ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು: ಫ್ರೀ ವೈ-ಫೈ ಸೇರಿದಂತೆ ಹಲವು ಸೌಲಭ್ಯ

|
Google Oneindia Kannada News

ನವದೆಹಲಿ, ಡಿಸೆಂಬರ್ 09: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಇಂದು ಬೆಳಿಗ್ಗೆ 10 ಗಂಟೆಯಿಂದ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಕೃಷಿ ಕಾನೂನುಗಳ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಚರ್ಚೆಯು ಪ್ರಮುಖ ವಿಷಯವಾಗಿತ್ತು. ಜೊತೆಗೆ ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತಾಗಿಯು ಚರ್ಚೆ ನಡೆಸಲಾಗಿದೆ.

Cabinet briefing Highlights : Schemes announced in the Cabinet Meeting on Dec 9, 2020

ಕ್ಯಾಬಿನೆಟ್‌ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಈ ಕೆಳಗಿವೆ:

-ಪಿಎಂ-ವಾನಿ ಅಡಿಯಲ್ಲಿ ಸಾರ್ವಜನಿಕವಾಗಿ ಫ್ರೀ ವೈ-ಫೈ ಒದಗಿಸುವ ಸೌಲಭ್ಯವನ್ನು ಸರ್ಕಾರ ಪ್ರಕಟಿಸಿದೆ. ಪಿಎಂ ವೈಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ (ಪಿಎಂ-ವಾನಿ) ವೇದಿಕೆಯಡಿ ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸದೆ ಸಾರ್ವಜನಿಕ ಡೇಟಾ ಕಚೇರಿಗಳ ಮೂಲಕ ಸಾರ್ವಜನಿಕ ವೈ-ಫೈ ಸೇವೆಯನ್ನು ಒದಗಿಸಲು ಮತ್ತು ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸಿಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

- ಎರಡು ವರ್ಷದವರೆಗೆ ಹೊಸ ನೇಮಕಾತಿ ಮಾಡಿಕೊಳ್ಳುವ ಉದ್ಯೋಗದಾತರಿಗೆ, ಉದ್ಯೋಗಿಗಳ ಪರವಾಗಿ 22,810 ಕೋಟಿ ರೂಪಾಯಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

- ಆತ್ಮನಿರ್ಭರ ಭಾರತ್ ರೋಜ್‌ಗಾರ್ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

- 1 ಕೋಟಿ ದತ್ತಾಂಶ ಕೇಂದ್ರಗಳನ್ನು (ಡೇಟಾ ಸೆಂಟರ್) ಸ್ಥಾಪಿಸಲು ಅನುಮೋದನೆ ಸಿಕ್ಕಿದೆ.

- ಲಕ್ಷದ್ವೀಪಕ್ಕೆ ವೇಗದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಒದಗಿಸಲು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಸ್ಥಾಪನೆ

- ಎಲ್ಲಾ ಹೊಸ ಔಪಚಾರಿಕ ಉದ್ಯೋಗಗಳಿಗೆ ಸರ್ಕಾರವು ಪ್ರತಿ ಉದ್ಯೋಗಿಗೆ ಮತ್ತು ಉದ್ಯೋಗದಾತರಿಗೆ ಶೇಕಡಾ 12ರಷ್ಟು ಪಾಲನ್ನು ಮರುಪಾವತಿ ಮಾಡಲಿದೆ.

- ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಒದಗಿಸಲು ಯುಎಸ್ಒಎಫ್ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ

English summary
Here are all the schemes announced in the Cabinet briefing on december 9, 2020. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X