ಮುಸ್ಲಿಂ ಪಾರ್ಟಿ ಹೇಳಿಕೆಗೆ ರಾಹುಲ್ ಮೌನವೇಕೆ? ಬಿಜೆಪಿ ಟೀಕೆ!

Recommended Video

      ಮುಸ್ಲಿಂ ಪಾರ್ಟಿ ಹೇಳಿಕೆಗೆ ರಾಹುಲ್ ಮೌನವೇಕೆ? | Oneindia Kannada

      ನವದೆಹಲಿ, ಜುಲೈ 16: "ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ ಎಂಬ ತಮ್ಮ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ ಅವರು ಇದೀಗ ಮೌನವಾಗಿರುವುದೇಕೆ?" ಎಂದು ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

      ರಾಹುಲ್ ಗಾಂಧಿ ಅವರ 'ಮುಸ್ಲಿಂ ಪಾರ್ಟಿ' ಹೇಳಿಕೆ ಸಂಪೂರ್ಣವಾಗಿ ವೋಟ್ ಬ್ಯಾಂಕ್ ಗೆ ಸಂಬಂಧಿಸಿದ್ದು ಎಂದು ಅವರು ಟೀಕೆ ಮಾಡಿದ್ದಾರೆ.

      BJP questions Rahul Gandhis silence over Muslim Party remark

      ಜುಲೈ 11ರಂದು ಮುಸ್ಲಿಂ ಪಂಡಿತರೊಡನೆ ಸಭೆ ನಡೆಸಿದ್ದ ರಾಹುಲ್ ಗಾಂಧಿ ಅವರು, 'ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ' ಎಂಬ ಹೇಳಿಕೆ ನೀಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ರಾಹುಲ್ ಗಾಂಧಿ ಈ ಹೇಳಿಕೆಯನ್ನು ನೀಡಿದ್ದು ಸತ್ಯವೇ, ಸುಳ್ಳೆ ಎಂಬ ಕುರಿತು ಸ್ವತಃ ರಾಹುಲ್ ಗಾಂಧಿ ಅವರೂ ಸ್ಪಷ್ಟನೆ ನೀಡಿಲ್ಲ.

      ಆದರೆ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಈ ವರದಿಯನ್ನು ಅಲ್ಲಗಳೆದಿದ್ದು, 'ರಾಹುಲ್ ಗಾಂಧಿ ಇಂಥ ಹೇಳಿಕೆ ನೀಡಿದ್ದು ಸುಳ್ಳು ಮತ್ತು ಮಾಧ್ಯಮಗಳು ನಾಚಿಕೆಗೇಡಿನ ಕೆಲಸ ಮಾಡಿವೆ. ಬಿಜೆಪಿ ಎಂದಿನಂತೆ ಇದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಇದು ದೇಶಕ್ಕೇ ಮಾಡುವ ಅವಮಾನ. ಇದರಿಂದ ನಮ್ಮ ಘನತೆಯೇನೂ ಕಡಿಮೆಯಾಗುವುದಿಲ್ಲ. ನಾವೆಂದಿಗೂ ಭಾರತದ ಪ್ರಜಾಪ್ರಭುತ್ವ ತತ್ವಗಳನ್ನು ಉಳಿಸಲು ಹೋರಾಡುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+