ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ : ಎಎಪಿ ಆಸೆಗೆ ತಣ್ಣೀರು, ಬಿಜೆಪಿಗೆ ಬಹುಮತ

By Mahesh
|
Google Oneindia Kannada News

ನವದೆಹಲಿ, ನ.11: ಮುಂಬರುವ ವರ್ಷಾರಂಭದಲ್ಲಿ ನಡೆಯಲಿರುವ ನವದೆಹಲಿಯ ವಿಧಾನಸಭೆ ಚುನಾವಣೆಗೆ ಈಗಿಂದಲೇ ಸಿದ್ಧತೆಗಳು ನಡೆದಿವೆ. ಜೊತೆಗೆ ಮಾಧ್ಯಮಗಳು, ಸಮೀಕ್ಷಾ ಸಂಸ್ಥೆಗಳ ವರದಿಗಳು ಒಂದೊಂದಾಗಿ ಬರಲು ಆರಂಭಿಸಿವೆ. ಎಬಿಪಿ ನ್ಯೂಸ್ ಸುದ್ದಿ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ದೆಹಲಿಯಲ್ಲೂ ಮೋದಿ ಅಲೆ ಏಳಲಿದ್ದು, ಎಎಪಿ ಆಸೆಗೆ ತಣ್ಣೀರೆರಚಲಿದೆಯಂತೆ.

ದೆಹಲಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದ್ದು, ಅಧಿಕಾರ ಸ್ಥಾಪಿಸಲಿದೆ. ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್ ಹಾಗೂ ನೆಲ್ಸನ್ ಸುದ್ದಿಸಂಸ್ಥೆಗಳು ಮಂಗಳವಾರ ವರದಿ ಮಾಡಿವೆ. [ಜಮ್ಮು ಕಾಶ್ಮೀರ, ಜಾರ್ಖಂಡ್ ಚುನಾವಣಾ ವೇಳಾಪಟ್ಟಿ]

2013ರ ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಕೇವಲ 18 ಸ್ಥಾನ ಪಡೆದರೆ, ಕಾಂಗ್ರೆಸ್ 3 ರಿಂದ 5 ಸ್ಥಾನಕ್ಕೆ ತೃಪ್ತಿ ಪಡಲಿದೆ. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಶೇ.38, ಎಎಪಿ ಶೇ.26 ಹಾಗೂ ಕಾಂಗ್ರೆಸ್ ಶೇ.22ರಷ್ಟು ಮತ ಪಡೆಯಲಿವೆ.

BJP to sweep Delhi, AAP decimation – ABP News-Nielsen Opinion Poll

ಸಿಎಂ ಸ್ಥಾನ ಯಾರಿಗೆ?: ಅದರೆ, ಮುಖ್ಯಮಂತ್ರಿ ಅಭ್ಯರ್ಥಿಗಳ ರೇಸಿನಲ್ಲಿಅರವಿಂದ್ ಕೇಜ್ರಿವಾಲ್ ಮೊದಲ ಸ್ಥಾನ ಪಡೆದಿದ್ದಾರೆ. 49 ದಿನಗಳ ಕಾಲ ಸರ್ಕಾರ ನಡೆಸಿದ್ದ ಕೇಜ್ರಿವಾಲ್ ಅವರು ಮುಂದಿನ ಚುನಾವಣೆಯಲ್ಲಿ ಎಎಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಘೋಷಿಸಿದ್ದರು. ಅದರೆ, ಜನರ ಅಭಿಮತ ಮಾತ್ರ ಕೇಜ್ರಿವಾಲ್ ಅವರ ಪರ ಮಾತ್ರ ಇದ್ದು, ಅವರ ಪಕ್ಷದ ಪರವಿಲ್ಲ.

ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಬೇಕೆಂದು ಶೇ.39ರಷ್ಟು ಜನರು ಬಯಸಿದ್ದರೆ. ಎರಡನೆ ಸ್ಥಾನದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಡಾ. ಹರ್ಷವರ್ಧನ್ ಶೇ.38ರಷ್ಟು ಮತ ಪಡೆದಿದ್ದರೆ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಶೇ.7, ಬಿಜೆಪಿ ನಾಯಕರಾದ ಜಗದೀಶ್ ಮುಖಿ ಶೇ.5 ಹಾಗೂ ಸತೀಶ್ ಉಪಾಧ್ಯಾಯ ಶೇ.4ರಷ್ಟು ಮತ ಪಡೆದಿದ್ದಾರೆ. ['ನನ್ನ ಮಗಳು ರಾಜಕೀಯ ರಂಗ ಪ್ರವೇಶಿಸಲ್ಲ']

50 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತಮ ಆಡಳಿತ ನಡೆಸುತ್ತಿದ್ದಾರೆಂದು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಮೋದಿ ನಾಯಕತ್ವದಲ್ಲೇ ದೆಹಲಿಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆಮ್ ಆದ್ಮಿ ಪಕ್ಷಕ್ಕೆ ಒಂದು ಬಾರಿ ಅವಕಾಶ ನೀಡಲಾಗಿದೆ. ಈ ಬಾರಿ ಬಿಜೆಪಿಗೆ ನಮ್ಮ ಮತ ಎಂಬುದು ಅನೇಕರ ವಾದವಾಗಿದೆ.

ನವೆಂಬರ್ 5 ರಿಂದ 7ರ ತನಕ 35ಕ್ಕೂ ಅಧಿಕ ಅಸೆಂಬ್ಲಿ ಕ್ಷೇತ್ರಗಳಲ್ಲಿ ಎಬಿಪಿ ಸಂಸ್ಥೆ ಸಮೀಕ್ಷೆ ನಡೆಸಿ ಮಂಗಳವಾರ ಫಲಿತಾಂಶ ಹೊರಹಾಕಿದೆ. ಕಳೆದ ಎಂಟು ತಿಂಗಳಿನಿಂದ ದೆಹಲಿಯಲ್ಲಿ ಸರ್ಕಾರ ಸ್ಥಾಪನೆ ಸಾಧ್ಯವಾಗಿಲ್ಲ. ದೆಹಲಿ ಅಸೆಂಬ್ಲಿ ವಿಸರ್ಜನೆಗೆ ರಾಜ್ಯಪಾಲ ಲೆ. ನಜೀಬ್ ಜಂಗ್ ಅವರ ಶಿಫಾರಸು ಮಾಡಿದ್ದನ್ನು ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಸಮ್ಮತಿ ಸೂಚಿಸಿತ್ತು. (ನಿತಿ ಸೆಂಟ್ರಲ್)

English summary
Riding on the Modi wave, BJP will get an absolute majority in the upcoming Assembly election in Delhi, winning a whopping 46 of the 70 Assembly constituencies. This was predicted by an opinion poll conducted by the ABP News-Nielsen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X