ಸಿಬಿಎಸ್‌ಇ: ಪರೀಕ್ಷೆಗಳಿಗೆ ಗೈರಾದ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಮೌಲ್ಯಮಾಪನ

ನವದೆಹಲಿ, ಮೇ 25: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ವರ್ಷಪೂರ್ತಿ ಯಾವುದೇ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ದೂರವಾಣಿ ಮೌಲ್ಯಮಾಪನವನ್ನು ನಡೆಸಲು ಶಾಲೆಗಳಿಗೆ ಅವಕಾಶ ನೀಡಿದೆ. ಈ ಅವಕಾಶವು 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.

10 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ನಡೆಯದ ಕಾರಣ, ಆನ್‌ಲೈನ್‌ ಮೌಲ್ಯಮಾಪನ ಪರೀಕ್ಷೆ ನಡೆಸಲಾಗಿದ್ದು, ಕೆಲ ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಯಿಂದಾಗಿ ಆಯಾ ಶಾಲೆಗಳು ನಡೆಸುವ ಆನ್‌ಲೈನ್ ಮೌಲ್ಯಮಾಪನಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ವಿದ್ಯಾರ್ಥಿಗಳಿಗೆ ದೂರವಾಣಿ ಮೌಲ್ಯಮಾಪನ ನಡೆಸಲು ಬೋರ್ಡ್ ಶಾಲೆಗಳಿಗೆ ಅವಕಾಶ ನೀಡಿದೆ. ಇನ್ನು ಈ ಅವಕಾಶವು ಕಡಿಮೆ ಆದಾಯದ ಆರ್ಥಿಕ ಹಿನ್ನೆಲೆ ಹೊಂದಿರುವ, ಈ ಕಾರಣದಿಂದಾಗಿ ಶುಲ್ಕ ಭರಿಸಲಾಗದೆ ಆನ್‌ಲೈನ್ ತರಗತಿಗೆ ಹಾಜರಾಗಲು ಅವಕಾಶ ದೊರಕದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ.

ಆಫ್‌ಲೈನ್ / ಆನ್‌ಲೈನ್ ಅಥವಾ ಟೆಲಿಫೋನಿಕ್ ಮೌಲ್ಯಮಾಪನ : "ಶಾಲೆಯು ನಡೆಸಿದ ಯಾವುದೇ ಮೌಲ್ಯಮಾಪನಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗದಿದ್ದರೆ, ಶಾಲೆಯು ಆ ವಿದ್ಯಾರ್ಥಿಗಳಿಗೆ ಆಫ್‌ಲೈನ್ / ಆನ್‌ಲೈನ್ ಅಥವಾ ಟೆಲಿಫೋನಿಕ್ ಮೂಲಕ ಮೌಲ್ಯಮಾಪನ ನಡೆಸಿ ಮೌಲ್ಯಮಾಪನ ನಡೆಸಿದ ಸಾಕ್ಷ್ಯಗಳನ್ನು ದಾಖಲಿಸಬಹುದು. ಇದರಿಂದಾಗಿ ಸಿಬಿಎಸ್‌ಇ 10 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ಅಂಕಗಳನ್ನು ದಾಖಲಿಸಲು ಶಾಲೆಗಳಿಗೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.

ಗಮನಿಸಿ: ಸಂಪರ್ಕ ಸಾಧ್ಯವಾಗದಿದ್ದರೆ ಗೈರುಹಾಜರಿ

ಗಮನಿಸಿ: ಸಂಪರ್ಕ ಸಾಧ್ಯವಾಗದಿದ್ದರೆ ಗೈರುಹಾಜರಿ

ವಿದ್ಯಾರ್ಥಿಗಳಿಗೆ ಈ ಅವಕಾಶ ನೀಡಲಾಗಿದ್ದರೂ ಶಾಲೆಯಲ್ಲಿ ವಿದ್ಯಾರ್ಥಿಗಳು ನೀಡಿರುವ ಫೋನ್‌ ಸಂಖ್ಯೆಯಲ್ಲಿ ಯಾವುದೇ ಸಮಸ್ಯೆಯಿದ್ದರೆ, ಇದರಿಂದಾಗಿ ಶಾಲೆಗಳ ಸಿಬ್ಬಂದಿಗಳಿಗೆ ಆ ವಿದ್ಯಾರ್ಥಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ಆ ವಿದ್ಯಾರ್ಥಿಯನ್ನು ಗೈರುಹಾಜರಿ ಎಂದು ಗುರುತಿಸಲಾಗುತ್ತದೆ.

ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ ಶಿಕ್ಷಕರ ಸಮಿತಿ

ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ ಶಿಕ್ಷಕರ ಸಮಿತಿ

ಫಲಿತಾಂಶವನ್ನು ಸಿದ್ದಪಡಿಸಲು ಗಣಿತ, ಸಾಮಾಜಿಕ ವಿಜ್ಞಾನ, ವಿಜ್ಞಾನ, ಮತ್ತು ಭಾಷೆಗಳ ಇಬ್ಬರು ಶಿಕ್ಷಕರು ಸೇರಿದಂತೆ ಐದು ಶಿಕ್ಷಕರ ಸಮಿತಿಯನ್ನು ರಚಿಸುವಂತೆ ಮಂಡಳಿ ಶಾಲೆಗಳಿಗೆ ಸೂಚಿಸಿದೆ. ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಈ ವಿಷಯಗಳ ಇತರ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳಿಗೆ ಅಂಕವನ್ನು ನೀಡಬಹುದು. ಇದಲ್ಲದೆ, ನೆರೆಹೊರೆಯ ಶಾಲೆಗಳ ಇಬ್ಬರು ಶಿಕ್ಷಕರನ್ನು ಶಾಲೆಯು ಸಮಿತಿಯ ಬಾಹ್ಯ ಸದಸ್ಯರನ್ನಾಗಿ ನೇಮಿಸಬಹುದು ಎಂದು ಸಿಬಿಎಸ್ಇ ಹೇಳಿದೆ.

ವರ್ಷಪೂರ್ತಿ ನಡೆಸಿದ ವಿವಿಧ ಪರೀಕ್ಷೆಗಳ ಆಧಾರದಲ್ಲಿ ಅಂಕ

ವರ್ಷಪೂರ್ತಿ ನಡೆಸಿದ ವಿವಿಧ ಪರೀಕ್ಷೆಗಳ ಆಧಾರದಲ್ಲಿ ಅಂಕ

ಈ ವರ್ಷ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿರುವುದರಿಂದ, ಶಾಲೆಯು ವರ್ಷಪೂರ್ತಿ ನಡೆಸುವ ವಿವಿಧ ಪರೀಕ್ಷೆಗಳ ಆಧಾರದ ಮೇಲೆ ಅಂತಿಮ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವಂತೆ ಶಾಲೆಗಳಿಗೆ ತಿಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ, ಗರಿಷ್ಠವೆಂದರೆ 40 ಅಂಕಗಳನ್ನು ನೀಡಬಹುದಾಗಿದೆ.

ಮಂಡಳಿಯು ನಿರ್ಧರಿಸಿದ ಮಾನದಂಡದ ಪ್ರಕಾರ ಶಾಲೆಗಳು ನಡೆಸುವ ಮಿಡ್‌ಟರ್ಮ್‌ ಅಥವಾ ಯುನಿಟ್‌ ಪರೀಕ್ಷೆಗಳು 30 ಅಂಕಗಳು ಮತ್ತು ಪಿರಿಯೋಡಿಕಲ್‌ ಪರೀಕ್ಷೆಗಳು 10 ಅಂಕಗಳನ್ನು ಒಳಗೊಂಡಿರುತ್ತದೆ. ಮಂಡಳಿಯು ನಿಗದಿಪಡಿಸಿದ ಈ ವಿಧಾನವನ್ನು ವಿದ್ಯಾರ್ಥಿಗಳಿಗೆ ಫಲಿತಾಂಶ ಮೌಲೀಕರಿಸುವ ಸಂದರ್ಭ ಅನುಸರಿಸಲಾಗುತ್ತದೆ. ಯಾವುದೇ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗುತ್ತದೆ.

ಫಲಿತಾಂಶ ಸಲ್ಲಿಕೆಗೆ ಜೂನ್ 30 ರ ಗಡುವು

ಫಲಿತಾಂಶ ಸಲ್ಲಿಕೆಗೆ ಜೂನ್ 30 ರ ಗಡುವು

ಕೊರೊನಾ ಕಾರಣದಿಂದಾಗಿ 2020 ರಂತೆ, ಈ ವರ್ಷವೂ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆ ಫಲಿತಾಂಶದ ವಿಚಾರದಲ್ಲಿ ಕೆಲವೊಂದು ಗೊಂದಲಗಳು ಮನೆ ಮಾಡಿದ್ದವು. ಈ ನಡುವೆ ಸಿಬಿಎಸ್ಇ ಶಾಲೆಗಳು ಮೌಲೀಕರಿಸಿದ 10 ನೇ ತರಗತಿ ಮೌಲ್ಯಮಾಪನ ಅಂಕಗಳನ್ನು ಜೂನ್ 30 ರ ಒಳಗೆ ಸಲ್ಲಿಸುವಂತೆ ಸಿಬಿಎಸ್ಇ ತನ್ನ ಅಧೀನದ ಶಾಲೆಗಳಿಗೆ ಸೂಚಿಸಿದೆ.

ಜೂನ್ ಮೂರನೇ ವಾರದಲ್ಲಿ ಪ್ರಕಟವಾಗಬೇಕಿದ್ದ 10 ನೇ ತರಗತಿ ಫಲಿತಾಂಶವನ್ನು ಸದ್ಯ ಮುಂದೂಡಲಾಗಿದೆ. ಈಗ ಫಲಿತಾಂಶವನ್ನು ಜುಲೈ ಮೊದಲ ವಾರದೊಳಗೆ ಘೋಷಿಸುವ ನಿರೀಕ್ಷೆಯಿದೆ. ಮಂಡಳಿಯು ಫಲಿತಾಂಶದ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+