ನೀವು ರಾಹುಲ್ ಗಾಂಧಿ, ಚೀನೀಸ್ ಗಾಂಧಿಯಲ್ಲ: ಬಿಜೆಪಿ ವ್ಯಂಗ್ಯ
ನವದೆಹಲಿ, ಆಗಸ್ಟ್ 31: ಇಂದಿನಿಂದ ಕೈಲಾಸ ಮಾನಸಸರೋವರ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ ಅವರನ್ನು ಅಣುಕಿಸಿರುವ ಬಿಜೆಪಿ, 'ನೀವು ರಾಹುಲ್ ಗಾಂಧಿ, ಚೀನೀಸ್ ಗಾಂಧಿಯಲ್ಲ' ಎಂಬುದು ನೆನಪಿರಲಿ ಎಂದಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ರಾಹುಲ್ ಗಾಂಧಿ ಅವರೇಕೆ ಚೀನಾ ವಕ್ತಾರರಂತೆ ಮಾತನಾಡುತ್ತಾರೆ? ಅವರಿಗೆ ನೀವು ಚೀನೀಸ್ ಗಾಂಧಿಯಲ್ಲ, ರಾಹುಲ್ ಗಾಂಧಿ ಎಂಬುದನ್ನು ನೆನಪಿಸಬೇಕಿದೆ' ಎಂದು ಪಾತ್ರ ವ್ಯಂಗ್ಯವಾಗಿ ಹೇಳಿದರು.
"ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರು ಚೀನಾ ರಾಯಭಾರಿಯಿಂದ ಅದ್ಧೂರಿ ವಿದಾಯ ಪಡೆದಿದ್ದೇಕೆ? ರಾಹುಲ್ ಗಾಂಧಿ ಅವರು ಭಾರತದ ವಕ್ತಾರರಂತೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಚೀನಾ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಚೀನಾದ ಪ್ರಚಾರದ ರಾಯಭಾರದ ಹೊಣೆ ಹೊತ್ತಂತೆ ಚೀನಾ ಪರ ಪ್ರಚಾರ ಮಾಡುತ್ತಿದ್ದಾರೆ" ಎಂದು ಅವರು ಟೀಕಿಸಿದ್ದಾರೆ.

'ಇತ್ತೀಚೆಗಷ್ಟೇ ಯುರೋಪ್ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರನ್ನು ಡೊಕ್ಲಾಂ ಬಗ್ಗೆ ಕೇಳಿದಾಗ, 'ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ ಎಂದು ಮಾತು ಮರೆಸಿದ್ದರು.' ನಿಮಗೆ ಈ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದಾದರೆ ಸರ್ಕಾರದ ಮೇಲೇಕೆ ಸುಮ್ಮನೆ ಆರೋಪ ಮಾಡುತ್ತೀರಿ?' ಎಂದು ಪಾತ್ರ ಪ್ರಶ್ನಿಸಿದ್ದಾರೆ.












Click it and Unblock the Notifications