1 ಕೋಟಿ ಉದ್ಯೋಗ ಸೃಷ್ಟಿ: ಎಲೆಕ್ಟ್ರಾನಿಕ್ಸ್ ನೀತಿಗೆ ಸಂಪುಟ ಒಪ್ಪಿಗೆ
ನವದೆಹಲಿ, ಫೆಬ್ರವರಿ 20: ನೂತನ ಎಲೆಕ್ಟ್ರಾನಿಕ್ಸ್ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2015ರ ವೇಳೆಗೆ $400 ಬಿಲಿಯನ್ ವಿದ್ಯುನ್ಮಾನ ಪರಿಕರಗಳ ಉತ್ಪಾದನೆಯ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯಿರುವ ಈ ನೀತಿಯು ಒಂದು ಕೋಟಿ ಉದ್ಯೋಗ ಸೃಷ್ಟಿಸಲಿದೆ.
'2025ರ ವೇಳೆಗೆ $400 ಬಿಲಿಯನ್ ಪರಿಸರ ವ್ಯವಸ್ಥೆಯ ಗುರಿ ಹೊಂದಿದ್ದೇವೆ. ಇದು ಒಂದು ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡಲಿದೆ' ಎಂದು ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಸಂಪುಟ ಸಭೆಯ ಬಳಿಕ ತಿಳಿಸಿದರು.
ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ 2019, ದೇಶದಲ್ಲಿ ಮೊಬೈಲ್ ಉತ್ಪಾದನೆಯನ್ನು ವೃದ್ಧಿಸುವ ಪ್ರಸ್ತಾವ ಹೊಂದಿದೆ. $190 ಬಿಲಿಯನ್ ವೆಚ್ಚದ (13 ಲಕ್ಷ ಕೋಟಿ ರೂಪಾಯಿ) 1 ಬಿಲಿಯನ್ ಘಟಕಗಳನ್ನು ಮತ್ತು $110 ಬಿಲಿಯನ್ (ಸುಮಾರು 7 ಲಕ್ಷ ಕೋಟಿ ರೂಪಾಯಿ) ಮೊತ್ತದ 600 ಮಿಲಿಯನ್ ಘಟಕಗಳನ್ನು ದೇಶದಿಂದ ರಫ್ತು ಮಾಡಲಾಗುತ್ತದೆ.

ಈ ನೀತಿಯಡಿ ಸರ್ಕಾರವು ರಕ್ಷಣೆ ಹಾಗೂ ಇತರೆ ತಂತ್ರಜ್ಞಾನ ಕ್ಷೇತ್ರಗಳಿಗೆ ಅಗತ್ಯವಿರುವ ಎಲೆಕ್ಟ್ರಾನಿಕ್ಸ್ ಪರಿಕರಗಳ ತಯಾರಿಕೆಗೆ ಉತ್ತೇಜನ ನೀಡಲಾಗುವುದು.












Click it and Unblock the Notifications