ಸಚಿವ ಸ್ಥಾನ ಕೈತಪ್ಪಿದ್ದ ಶೋಭಾ ಕರಂದ್ಲಾಜೆಗೆ ಅಚ್ಚರಿಯ ಹುದ್ದೆ ನೀಡಿದ ಬಿಜೆಪಿ

Recommended Video

      ಶೋಭಾ ಕರಂದ್ಲಾಜೆಗೆ ಅಚ್ಚರಿಯ ಹುದ್ದೆ | Oneindia Kannada

      ನವದೆಹಲಿ, ಜೂನ್ 12: ಶೋಭಾ ಕರಂದ್ಲಾಜೆ ಅವರಿಗೆ ಅಚ್ಚರಿಯ ಹುದ್ದೆಯು ಕೇಂದ್ರ ಸರ್ಕಾರದಲ್ಲಿ ದೊರೆತಿದ್ದು, ಅವರನ್ನು ಲೋಕಸಭೆಯ ಬಿಜೆಪಿ ಸಂಸದರಿಗೆ ಮುಖ್ಯ ಸಚೇತಕಿ ಆಗಿ ನೇಮಿಸಲಾಗಿದೆ.

      ಕೇಂದ್ರ ಸರ್ಕಾರದಲ್ಲಿ ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿಗಿರಿ ಸಿಕ್ಕದ ಕಾರಣ ನಿರಾಸೆ ಆಗಿತ್ತು, ಆದರೆ ಈಗ ಅಚ್ಚರಿಯ ರೀತಿಯಲ್ಲಿ ಮುಖ್ಯ ಸಚೇತಕಿ ಆಗಿ ನೇಮಿಸಲಾಗಿದೆ.

      ಬಿಜೆಪಿಯ 303 ಸಂಸದರಿಗೆ ವಿಪ್ ಜಾರಿ ಮಾಡುವ ಮಹತ್ವದ ಕಾರ್ಯ ಮುಖ್ಯ ಸಚೇತಕರಾಗಿದ್ದು, ಲೋಕಸಭೆಯ ನಾಯಕತ್ವದ ಚುನಾವಣೆಗಳು, ರಾಜ್ಯಸಭಾ ಸದಸ್ಯರ ಆಯ್ಕೆ ಮುಂತಾದ ವಿಷಯಗಳಲ್ಲಿ ಶೋಭಾ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ.

      BJP MP Shobha Karandlaje appointed as chief whip of Lok Sabha

      ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಎರಡನೇ ಬಾರಿ ಶೋಭಾ ಅವರು ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಇದೇ ಮೊದಲ ಬಾರಿಗೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದಲ್ಲಿ ಪ್ರಮುಖ ಹುದ್ದೆಯೊಂದನ್ನು ನೀಡಲಾಗಿದೆ. ಆದರೆ ಈ ಮುಖ್ಯ ಸಚೇತಕಿ ಹುದ್ದೆ ಸಂಪುಟಕ್ಕೆ ಸಂಬಂಧಿಸಿದ್ದಲ್ಲ. ಕಳೆದ ಅವಧಿಯಲ್ಲಿ ಅನುರಾಗ್ ಠಾಕೂರ್ ಅವರನ್ನು ಮುಖ್ಯ ಸಚೇಕರನ್ನಾಗಿ ಮಾಡಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+