ದೆಹಲಿಯಲ್ಲಿ ಕೋವಿಂದ್ ರನ್ನು ಅಭಿನಂದಿಸಿದ ಬಿಎಸ್ ವೈ

Posted By:
Subscribe to Oneindia Kannada

ನವದೆಹಲಿ, ಜೂನ್ 20: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿಯಾಗಿರುವ ರಾಮ್ ನಾಥ್ ಕೋವಿಂದ್ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಇಂದು ನವದೆಹಲಿಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ರಾಮ್ ನಾಥ್ ಕೋವಿಂದ್ ಅವರ ನಾಮಪತ್ರದಲ್ಲಿ ಸೂಚಕರಾಗಿ ಯಡಿಯೂರಪ್ಪನವರು ಸಹಿ ಹಾಕಿದರು.
ಕೋವಿಂದ್ ಬಗ್ಗೆ 2016ರಲ್ಲೇ ಭವಿಷ್ಯ ನುಡಿದಿದ್ದ ಟ್ವಿಟ್ಟರ್
ಬಿ.ಎಸ್.ಯಡಿಯೂರಪ್ಪನವರನ್ನು ರಾಮ್ ನಾಥ್ ಕೋವಿಂದ್ ಅವರಿಗೆ ಸೂಚಕರನ್ನಾಗಿ ನೇಮಿಸುವ ಮೂಲಕ ಬಿಜೆಪಿ ನಾಯಕರು ಬಿಎಸ್ ವೈ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದ್ದರು.

bsy


ದಲಿತ ಮುಖಂಡ, ಸದ್ಯ ಬಿಹಾರದ ರಾಜ್ಯಪಾಲರಾಗಿರುವ ರಾಮ್ ನಾಥ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆರಿಸಿದ ಎನ್ ಡಿಎ ಕ್ರಮವನ್ನು ಸ್ವಾಗತಿಸಿರುವ ಬಿ.ಎಸ್.ಯಡಿಯೂರಪ್ಪ, ಈ ಹುದ್ದೆಗೆ ಕೋವಿಂದ್ ಸೂಕ್ತ ಅಭ್ಯರ್ಥಿ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka state BJP president who has assigned as proposer for Kovind in presidential poll by BJP high command, has met NDA presidential candidate Ram Nath Kovind in Delhi today(June 20th) and congratulated him.
Please Wait while comments are loading...