ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಾರ್ಯಕಾರಿಣಿ ಪಾಸ್ ಮುದ್ರಣವಾಗಿದ್ದು ಚೀನಾದಲ್ಲಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಗಡಿ ಭಾಗದಲ್ಲಿ ಚೀನಾ ದೇಶ ನಡೆಸುವ ಕುತಂತ್ರದ ಹಿನ್ನೆಲೆಯಲ್ಲಿ, ಚೀನಾ ಮೂಲದ ಸಾಮಗ್ರಿಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಎಲ್ಲೆಡೆ ಹಬ್ಬಿರುವ ಬೆನ್ನಲ್ಲೇ ನವದೆಹಲಿಯ ಟಾಲ್ಕಾಟೋರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯ ಪ್ರವೇಶ ಪತ್ರಗಳು ಚೀನಾದಲ್ಲೇ ಮುದ್ರಣವಾಗಿರುವ ಬಗ್ಗೆ ವರದಿಯಾಗಿದ್ದು ಇದು ಬಿಜೆಪಿಯ ದೇಶಪ್ರೇಮವನ್ನು ಪ್ರಶ್ನಿಸುವಂತೆ ಮಾಡಿದೆ.

ಭಾರತಕ್ಕೆ ಕಿರಿಕಿರಿ ತಂದ ಚೀನಾ-ನೇಪಾಳ ಹೊಸ ಹೆದ್ದಾರಿಭಾರತಕ್ಕೆ ಕಿರಿಕಿರಿ ತಂದ ಚೀನಾ-ನೇಪಾಳ ಹೊಸ ಹೆದ್ದಾರಿ

ಇಂಡಿಯನ್ ಎಕ್ಸ್ ಪ್ರೆಸ್ ನ ಸಹ ಸಂಪಾದಕರೊಬ್ಬರು ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿ 'ನ್ಯಾಷನಲ್ ಹೆರಾಲ್ಡ್' ಸುದ್ದಿ ಸಂಸ್ಥೆ ಈ ವರದಿಯನ್ನು ಮಾಡಿದೆ.

BJP’s national executive meet passes made in China

ಇತ್ತೀಚೆಗೆ, ಭಾರತ ಹಾಗೂ ಚೀನಾ ಗಡಿಯಲ್ಲಿರುವ ಡೊಕ್ಲಾಮ್ ಪ್ರದೇಶದಲ್ಲಿ ಚೀನಾ ಸರ್ಕಾರ ತನ್ನ ಸೇನೆ ಜಮಾವಣೆ ಮಾಡುವ ಮೂಲಕ ಭಾರತಕ್ಕೆ ಸಡ್ಡು ಹೊಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರವೂ ಆ ಪ್ರದೇಶದಲ್ಲಿ ತನ್ನ ಸೇನೆಯನ್ನು ಜಮಾವಣೆ ಮಾಡಿದ್ದರಿಂದ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದವು.

ಆಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಹಾಗೂ ಬಿಜೆಪಿಯ ಕೆಲ ನಾಯಕರು, ಚೀನಾದ ಉತ್ಪನ್ನಗಳು ಭಾರತದೊಳಕ್ಕೆ ಪ್ರವೇಶಿಸದಂತೆ ನಿಷೇಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಚೀನಾದ ಉತ್ಪನ್ನಗಳಿಗೆ ಭಾರತವೂ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಆ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಆ ದೇಶಕ್ಕೆ ಪಾಠ ಕಲಿಸಬೇಕೆಂದೂ ಆಗ್ರಹಿಸಲಾಗಿತ್ತು.

ಆದರೆ, ಸೆ. 25ರಂದು ನವದೆಹಲಿಯಲ್ಲಿ ಶುರುವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಅಧಿಕೃತ ಪ್ರವೇಶ ಪಡೆದಿದ್ದ ಇಂಡಿಯನ್ ಎಕ್ಸ್ ಪ್ರೆಸ್ ನ ಸಹ ಸಂಪಾದಕ ಲಿಜ್ ಮ್ಯಾಥ್ಯೂ ಅವರು ಕಾರ್ಯಕಾರಿಣಿಗೆ ತೆರಳಲು ತಮಗೆ ನೀಡಲಾಗಿರುವ ಪಾಸ್ ಗಳು ಚೀನಾದಲ್ಲಿ ಮುದ್ರಿತವಾಗಿರುವುದನ್ನು ಪಾಸ್ ನ ಫೋಟೋ ಸಹಿತ ಟ್ವೀಟ್ ಮಾಡಿದ್ದರು.

ಇದರಿಂದಾಗಿ, ಈ ಪ್ರವೇಶ ಪತ್ರಗಳ ಮುದ್ರಣದ ಕಾಂಟ್ರಾಕ್ಟ್ ಅನ್ನು ಯಾವುದೋ ಚೀನಾದ ಕಂಪನಿಗೆ ನೀಡಿರುವುದು ಖಾತ್ರಿಯಾಗಿದ್ದು, ಬಿಜೆಪಿಯು ಮುಜುಗರಕ್ಕೀಡಾಗುವ ಸಂದರ್ಭ ಎದುರಾಗಿದೆ. ಆದರೆ, ಬಿಜೆಪಿಯಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

English summary
The Bharatiya Janata Party (BJP) was caught on the wrong foot after the entry passes to the party’s national executive meet—which is underway at the Talkatora Stadium here in New Delhi—were found to be made in China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X