ದೆಹಲಿಯ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆ
ನವದೆಹಲಿ, ಜುಲೈ 1: ದೆಹಲಿ ನಿವಾಸಿಗಳು ಭಾನುವಾರ ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ಬುರಾರಿ ಪ್ರದೇಶದ ಮನೆಯೊಂದರಲ್ಲಿ ಒಂದರಲ್ಲ ಎರಡಲ್ಲ ಬರೋಬ್ಬರಿ 11 ಶವಗಳು ಪತ್ತೆಯಾಗಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ.
ಇವರಲ್ಲಿ 7 ಮಹಿಳೆಯರ ಶವವಾಗಿದ್ದು, 4 ಪುರುಷರ ಶವವಾಗಿದೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ.
ಮದುವೆಗೆ ನಿರಾಕರಿಸಿದ್ದಕ್ಕೆ ಸೇನೆಯ ಅಧಿಕಾರಿಯ ಪತ್ನಿ ಹತ್ಯೆಗೈದ ಮೇಜರ್
ಇದರಲ್ಲಿ 10 ಶವಗಳ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಕಬ್ಬಿಣದ ರಾಡ್ ಒಂದರಲ್ಲಿ ನೇತಾಡಿಕೊಂಡಿತ್ತು. ಒಂದು ಶವ ಮಾತ್ರ ನೆಲದ ಮೇಲೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಸಾವಿಗೀಡಾದ ಕುಟುಂಬಸ್ಥರು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರೆಲ್ಲಾ ಹೇಗೆ ಸಾವಿಗೀಡಾದರು? ಯಾರಾದರೂ ಕೊಲೆ ಮಾಡಿದರೇ? ಮಾಡಿದ್ದರೆ ಯಾಕೆ ಕೊಲೆ ಮಾಡಿದರು? ಎಂಬುದು ತಿಳಿದು ಬಂದಿಲ್ಲ.
ಶವಗಳು ಪತ್ತೆಯಾದ ಮನೆಗೆ ಪೊಲೀಸ್ ಅಧಿಕಾರಿಗಳು ಮತ್ತು ಹಲವು ಪೊಲೀಸ್ ಪೇದೆಗಳು ಬಂದು ಸ್ಥಳ ಮಹಜರು ನಡೆಸುತ್ತಿದ್ದಾರೆ. ಮನೆಯ ಸುತ್ತ ಕೂತೂಹಲದಿಂದ ನೂರಾರು ಜನರು ಬಂದು ಸೇರಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !