• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೌರತ್ವ ಕಾನೂನು; ಕಾಂಗ್ರೆಸ್ ಗೆ ಮನಮೋಹನ್ ಸಿಂಗ್ ಬಾಣ ಬಿಟ್ಟ ಬಿಜೆಪಿ!

|

ನವದೆಹಲಿ, ಡಿಸೆಂಬರ್ 19: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ಬಿಜೆಪಿ ಇಂದು ತೀವ್ರ ಮುಜುಗರವನ್ನುಂಟು ಮಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2003 ರಲ್ಲಿ ರಾಜ್ಯಸಭೆಯಲ್ಲಿ ಮಾಡಿದ್ದ ಭಾಷಣದ ಬಾಣವನ್ನು ಕಾಂಗ್ರೆಸ್ ಕಡೆಗೆ ಬಿಜೆಪಿ ಬಿಟ್ಟಿದೆ.

2003 ರ ಎನ್ ಡಿ ಯ ಸರ್ಕಾರವಿದ್ದಾಗ ಅಂದು ರಾಜ್ಯಸಭೆಯಲ್ಲಿ ಡಾ.ಮನಮೋಹನ್ ಸಿಂಗ್ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಚರ್ಚೆ ವೇಳೆ 'ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದಲ್ಲಿ ಶೋಷಣೆಗೊಳಗಾದ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ಖಾಯಂ ಪೌರತ್ವ ನೀಡಬೇಕು. ಈ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸಿ, ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಪಡಿಸಿದ್ದರು. ಇದೇ ವಿಡಿಯೋ ತುಣಕನ್ನು ಇಟ್ಟುಕೊಂಡು ಬಿಜೆಪಿ ಹಾಗೂ ಬಿಜೆಪಿ ನಾಯಕರು ಟ್ವೀಟರನಲ್ಲಿ ಕಾಂಗ್ರೆಸ್ ಕಾಲೆಳದಿದ್ದಾರೆ. ಅಂದು ಮನಮೋಹನ ಸಿಂಗ್ ಅವರು ಹೇಳಿದ್ದನ್ನೇ ಇಂದು ಮೋದಿ ಸರ್ಕಾರ ಮಾಡುತ್ತಿದೆ ಎಂದು ಬಾಣ ಬಿಟ್ಟಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಬಗ್ಗೆ 'ನಮೋ' ಮಾತು

ಇದರಿಂದ ಕಾಂಗ್ರೆಸ್ ಮುಜಗರಕ್ಕೊಳಗಾಗಿದ್ದು, ಮನಮೋಹನ ಸಿಂಗ್ ಹೇಳಿದ್ದು ಬೇರೆ, ಬಿಜೆಪಿ ಮಾಡಲು ಹೊರಟಿರುವುದು ಬೇರೆ ಎಂದು ನುಣಚಿಕೊಳ್ಳುವ ಪ್ರಯತ್ನ ಮಾಡಿದೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನಿಗೆ ತಡೆ ನೀಡಲು ಸುಪ್ರೀಂಕೋರ್ಟ ನಿರಾಕರಿಸಿದ್ದು, ಈ ಕುರಿತು ಸಿಂಧುತ್ವ ಪ್ರಶ್ನಿಸಿ, ದೇಶದ ಕೆಲ ರಾಜಕೀಯ ಪಕ್ಷಗಳು ಹಾಗೂ ಕೆಲ ಸಂಘಟನೆಗಳು ಸುಪ್ರೀಂಕೋರ್ಟ ಗೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಈ ಕುರಿತು ಜನೇವರಿ ಹೆಚ್ಚಿನ ವಿಚಾರಣೆಯನ್ನು ಜನೇವರಿ 22 ಕ್ಕೆ ಮುಂದೂಡಿದೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ಖಂಡಿಸಿ ದೇಶಾದ್ಯಂತ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು 59 ಅರ್ಜಿಗಳು ಸಲ್ಲಿಕೆಯಾಗಿದ್ದವು.

English summary
BJP Tweet Manmohan singh Citizenship Rajyasbha Video. this video goes viral. its target congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X