"ಮಟನ್, ಮೀನು ತ್ಯಾಜ್ಯದಿಂದ ತಯಾರಿಸಿದ ಅನಿಲದಿಂದ ಬಸ್ ಓಡಾಟ!"

ನವದೆಹಲಿ, ಸೆಪ್ಟೆಂಬರ್ 23: ಮಟನ್ ಮತ್ತು ಮೀನು ತ್ಯಾಜ್ಯಗಳಿಂದ ತಯಾರಿಸಲಾದ ಸಂಕುಚಿತ ನೈಸರ್ಗಿಕ ಅನಿಲ(CNG) ದಿಂದ ಬಸ್ಸುಗಳನ್ನು ಓಡಿಸುವ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಆಹಾರದ ತ್ಯಾಜ್ಯಗಳು ಅಂದ್ರೆ ಮಟನ್, ಮೀನು, ಹಣ್ಣು ಮತ್ತು ತರಕಾರಿಗಳ ತ್ಯಾಜ್ಯಗಳನ್ನು ಜೈವಿಕ CNGಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ.

ಡೀಸೆಲ್ ವಾಹನಗಳಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂಬ ಕೂಗು ಕೇಳಿಬರುತ್ತಿದ್ದು, ಭವಿಷ್ಯದಲ್ಲಿ ಡೀಸೆಲ್ ವಾಹನಗಳನ್ನೇ ಬ್ಯಾನ್ ಮಾಡುವ ಬಗ್ಗೆ ವದಂತಿಗಳು ಹಬ್ಬಿವೆ. ಇಂಥ ಸಂದರ್ಭದಲ್ಲಿ ಬದಲಿ ಇಂಧನದ ಬಗ್ಗೆ ಸರ್ಕಾರವೂ ಚಿಂತಿಸುತ್ತಿದೆ.

Buses To Run With CNG From Mutton And Fish Waste, Soon: Nitin Gadkari

"ಇವು ಪರ್ಯಾವ ಸಾಧ್ಯತೆಗಳ ಆವಿಷ್ಕಾರವಷ್ಟೇ. ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳನ್ನು ಬ್ಯಾನ್ ಮಾಡುವ ಅಥವಾ ಇಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವ ಯಾವ ಪ್ರಸ್ತಾವವೂ ಸರ್ಕಾರದ ಮುಂದಿಲ್ಲ" ಎಂದು ನಿತಿನ್ ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+