಸಿಬಿಎಸ್ಇ ಶೇ.70ರಷ್ಟು ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ತಿಳಿಸಿದ್ದಾರೆ. ಇದರ ಜೊತೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸಿಬಿಎಸ್ಇ ಚಿಂತನೆ ನಡೆಸುತ್ತಿದೆ.

ದೇಶದಲ್ಲಿ ಸಿಬಿಎಸ್ಇ 12 ವಿಷಯಗಳಿಗೆ ಅಂತಿಮ ಪರೀಕ್ಷೆಗಳನ್ನು 10 ದಿನಗಳಲ್ಲಿ ನಡೆಸುವುದಕ್ಕೆ ಚಿಂತಿಸಲಾಗುತ್ತಿದೆ. ಮೇ.03ರ ಬಳಿಕ ಕೇಂದ್ರ ಸರ್ಕಾರವು ಲಾಕ್ ಡೌನ್ ವಿಸ್ತರಿಸದೇ ಅನುಮತಿ ನೀಡಿದ್ದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫೈನಲ್ ಪರೀಕ್ಷೆಗಳನ್ನು ಆಯೋಜಿಸಲು ತೀರ್ಮಾನಿಸಲಾಗುತ್ತದೆ.

English summary
CBSE Students Have To Wait For Another Two Months. Second PUC Exam Contect After May.03 If Get Permission From Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X