ಮಾನ್ಯತೆ ಪಡೆದ ಆಮ್ ಆದ್ಮಿಗೆ ಬಿಜೆಪಿ ಪ್ರಶ್ನೆ ಸುರಿಮಳೆ

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಈ ಸಾಧನೆಯನ್ನು ಪರಿಗಣಿಸಿರುವ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷವನ್ನು (AAP) ಮಾನ್ಯತೆ ಪಡೆದ ಪಕ್ಷಗಳ ಸಾಲಿಗೆ ಸೇರ್ಪಡೆಗೊಳಿಸಿದೆ. (ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾದರೆ ಮುಂದೇನು?)
ಪೊರಕೆಯನ್ನು AAP ಪಕ್ಷದ ಅಧಿಕೃತ ಚಿಹ್ನೆಯಾಗಿ ಮೀಸಲಿಡಲಾಗಿದೆ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಪೊರಕೆ ಚಿಹ್ನೆಯನ್ನು ಮೀಸಲಿಡಲಾಗಿದೆ. ಆದರೆ ದೇಶದ ಇತರೆ ರಾಜ್ಯಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಪೊರಕೆ ಚಿಹ್ನೆಯಡಿಯೇ ಸ್ಪರ್ಧಿಸಬಯಸುವುದಾದರೆ ಆ ಅಭ್ಯರ್ಥಿಗಳಿಗೆ ಪೊರಕೆ ಚಿಹ್ನೆ ಮೀಸಲಿಡಲು ಸಹ ಆಯೋಗ ತೀರ್ಮಾನಿಸಿದೆ.
ಈ ಮಧ್ಯೆ ದಿಲ್ಲಿ ವಿಧಾಸನಭೆ ಚುನಾವಣೆಯಲ್ಲಿ AAPಗಿಂತ ನಾಲ್ಕು ಸ್ಥಾನ ಹೆಚ್ಚಿಗೆ ಗಳಿಸಿದ BJP ಪಕ್ಷವು ಸರಕಾರ ರಚನೆ ಕಸರತ್ತಿನಲ್ಲಿ ತೊಡಗಿರುವ AAP ಒಂದಷ್ಟು ಸವಾಲುಗಳನ್ನು ಎಸೆದಿದೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಡಾ. ಹರ್ಷವರ್ಧನ ಅವರು ಅರವಿಂದ್ ಕೇಜ್ರಿವಾಲಾಗೆ 14 ಪ್ರಶ್ನೆಗಳ ಪತ್ರ ಬರೆದಿದ್ದಾರೆ.
ಇದಕ್ಕೂ ಮುನ್ನ, ಸರಕಾರ ರಚನೆಗಾಗಿ AAP ಬೆಂಬಲ ಯಾಚಿಸುವುದಾದರೆ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರು ಕಾಂಗ್ರೆಸ್ ಹಾಗೂ ಬಿಜೆಪಿಗೆ 18 ಷರತ್ತುಗಳನ್ನು ಒಡ್ಡಿದ್ದರು. ಇದಕ್ಕೆ ಉತ್ತರವಾಗಿ, ಸರಕಾರ ರಚನೆಗೆ ವಿಳಂಬ ತೋರುತ್ತಿರುವ AAPಗೆ ಬಿಜೆಪಿ ಇದೀಗ 14 ಪ್ರಶ್ನೆಗಳ ಸುರಿಮಳೆಗೈದಿದೆ. ಬಿಜೆಪಿ ಅರ್ಥಾತ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹರ್ಷವರ್ಧನ ಅವರ 14 ಪ್ರಶ್ನೆಗಳು ಹೀಗಿವೆ:
1. ದೆಹಲಿಯಲ್ಲಿ ಸರ್ಕಾರ ರಚಿಸುತ್ತೀರಾ? ಇಲ್ಲವಾ? ಮೊದಲು ಸ್ಪಷ್ಟಪಡಿಸಿ.
2. ಕಾಂಗ್ರೆಸ್ ಬೆಂಬಲ ಪಡೆದು ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡುತ್ತಾ? ಇಲ್ಲವಾದಲ್ಲಿ ಸರ್ಕಾರ ರಚಿಸುವುದೇ ಇಲ್ಲ ಎಂದು ಉಪ ರಾಜ್ಯಪಾಲರಿಗೆ ತಿಳಿಸಲು ಎಷ್ಟು ಸಮಯ ಬೇಕು?
