• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಸಂಸದ ಗಂಭೀರ್ ತಂದೆಯ SUV ಕಳ್ಳತನ

|
Google Oneindia Kannada News

ನವದೆಹಲಿ, ಮೇ 29: ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರ ತಂದೆಯ ವಾಹನ ಕಳ್ಳತನವಾಗಿದೆ. ದೆಹಲಿಯ ನಿವಾಸದ ಮುಂದೆ ನಿಲ್ಲಿಸಿದ್ದ SUV ಕಾಣೆಯಾಗಿದೆ.

   ನರಕಯಾತನೆ ಅನುಭವಿಸ್ತಾಯಿದಾರೆ ಕ್ವಾರಂಟೈನ್ ನಿವಾಸಿಗಳು | Oneindia Kannada

   ದೆಹಲಿಯ ರಾಜೇಂದ್ರ ನಗರದಲ್ಲಿ ಶುಕ್ರವಾರ ಬೆಳಗ್ಗೆ ಮನೆ ಮುಂದೆ ನಿಲ್ಲಿಸಿದ್ದ ವಾಹನ ಕಾಣೆಯಾಗಿದೆ. ಗುರುವಾರ ರಾತ್ರಿ ಕೊನೆಯ ಬಾರಿಗೆ ವಾಹನ ಪಾರ್ಕ್ ಮಾಡಿದಾಗ ನೋಡಿದ್ದಷ್ಟೆ, ಬೆಳಗ್ಗೆ ನೋಡಿದರೆ ಕಾಣುತ್ತಿಲ್ಲ ಎಂದು ಗಂಭೀರ್ ಅವರ ತಂದೆ ದೂರು ನೀಡಿದ್ದಾರೆ,

   ಗುರುವಾರ ತಡರಾತ್ರಿ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ವಿವಿಧ ತಂಡಗಳನ್ನು ನಿಯೋಜಿಸಲಾಗಿದ್ದು, ಕಳೆದು ಹೋದ ವಾಹನ ಹಾಗೂ ಕಳ್ಳರನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳೀದ್ದಾರೆ.

   ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿಭಾಗದ ಡಿಸಿಪಿ, ಮನೆ ಮುಂದೆ ನಿಲ್ಲಿಸಿದ್ದ ಟಯೋಟಾ ಫಾರ್ಚ್ಯೂನರ್ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಈ ಪ್ರದೇಶದ ಸಿಸಿಟಿವಿ ಫುಟೇಜ್ ತರೆಸಿಕೊಂಡು ಪರಿಶೀಲಿಸಲಾಗುತ್ತಿದೆ.ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದಿದ್ದಾರೆ.

   English summary
   JP MP and former cricketer Gautam Gambhir’s father's SUV was stolen from outside their house in Rajendra Nagar, Delhi Police said on Friday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X