• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿವಿಸಿ ವರದಿಗೆ ಪ್ರತಿಕ್ರಿಯಿಸಲು ಸಮಯ ಕೇಳಿದ ಅಲೋಕ್ ವರ್ಮಾ

|

ನವದೆಹಲಿ, ನವೆಂಬರ್ 19: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಚಕ್ಷಣಾ ದಳ(ಸಿವಿಸಿ) ನೀಡಿದ ವರದಿಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಬಳಿ ಅಲೋಕ್ ವರ್ಮಾ ಸಮಯ ಕೇಳಿದ್ದಾರೆ.

ಸಿವಿಸಿ ವರದಿಗೆ ಇಂದು ಮಧ್ಯಾಹ್ನ 01 ಗಂಟೆಯ ಒಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಆದರೆ ಉತ್ತರಿಸಲು ವರ್ಮಾ ಅವರು ಮತ್ತಷ್ಟು ಸಮಯ ಕೇಳಿದ ಹಿನ್ನೆಲೆಯಲ್ಲಿ ಇಂದು ಅಪರಾಹ್ನ 4 ಗಂಟೆಗೆ ಪ್ರತಿಕ್ರಿಯೆಯ ವರದಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಗಡುವು ನೀಡಿದೆ.

ಸಿಬಿಐ ವಿವಾದ: ಅಲೋಕ್ ವರ್ಮಾ ವಿರುದ್ಧ ಮಿಶ್ರ ಮಾಹಿತಿ ವರದಿ

ಲಂಚ ಪಡೆದ ವಿವಾದಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿರುದ್ಧ ಕೇಂದ್ರ ವಿಚಕ್ಷಣಾ ದಳ ಮಿಶ್ರ ಮಾಹಿತಿಯನ್ನೊಳಗೊಂಡ ವರದಿಯನ್ನು ಸುಪ್ರೀಂ ಕೋರ್ಟಿಗೆ ನೀಡಿತ್ತು.

ಅಲೋಕ್ ವಿರುದ್ಧದ ತನಿಖೆ ಪೂರ್ಣ : ಕ್ಷಮೆಯೊಂದಿಗೆ ವರದಿ ಸಲ್ಲಿಕೆ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಕೇಂದ್ರ ತನಿಖಾ ದಳದ ಹಂಗಾಮಿ ನಿರ್ದೇಶಕರನ್ನಾಗಿ ತೆಲಂಗಾಣ ಮೂಲದ ನಾಗೇಶ್ವರ್ ರಾವ್ ಅವರನ್ನು ನೇಮಿಸಿತ್ತು.

English summary
CBI Director Alok Verma sought more time to file a reply on CVC report. The reply which was to be filed at 1pm today will now be filed around 4pm. Supreme Court gave him time to file reply till 4 pm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X