3. ರಾಜಧಾನಿಯಲ್ಲಿ ಸರ್ಕಾರದ ಕಾರ್ಯನಿರ್ವಹಣೆ ಸಂಪೂರ್ಣ ನಿಂತಿದೆ. ಇದಕ್ಕೆ ಆಮ್ ಆದ್ಮಿ ಪಕ್ಷ ಹೊಣೆಯಲ್ಲವೆ?
4. ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವ ಪತ್ರವನ್ನು ಕಾಂಗ್ರೆಸ್ಸಿಗರು ನೇರವಾಗಿ ಉಪ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಇದು ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟವಲ್ಲವೇ?
5. ಆಮ್ ಆದ್ಮಿ ಪಕ್ಷ - ಕಾಂಗ್ರೆಸ್ ನಡುವೆ ಏರ್ಪಟ್ಟಿರುವ ರಹಸ್ಯ ಒಪ್ಪಂದವನ್ನು ಅರವಿಂದ ಕೇಜ್ರಿವಾಲ್ ಮತ್ತು ಸೋನಿಯಾ ಗಾಂಧಿ ಬಹಿರಂಗಪಡಿಸುತ್ತಾರಾ?
6. ಸರ್ಕಾರ ರಚಿಸುವುದಿಲ್ಲ, ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ ಎಂದು ಮೊದಲ ದಿನದಿಂದಲೂ ಹೇಳುತ್ತಿದ್ದೇವೆ. ಆದರೂ ಬಿಜೆಪಿಗೆ ಅಪಮಾನ ಮಾಡಲು ಆಮ್ ಆದ್ಮಿ ಪಕ್ಷ ಪತ್ರ ಬರೆಯುತ್ತಿರುವುದೇಕೆ?
7. ಬಾಟ್ಲಾ ಹೌಸ್ ಎನ್ ಕೌಂಟರ್‌ನಲ್ಲಿ ಬಲಿಯಾದ ಅಧಿಕಾರಿ ಮೋಹನ ಚಾಂದ್ ಶರ್ಮಾ ಅವರಿಗೆ ಆಮ್ ಆದ್ಮಿ ಪಕ್ಷ ಅಪಮಾನ ಮಾಡಿದೆ. AAPಯ ಮತ್ತೊಬ್ಬ ನಾಯಕ ಪ್ರಶಾಂತ್ ಭೂಷಣ್ ಅವರು ಜಮ್ಮು- ಕಾಶ್ಮೀರ ಪ್ರತ್ಯೇಕತಾವಾದಿಗಳ ಪರ ವಾದ ಮಂಡಿಸಿದ್ದಾರೆ. ಕಾಶ್ಮೀರ ಪ್ರತ್ಯೇಕವಾಗಬೇಕು ಎಂದೂ ಹೇಳಿದ್ದಾರೆ. ಇಂತಹ ರಾಷ್ಟ್ರದ್ರೋಹದ ಚಟುವಟಿಕೆಯನ್ನು ದೆಹಲಿ ಹಾಗೂ ದೇಶದ ಜನರು ಒಪ್ಪುತ್ತಾರಾ? ಇಂತಹ ರಾಷ್ಟ್ರದ್ರೋಹಿ ಪಕ್ಷಕ್ಕೆ ಬಿಜೆಪಿ ಸಹಕಾರ ನೀಡಬೇಕಾ?
8. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಈ ಆಟವನ್ನು ಎಷ್ಟು ದಿನ ಆಡುತ್ತವೆ? ಸರ್ಕಾರವಿಲ್ಲದ ಸ್ಥಿತಿಯನ್ನು ಬಯಸದ ದೆಹಲಿ ಜನ ಇದನ್ನು ತಿಳಿಯಬಯಸಿದ್ದಾರೆ.
9. ಭಾರತದ ವಿರುದ್ಧ ಸಂಚು ರೂಪಿಸಿದ ತೌಕೀರ್ ನಂತಹ ಭಯೋತ್ಪಾದಕನಿಗೆ ಆಮ್ ಆದ್ಮಿ ಪಕ್ಷ ಬಹಿರಂಗ ಬೆಂಬಲ ನೀಡುತ್ತದೆ. ಆ ಪಕ್ಷದ ಹಲವಾರು ನಾಯಕರು ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರಲ್ಲವೇ?
