ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ-ಕಾಂಗ್ರೆಸ್ ನಡುವೆ ಬಿಗ್ ಬಾಸ್-ಚೋಟಾ ಭೀಮ್ ವಾರ್!

|
Google Oneindia Kannada News

ನವದೆಹಲಿ, ಮಾರ್ಚ್ 26: ನಮೋ app ದತ್ತಾಂಶ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಕುರಿತು ನಿನ್ನೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನರೇಂದ್ರ ಮೋದಿಯವರ ನಮೋ app ನಿಮ್ಮ ಫೋನಿನಲ್ಲಿರುವ ಆಡಿಯೋ, ವಿಡಿಯೋ ಮತ್ತು ನಿಮ್ಮ, ನೀವು ಸೇವ್ ಮಾಡಿಕೊಂಡ ಕಾಂಟ್ಯಾಕ್ಟ್ ಗಳ ಮೇಲೆ ಕಣ್ಣೀಡುತ್ತಿದೆ. ನೀವಿರುವ ಸ್ಥಳವನ್ನೂ ಜಿಪಿಎಸ್ ಮೂಲಕ ಪತ್ತೆ ಮಾಡುತ್ತದೆ. ಅವರು ಬಿಗ್ ಬಾಸ್, ಅವರಿಗೆ ಭಾರತೀಯರೆಲ್ಲರ ಮೇಲೆ ಗೂಢಾಚಾರ ಮಾಡುವುದಕ್ಕೆ ಇಷ್ಟ ಎಂದಿದ್ದರು.

 'ನಮೋ ಆ್ಯಪ್' ದತ್ತಾಂಶ ಸೋರಿಕೆಗೆ ರಾಹುಲ್ ಗಾಂಧಿ ಟೀಕೆ 'ನಮೋ ಆ್ಯಪ್' ದತ್ತಾಂಶ ಸೋರಿಕೆಗೆ ರಾಹುಲ್ ಗಾಂಧಿ ಟೀಕೆ

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ, 'app ನಲ್ಲಿ ಸಾಮಾನ್ಯವಾಗಿ ಕೇಳುವ ವಿವರಗಳಿಂದ ಪತ್ತೆದಾರಿ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದು 'ಛೋಟಾ ಭೀಮ್ ಗೂ ಗೊತ್ತು!'' ಎಂದು ಟ್ವೀಟ್ ಮಾಡಿದ್ದಾರೆ.

Big Boss Vs Chota Bheem; Congress, BJP at war

ಬಿಜೆಪಿ app ಕುರಿತು ದೂರು ಕೇಳಿಬರುತ್ತಿದ್ದಂತೆಯೇ, ಕಾಂಗ್ರೆಸ್ app ನಲ್ಲೂ ಹಲವು ದತ್ತಾಂಶ ಸೋರಿಕೆಗಳಾಗಿವೆ ಎಂದು ಬಿಜೆಪಿ ಆರೋಪಿಸಿ, ಕೆಲವು ದಾಖಲೆ ಬಿಡುಗಡೆ ಮಾಡಿತ್ತು. ಇದರಿಂದ ಇರಿಸುಮುರಿಸು ಅನುಭವಿಸಿದ ಕಾಂಗ್ರೆಸ್ ತನ್ನ app ಅನ್ನು ಈಗ ಡಿಲೀಟ್ ಮಾಡಿದೆ.

English summary
The Twitter war between the Congress and the Bhartiya Janata Party (BJP) escalated on Monday after Union Minister Smriti Irani tore into Congress Chief Rahul Gandhi for cornering Prime Minister Narendra Modi over NaMo app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X