'ನನ್ನನ್ನು ಬಂಧಿಸುವಂತೆ ಒತ್ತಡ ಹೇರಿದ್ದರಿಂದ ಸಿಬಿಐ ಅಧಿಕಾರಿ ಆತ್ಮಹತ್ಯೆ': ಮನೀಶ್ ಸಿಸೋಡಿಯಾ
ನವದೆಹಲಿ ಸೆಪ್ಟೆಂಬರ್ 05: ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಯೊಬ್ಬರು ಆಪ್ ನಾಯಕನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವಂತೆ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಸಂವೇದನಾಶೀಲ ಹೇಳಿಕೆಯನ್ನು ನೀಡಿದ್ದಾರೆ. ಅಧಿಕಾರಿಗಳ ಮೇಲೆ ಏಕೆ ಇಷ್ಟೊಂದು ಒತ್ತಡ ಹೇರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಸೋಡಿಯಾ ಕೇಳಿದ್ದಾರೆ.
''ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವಂತೆ ಸಿಬಿಐ ಅಧಿಕಾರಿಯೊಬ್ಬರ ಮೇಲೆ ಒತ್ತಡ ಹೇರಲಾಗಿತ್ತು. ಅವರು ಮಾನಸಿಕ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಧಿಕಾರಿಗಳು ಇಂತಹ ತೀವ್ರ ಕ್ರಮಗಳನ್ನು ಕೈಗೊಳ್ಳಲು ಏಕೆ ಒತ್ತಡ ಹೇರುತ್ತಿದ್ದಾರೆ ಎಂದು ನಾನು ಪ್ರಧಾನಿಯನ್ನು ಕೇಳಲು ಬಯಸುತ್ತೇನೆ''ಎಂದು ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಿಬಿಐನ ಉಪ ಕಾನೂನು ಸಲಹೆಗಾರ ಜಿತೇಂದ್ರ ಕುಮಾರ್ ಎಂಬುವವರು ಕಳೆದ ವಾರ ದಕ್ಷಿಣ ದೆಹಲಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ 6.45ರ ಸುಮಾರಿಗೆ ಡಿಫೆನ್ಸ್ ಕಾಲೋನಿಯಲ್ಲಿ ಈ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ ಇವರ ಸಾವಿನ ಬಗ್ಗೆ ತನಿಖೆ ನಡೆದಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹೊರತಂದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ತನಿಖೆಗಾಗಿ ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ಕಳೆದ ತಿಂಗಳು ಸಿಸೋಡಿಯಾ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿತ್ತು.
ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ (AAP) ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ವಾಗ್ದಾಳಿ ನಡೆಸಿದ್ದು, ಪತ್ರಿಕಾಗೋಷ್ಠಿಯಲ್ಲಿ 'ಸ್ಟಿಂಗ್ ವಿಡಿಯೊ' ಬಿಡುಗಡೆ ಮಾಡಿದೆ. ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ದೆಹಲಿಯ ಮದ್ಯ ವ್ಯಾಪಾರಿಗಳು ಭಯಪಡಬೇಡಿ. ಮನೀಶ್ ಸಿಸೋಡಿಯಾ ಮತ್ತು ಅರವಿಂದ ಕೇಜ್ರಿವಾಲ್‌ಗೆ ಎಷ್ಟು ಕಮಿಷನ್ ನೀಡಬೇಕೆಂದು ವಿಡಿಯೊ ಮಾಡಿ ಎಂದು ಒತ್ತಾಯಿಸಿದರು. ಈಗ ಮನೀಶ್ ಸಿಸೋಡಿಯಾ ಜೀ, ನಿಮಗೆ ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಸಂಬಿತ್ ಪಾತ್ರಾ ಹೇಳಿದರು.
''ಕೇಜ್ರಿವಾಲ್ ಜಿ ಅಧಿಕಾರಕ್ಕೆ ಬಂದಾಗ, ಯಾವುದೇ ಭ್ರಷ್ಟಾಚಾರದ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಜನರನ್ನು ಕೇಳಿದರು. ಇದೇ ಆಗಿದ್ದು. ಸ್ಟಿಂಗ್ ಮಾಸ್ಟರ್ ಕೇಜ್ರಿವಾಲ್ ಜಿ ವಿರುದ್ಧ ಕುಟುಕು ಕಾರ್ಯಾಚರಣೆ ನಡೆದಿದೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ. ವಿಡಿಯೊದಲ್ಲಿ ಬಹಿರಂಗವಾದ ವಿಧಾನವೆಂದರೆ ಲಾಭದ ಶೇ 80 ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಮತ್ತು ಅವರ ಸ್ನೇಹಿತರಿಗೆ ಹೋಗುತ್ತದೆ. ಮೊದಲು, ನೀವು ನಮಗೆ ನಮ್ಮ ಶೇ 80 ಕಮಿಷನ್ ನೀಡಿ ಮತ್ತು ನಂತರ ಶೇ 20 ಅನ್ನು ನೀವು ಹೇಗೆ ಸಾಧ್ಯವೋ ಅದನ್ನು ಮಾರಾಟ ಮಾಡಿ, ನಾವು ಹೆದರುವುದಿಲ್ಲ. ಇದು ಕೇಜ್ರಿವಾಲ್ ಅವರ ನೀತಿಯಾಗಿದೆ,'' ಎಂದು ಆಪಾದಿತ ಸ್ಟಿಂಗ್ ವಿಡಿಯೊವನ್ನು ಪ್ಲೇ ಮಾಡಿದ ನಂತರ ಸಂಬಿತ್ ಪಾತ್ರಾ ಹೇಳಿದರು.
ಮದ್ಯದ ಬಾಟಲಿಯೊಂದಿಗೆ ಒಂದು ಬಾಟಲಿಯನ್ನು ಉಚಿತವಾಗಿ ನೀಡುತ್ತಿದ್ದರೂ ಲಾಭ ಗಳಿಸುತ್ತಿದ್ದರು. ಅವರು ಹೇಗೆ ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದಾರೆ ಎಂದಿದ್ದಾರೆ ಸಂಬಿತ್ ಪಾತ್ರಾ.












Click it and Unblock the Notifications