Get Updates
Get notified of breaking news, exclusive insights, and must-see stories!

ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲು 6,300 ಕೋಟಿ ಖರ್ಚು ಮಾಡಲಾಗಿದೆ: ಕೇಜ್ರಿವಾಲ್

ನವದೆಹಲಿ, ಆಗಸ್ಟ್‌ 27: ದೇಶದಲ್ಲಿ ಇತರ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿ 6,300 ಕೋಟಿ ಖರ್ಚು ಮಾಡಿದೆ. ಈ ಕೆಲಸ ಮಾಡದಿದ್ದರೆ ಆಹಾರ ಪದಾರ್ಥಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ಅಗತ್ಯ ಇರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ವ್ಯಂಗ್ಯವಾಡಿದ್ದಾರೆ.

ಕೇಜ್ರಿವಾಲ್ ಅವರು ಬಿಜೆಪಿಯನ್ನು ರಾಜ್ಯ ಸರ್ಕಾರಗಳ ಸರಣಿ ಕೊಲೆಗಾರ ಎಂದು ಕರೆದ ಒಂದು ದಿನದ ನಂತರ ಈ ಆರೋಪವನ್ನು ಶನಿವಾರ ಮಾಡಿದ್ದಾರೆ. ದೆಹಲಿಯ ವಿಧಾನಸಭೆಯಲ್ಲಿ ತಮ್ಮ ಭಾಷಣದಲ್ಲಿ ಅರವಿಂದ್‌ ಕೇಜ್ರಿವಾಲ್ ಅವರು ಜಿಎಸ್‌ಟಿ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳದ ಮೂಲಕ ಸಂಗ್ರಹಿಸಿದ ಹಣವನ್ನು ಶಾಸಕರನ್ನು ಬೇಟೆ ಮಾಡಲು ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯು ಇತರ ಪಕ್ಷಗಳ ಶಾಸಕರನ್ನು ಬೇಟೆಯಾಡಲು ಮತ್ತು ರಾಜ್ಯಗಳಲ್ಲಿ ಅವರ ಸರ್ಕಾರಗಳನ್ನು ಬೀಳಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಈ ಬೆಲೆ ಏರಿಕೆಯ ಭಾರವನ್ನು ಜನರು ಎದುರಿಸುತ್ತಿದ್ದಾರೆ. ಮೊಸರು, ಮಜ್ಜಿಗೆ, ಜೇನುತುಪ್ಪ, ಗೋಧಿ, ಅಕ್ಕಿ ಇತ್ಯಾದಿಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 7,500 ಕೋಟಿ ಆದಾಯ ಬರಲಿದೆ ಎಂದು ಹಿಂದಿಯಲ್ಲಿಯೂ ಟ್ವೀಟ್ ಮಾಡಿ ಕೇಜ್ರಿವಾಲ್ ಹೇಳಿದ್ದಾರೆ.

ಬೇರೆ ಪಕ್ಷದ ಸರ್ಕಾರಗಳನ್ನು ಉರುಳಿಸಲು ಬಿಜೆಪಿಯವರು ಇಲ್ಲಿಯವರೆಗೆ 6,300 ಕೋಟಿ ಖರ್ಚು ಮಾಡಿದ್ದಾರೆ. ಅವರು ಸರ್ಕಾರಗಳನ್ನು ಉರುಳಿಸದಿದ್ದರೆ ಗೋಧಿ, ಅಕ್ಕಿ, ಮಜ್ಜಿಗೆ ಇತ್ಯಾದಿಗಳ ಮೇಲೆ ಜಿಎಸ್‌ಟಿ ವಿಧಿಸಬೇಕಾಗಿರಲಿಲ್ಲ. ಜನರು ಹಣದುಬ್ಬರವನ್ನು ಎದುರಿಸಬೇಕಾಗಿಲ್ಲ ಎಂದು ಕೇಜ್ರಿವಾಲ್‌ ಅವರು ವಾಗ್ದಾಳಿ ನಡೆಸಿದರು.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಶಿಫಾರಸಿನ ಮೇರೆಗೆ ದೆಹಲಿ ಸರ್ಕಾರದ ಅಬಕಾರಿ ನೀತಿಯ ಅನುಷ್ಠಾನದಲ್ಲಿನ ನಡೆದಿರುವ ಅಕ್ರಮಗಳ ಆರೋಪದ ಮೇಲೆ ಸಿಬಿಐ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ಜಗಳ ತೀವ್ರಗೊಂಡಿದೆ.

 ನಕಲಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ

ನಕಲಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19ರಂದು ತನಿಖಾ ಸಂಸ್ಥೆ ಸಿಬಿಐ ರಾಜಧಾನಿಯಲ್ಲಿರುವ ಮನೀಶ್‌ ಸಿಸೋಡಿಯಾ ಅವರ ನಿವಾಸ ಮತ್ತು ದೇಶದ ಇತರ 30 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅವರ ಆಡಳಿತದ ಮಾದರಿಯಿಂದ ಬಿಜೆಪಿಯು ಸಿಟ್ಟಾಗಿರುವ ಕಾರಣ, ಸಿಸೋಡಿಯಾ ಅವರನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಅವರ ಇಮೇಜ್ ಅನ್ನು ಕೆಡಿಸಲು ಕೇಂದ್ರವು ಸಿಬಿಐ ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎಎಪಿ ಆರೋಪಿಸಿದೆ.

 ಸಿಸೋಡಿಯಾಗೆ ದೆಹಲಿಯ ಮುಖ್ಯಮಂತ್ರಿ ಆಫರ್‌

ಸಿಸೋಡಿಯಾಗೆ ದೆಹಲಿಯ ಮುಖ್ಯಮಂತ್ರಿ ಆಫರ್‌

ಸಿಬಿಐ ದಾಳಿಯ ಒಂದು ದಿನದ ನಂತರ ಮನೀಶ್‌ ಸಿಸೋಡಿಯಾ ಅವರು, ತಮ್ಮ ವಿರುದ್ಧದ ಎಲ್ಲಾ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡಲು ಮತ್ತು ಅವರು ಎಎಪಿ ಪಕ್ಷವನ್ನು ಬದಲಿಸಿ ಬಿಜೆಪಿಗೆ ಸೇರಿದರೆ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ನೇಮಿಸುವ ಪ್ರಸ್ತಾಪದೊಂದಿಗೆ ಬಿಜೆಪಿಯು ತನ್ನನ್ನು ಸಂಪರ್ಕಿಸಿದೆ ಎಂದು ಹೇಳಿಕೊಂಡಿದ್ದಾರೆ.

 ಎಎಪಿಯ 40 ಶಾಸಕರಿಗೆ ಇಂತಹ ಆಫರ್‌

ಎಎಪಿಯ 40 ಶಾಸಕರಿಗೆ ಇಂತಹ ಆಫರ್‌

ಮುಂದುವರಿದು ಎಎಪಿ ನಾಲ್ವರು ಶಾಸಕರು, ಬಿಜೆಪಿಗೆ ಸೇರಿದರೆ ತಲಾ 20 ಕೋಟಿ ನೀಡುವುದಾಗಿ ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿದ್ದಾರೆ. ಇಲ್ಲದಿದ್ದರೆ ಅವರು ಸಹ ನಕಲಿ ಪ್ರಕರಣಗಳು, ಸಿಬಿಐ ಮತ್ತು ಇಡಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿಕೊಂಡರು. ಅಲ್ಲದೆ ಬಿಜೆಪಿಯು ತನ್ನ 40 ಶಾಸಕರನ್ನು ಇಂತಹ ಆಫರ್‌ಗಳೊಂದಿಗೆ ಸಂಪರ್ಕಿಸಿದೆ. ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.

 ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎಎಪಿ ಸುಳ್ಳು

ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎಎಪಿ ಸುಳ್ಳು

ದೆಹಲಿ ಅಸೆಂಬ್ಲಿಯಲ್ಲಿ ತಮ್ಮ ಭಾಷಣದಲ್ಲಿ, ಕೇಜ್ರಿವಾಲ್ ಅವರು ಬಿಜೆಪಿಯು ದೇಶಾದ್ಯಂತ ಇದುವರೆಗೆ 277 ಶಾಸಕರನ್ನು ಖರೀದಿಸಿದೆ ಎಂದು ಆರೋಪಿಸಿದರು. ಆದರೆ ಇದಕ್ಕೆ ಬಿಜೆಪಿ ಮನೀಶ್‌ ಸಿಸೋಡಿಯಾ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎಎಪಿ ಸುಳ್ಳು ಹೇಳಿಕೆಗಳನ್ನು ಮಾಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+