ಇಂದಿನಿಂದ ಬಜೆಟ್ ಅಧಿವೇಶನ: 28 ಮಸೂದೆ ಕುರಿತು ಚರ್ಚೆ ಸಾಧ್ಯತೆ
ನವದೆಹಲಿ, ಜನವರಿ 29: 2018 ರ ಬಜೆಟ್ ಅಧಿವೇಶನ ಸಂಸತ್ತಿನಲ್ಲಿ ಇಂದಿನಿಂದ(ಜ.29) ಆರಂಭವಾಗಿದ್ದು, ಸುಮಾರು 28 ಮಸೂದೆಗಳ ಕುರಿತು ಮಹತ್ವದ ಚರ್ಚೆಯಾಗುವ ಸಾಧ್ಯತೆಯಿದೆ.
ಮುಸ್ಲಿಂ ಮಹಿಳೆಯರಿಗೆ (ಮದುವೆ ಹಕ್ಕಿನ ರಕ್ಷಣೆ) ಸಂಬಂದಿಸಿದ ಮಸೂದೆ, ತ್ರಿವಳಿ ತಲಾಖ್, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ ಸೇರಿದಂತೆ ಸುಮಾರು 28 ಮಸೂದೆಗಳು ಲೋಕಸಭೆಯಲ್ಲಿ ಮತ್ತು ಸುಮಾರು 39ಕ್ಕೂ ಹೆಚ್ಚು ಮಸೂದೆಗಳು ರಾಜ್ಯಸಭೆಯಲ್ಲಿ ಚರ್ಚೆಯಾಗಲಿವೆ.

ಲಿಂಗ ಪರಿವರ್ತಿತರ ಹಕ್ಕು, ಬಾಡಿಗೆ ತಾಯಿ ಮಸೂದೆ, ನಾಗರೀಕತ್ವ ಮಸೂದೆ, ರಾಷ್ಟ್ರೀಯ ವೈದ್ಯಕೀಯ ಸಮಿತಿ ಮಸೂದೆ, ಹೈಕೋರ್ಟ್ ಬಿಲ್, ದಂತವೈದ್ಯರ ಮಸೂದೆ, ಗ್ರಾಹಕ ರಕ್ಷಣಾ ಮಸೂದೆ, ಲೋಕ್ಪಾಲ್, ಲೋಕಾಯುಕ್ತ ಮತ್ತು ಇತರೆ ಕಾನೂನು ಸಂಬಂಧಿ ಮಸೂದೆ ಸೇರಿದಂತೆ ಹಲವು ಮಸೂದೆಗಳು ಮಂಡನೆಯಾಗಲಿವೆ.












Click it and Unblock the Notifications