10. ರಾಜಕೀಯ ಪಕ್ಷ ಸ್ಥಾಪನೆಗೂ ಮುನ್ನ ಆಮ್ ಆದ್ಮಿ ಪಕ್ಷದ ನಾಯಕರು ಜನರನ್ನು ಸಂಪರ್ಕಿಸಿದ್ದರೆ?
11. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷ ವಿಸರ್ಜಿಸುವಂತೆ ಮಹಾತ್ಮಾ ಗಾಂಧಿ ಅವರು ಹೇಳಿದ್ದರು. ಆದರೆ ಆ ಮಾತನ್ನು ಕಾಂಗ್ರೆಸ್ಸಿಗರು ಕೇಳಲಿಲ್ಲ. ಇನ್ನು ನಿಮಗೂ ರಾಜಕೀಯ ಪಕ್ಷ ಸ್ಥಾಪಿಸಬೇಡಿ ಎಂದು ಅಣ್ಣಾ ಹಜಾರೆ ಹೇಳಿದ್ದರು. ಆದರೆ ಅಧಿಕಾರ ಹಾಗೂ ಪ್ರತಿಷ್ಠೆಯ ಮೇಲಿನ ಆಸೆಯಿಂದ ಅದನ್ನು ಆಮ್ ಆದ್ಮಿ ನಾಯಕರು ಒಪ್ಪಿಕೊಳ್ಳಲಿಲ್ಲ. ಆದರೆ ನಮ್ಮ ಪಕ್ಷ ಶ್ಯಾಮಪ್ರಸಾದ ಮುಖರ್ಜಿ ಹಾಗೂ ಪಂಡಿತ ದೀನ ದಯಾಳ್ ಅವರ ಸಿದ್ಧಾಂತಗಳನ್ನು ಪಾಲಿಸುತ್ತಿದೆ.
12. ಅರವಿಂದ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರು ಆಕ್ಷೇಪಾರ್ಹ ಭಾಷೆಗಳನ್ನು ಬಳಸುತ್ತಿದ್ದಾರೆ. ಮಾಧ್ಯಮ ಚರ್ಚೆಗಳಲ್ಲೂ ಅಸಂಸದೀಯ ಭಾಷೆ ಬಳಸುತ್ತಾರೆ. ಭಾರತದಂತಹ ಸುಸಂಸ್ಕೃತ, ನಾಗರಿಕ ಸಮಾಜದಲ್ಲಿ ನಡೆಯುವ ಸಾರ್ವಜನಿಕ ಚರ್ಚೆಗಳಲ್ಲಿ ಇಂತಹ ಭಾಷೆ ಒಳ್ಳೆಯದೇ?
13. ಲೋಕಪಾಲ ಮಸೂದೆ ಬಗ್ಗೆ ಆಕ್ಷೇಪವಿದ್ದರೆ ಆಮ್ ಆದ್ಮಿ ಪಕ್ಷವು ಪ್ರತ್ಯೇಕ ಚಳವಳಿಯನ್ನೇ ಏಕೆ ಆರಂಭಿಸಬಾರದು? ಆದರೆ ಈ ವ್ಯಕ್ತಿಗಳು ಲೋಕಪಾಲ ಮರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ತಮ್ಮನ್ನು ವಂಚಿಸಿದ ಇಂತಹ ವ್ಯಕ್ತಿಗಳನ್ನು ದೆಹಲಿ ಜನ ನಂಬುತ್ತಾರಾ?
14. ಜನರಿಂದ ದೇಣಿಗೆ ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಆಮ್ ಆದ್ಮಿ ಪಕ್ಷ ಹೇಳುತ್ತಿದೆ. ಈಗ ಅರವಿಂದ ಕೇಜ್ರಿವಾಲ್ ಅವರು ಎಲ್ಲ ಉದ್ದಿಮೆ ಹಾಗೂ ಕೈಗಾರಿಕಾ ಸಂಸ್ಥೆಗಳಿಂದ ದೇಣಿಗೆ ಕೇಳುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಏಕೈಕ ಉದ್ದೇಶ ಸಂಪತ್ತು ಗಳಿಸಿ, ಚುನಾವಣೆ ಗೆದ್ದು, ಅಧಿಕಾರ ಅನುಭವಿಸುವುದಾ? Over to AAP Arvind Kejriwal
-
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ












Click it and Unblock the Notifications