ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ದಾಳಿ

By Mahesh
|
Google Oneindia Kannada News

ನವದೆಹಲಿ, ಡಿ. 15: 'ನನ್ನ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅದರೆ, ಕೇಜ್ರಿವಾಲ್ ಹೇಳಿಕೆಯನ್ನು ಸಿಬಿಐ ಅಲ್ಲಗೆಳೆದಿದೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿಗೆ ಬೀಗ ಹಾಕಲಾಗಿದೆ. ಮುಖ್ಯಮಂತ್ರಿಗಳ ಕಚೇರಿ ಕಟ್ಟಡದಲ್ಲೇ ಈ ಕಚೇರಿಯೂ ಇದೆ ಅಷ್ಟೇ. ಸಿಎಂ ಕಚೇರಿ ಮೇಲೆ ದಾಳಿ ನಡೆಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.[ಅರವಿಂದ್ vs ಮೋದಿ ಟ್ರೆಂಡಿಂಗ್, ಬಿಸಿ ಬಿಸಿ ಚರ್ಚೆ]

Kejriwal accuses PM of cowardice

ಗುತ್ತಿಗೆ ಆಧಾರಿತ ನೌಕರರ ನೇಮಕಾತಿ ಅವ್ಯವಹಾರದ ಹಿನ್ನಲೆಯಲ್ಲಿ ದಾಳಿ ನಡೆಸಿದ ಸಿಬಿಐ ತಂಡ ಸುಮಾರು 2 ಗಂಟೆಗಳ ಕಾಲ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡು, ಕಚೇರಿಗೆ ಬೀಗ ಹಾಕಿದ್ದಾರೆ.[ಕಿಚ್ಚು ಹಚ್ಚಿದ ಸಿಬಿಐ ದಾಳಿ,ಪ್ರಮುಖ ಘಟನಾವಳಿಗಳು]

ಆದರೆ, ಇಷ್ಟಕ್ಕೆ ತೃಪ್ತರಾಗದ ಅರವಿಂದ್ ಕೇಜ್ರಿವಾಲ್ ಅವರು ಮತ್ತೊಂದು ಟ್ವೀಟ್ ಮಾಡಿ ಮೋದಿ ಅವರು ರಾಜಕೀಯ ತಂತ್ರಗಳು ಈ ಮಟ್ಟಕ್ಕೆ ಇಳಿದಿದೆಯೇ? ಹೇಡಿತನದ ಹಾದಿ ಹಿಡಿದಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.


ನಂತರ ಮೋದಿ ಅವರನ್ನು ಹೇಡಿ, ಸೈಕೋಪಾತ್ ಎಂದು ಜರೆದಿದ್ದಾರೆ.

ಮೋದಿ ಅವರು ಯಾವ ಫೈಲ್ ಬೇಕೆಂದು ಕೇಳಲಿ, ರಾಜೇಂದ್ರ ಅವರ ಕಚೇರಿ ಮೇಲೆ ದಾಳಿ ನೆಪದಲ್ಲಿ ನನ್ನ ಕಚೇರಿಯ ಕಡತಗಳನ್ನು ಸಿಬಿಐ ಪರಿಶೀಲಿಸಿದೆ ಎಂದಿದ್ದಾರೆ.

English summary
Delhi Chief Minister Arvind Kejriwal has claimed that the Central Bureau of Investigation (CBI) has raided his office. The claim has been made on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X