ಬಿಜೆಪಿ ಗೆದ್ದ ಖುಷಿಗೆ 1,100 ಕಿ.ಮೀ. ಸೈಕಲ್ ತುಳಿದ ಅಭಿಮಾನಿ
ನವದೆಹಲಿ, ಜುಲೈ 3: ಲೋಕಸಭೆ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವನ್ನು ಸಂಭ್ರಮಿಸಲು ಗುಜರಾತ್‌ನ ಹಿರಿಯ ವ್ಯಕ್ತಿಯೊಬ್ಬರು ಅಮ್ರೇಲಿಯಿಂದ ದೆಹಲಿಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದಿದ್ದಾರೆ.
ಈ ವ್ಯಕ್ತಿಯ ಹಠ ಮತ್ತು ಪಕ್ಷದೆಡೆಗಿನ ಪ್ರೀತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಿದೆ. ಈ ಬಗ್ಗೆ ಮೋದಿ ಟ್ವಿಟ್ಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ಅಭಿಮಾನಿಯಾಗಿರುವ ಕಿಮ್‌ಚಂದ್ ಭಾಯ್ ಅವರು ಗುಜರಾತ್‌ನ ಅಮ್ರೇಲಿಯಿಂದ ಸೈಕಲ್ ನಲ್ಲಿ ತೆರಳಿದ್ದರು. ಬಿಜೆಪಿ ಈ ರೀತಿ ದಿಗ್ವಿಜಯ ಸಾಧಿಸಿದರೆ ಸೈಕಲ್ ಯಾತ್ರೆ ಮಾಡುವುದಾಗಿ ಅವರು ಪಣ ತೊಟ್ಟಿದ್ದರು.

'ಬಿಜೆಪಿ 300ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದರೆ ಅಮ್ರೇಲಿಯಿಂದ ದೆಹಲಿಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಸಂಭ್ರಮಿಸುವುದಾಗಿ ಕಿಮ್‌ಚಂದ್ ಭಾಯ್ ನಿರ್ಧರಿಸಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅವರ ಸೈಕಲ್ ಪ್ರಯಾಣವು ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಮಾನವೀಯತೆ ಮತ್ತು ಮಹತ್ವಾಕಾಂಕ್ಷೆಯಿಂದ ನಾನು ತೀವ್ರವಾಗಿ ಪ್ರಭಾವಿತನಾಗಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಿಮ್‌ಚಂದ್ ಅವರು 17 ದಿನಗಳಲ್ಲಿ 1,100 ಕಿ.ಮೀ. ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ್ದಾರೆ. ಈ ಸೈಕಲ್‌ನಲ್ಲಿ ಪ್ರಧಾನಿ ಮೋದಿ ಅವರ ಹಲವು ಚಿತ್ರಗಳಿವೆ. ಜತೆಗೆ, 'ಮೋದಿ ಇದ್ದರೆ ಇದು ಸಾಧ್ಯ' ಮತ್ತು 'ಈ ಬಾರಿ 300 ಗಡಿ ಕ್ರಮಿಸಲಾಗಿದೆ' ಎಂಬ ಘೋಷಣೆಗಳನ್ನು ಬರೆದಿದ್ದಾರೆ.












Click it and Unblock the Notifications