ರಾಷ್ಟ್ರೀಯ ಕಾರ್ಯಕಾರಿಣಿ: 2019 ರ ಲೋಕಸಭಾ ಚುನಾವಣೆ ಮೇಲೆ ಬಿಜೆಪಿ ಕಣ್ಣು
ನವದೆಹಲಿ, ಸೆಪ್ಟೆಂಬರ್ 25: ರಾಜಧಾನಿ ನವದೆಹಲಿಯಲ್ಲಿ ನಿನ್ನೆ(ಸೆ.24)ಯಿಂದ ಆರಂಭವಾದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ 2019 ರ ಲೋಕಸಭಾ ಚುನಾವಣೆಯ ಗೆಲುವಿಗೆ ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ.
ಸಭೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಿಂದ 13 ಮುಖ್ಯಮಂತ್ರಿಗಳು, 2500 ಸದಸ್ಯರು ಪಾಲ್ಗೊಂದಿದ್ದಾರೆ. ಶಾಸಕರು, ಸಂಸದರು ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರೂ ಸಭೆಯಲ್ಲಿ ಹಾಜರಿದ್ದಾರೆ.

ಇಷ್ಟು ದಿನದ ಸಭೆಗಳಲ್ಲಿ ಕೇವಲ ಬಿಜೆಪಿಯ ಪ್ರಮುಖ ನಾಯಕರಷ್ಟೇ ಭಾಗವಿಸುತ್ತಿದ್ದರು. ಆದರೆ ಈ ಬಾರಿ ಎಲ್ಲ ರಾಜ್ಯದ ಪ್ರಮುಖ ನಾಯಕರನ್ನೂ ಆಮಂತ್ರಿಸಿರುವುದು ವಿಶೇಷ.
ಪ್ರಧಾನಿ ನರೇಂದ್ರ ಮೋದಿಯವರು ಸಹ ಕಾರ್ಯಕ್ರಮದಲ್ಲಿ ಇಡಿ ದಿನ ಭಾಗವಹಿಸಲಿದ್ದು, ಸಮಾರೋಪ ಭಾಷಣ ಮಾಡಲಿದ್ದಾರೆ.












Click it and Unblock the Notifications