ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ

|
Google Oneindia Kannada News

ನವದೆಹಲಿ, ಅಕ್ಟೋಬರ್ 09: ವಿದೇಶದಲ್ಲಿ ಜನಪ್ರಿಯಗೊಂಡಿದ್ದ #metoo ಅಭಿಯಾನ ಈಗ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಮಹಿಳೆಯರು ತಮಗಾದ ನೋವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಅಭಿಯಾನ ತಪ್ಪು ದಾರಿಗೆ ಎಳೆಯಲಿದೆ. ಇಂಥ ಪದ್ಧತಿ ತಪ್ಪು ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.

'ನನ್ನ ಪ್ರಕಾರ ಈ ಅಭಿಯಾನ ಅಗತ್ಯವೆನಿಸಿದರೂ, ಈಗ ಇದು ತಪ್ಪು ದಾರಿಗೆ ಎಳೆಯುತ್ತಿದೆ. 10 ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ಈಗ ಆರೋಪ ಹೊರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹತ್ತು ವರ್ಷಗಳಾದ ಮೇಲೆ ಸಾಕ್ಷ್ಯಗಳನ್ನು ಹೇಗೆ ನೀಡುತ್ತಿರಿ? ಇಂಥ ಆರೋಪಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ದೆಹಲಿಯ ವಾಯುವ್ಯ ಕ್ಷೇತ್ರದ ಸಂಸದ ಉದಿತ್ ರಾಜ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ಸಂಸ್ಕಾರಿ'ಯಿಂದ ಅತ್ಯಾಚಾರ! ಸ್ಫೋಟಕ ಸುದ್ದಿ ಹೊರಹಾಕಿದ ವಿನ್ತಾ ನಂದಾ'ಸಂಸ್ಕಾರಿ'ಯಿಂದ ಅತ್ಯಾಚಾರ! ಸ್ಫೋಟಕ ಸುದ್ದಿ ಹೊರಹಾಕಿದ ವಿನ್ತಾ ನಂದಾ

ನಂತರ ಈ ಬಗ್ಗೆ ಮಾತನಾಡಿದ ಉದಿತ್, ಮಹಿಳೆಯರು 2 ರಿಂದ 4 ಲಕ್ಷ ರು ಪಡೆದು ವೃಥಾರೋಪ ಮಾಡುತ್ತಾರೆ. ಯಾರು ಈಗಿನ ಕಾಲದಲ್ಲಿ ಪರ್ಫೆಕ್ಟ್ ಆಗಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

BJP MP Udit Raj Questions #MeToo Campaign, Calls The Movement A Wrong Practice

ಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆ

ಇನ್ನೊಂದೆಡೆ, ಎಲ್ಲರನ್ನು ಹಾಸ್ಯಮಾಡುತ್ತಿದ್ದ ಅಲ್ ಇಂಡಿಯಾ ಬ್ಯಾಕ್ ಚೊಡ್ ಚಾನೆಲ್ ತಂಡದಿಂದ ಸ್ಥಾಪಕ ಸದಸ್ಯ ತನ್ಮಯ್ ಭಟ್ ಹಾಗೂ ಗುರ್ ಸಿಮ್ರಾನ್ ಖಂಬಾ ಹೊರ ನಡೆದಿದ್ದಾರೆ.

ನಾನಾ ಪಾಟೇಕರ್, ಗಣೇಶ್ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾನಾನಾ ಪಾಟೇಕರ್, ಗಣೇಶ್ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

ನಟ ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್, ಅಲೋಕ್ ನಾಥ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.

English summary
A BJP MP has questioned the movement. BJP MP Udit Raj, while calling the movement a ‘wrong practice’, has said that because of the campaign people’s reputations can be ruined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X