ಬಿಗ್ ಬಿ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಸೇರಿದಂತೆ ಟ್ವಿಟ್ಟಿಗರ ಶುಭಾಶಯ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 11: ಇಂದು ತಮ್ಮ 75 ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ, ಅವರ ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

1969 ರಲ್ಲಿ ಸಾತ್ ಹಿಂದೂಸ್ತಾನಿ ಚಿತ್ರದ ಏಳು ನಾಯಕರಲ್ಲಿ ಒಬ್ಬರಾಗಿ ಚಿತ್ರರಂಗ ಪ್ರವೇಶಿಸಿದ ಅಮಿತಾಭ್ ಬಚ್ಚನ್, 1971 ರಲ್ಲಿ ತೆರೆಕಂಡ ಆನಂದ್ ಚಿತ್ರದ ಮೂಲಕ ಹೆಚ್ಚು ಪ್ರಸಿದ್ಧರಾದರು. ಆ ಚಿತ್ರದಲ್ಲಿನ ಅವರ ನಟನೆಗೆ ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯೂ ಸಿಕ್ಕಿತು. ನಂತರ ಬಂದ ನಮಕ್ ಹರಾಮ್, ಶೋಲೆ, ಅಮರ್ ಅಕ್ಬರ್ ಆಂಟನಿಯಿಂದ ಹಿಡಿದು, ಇತ್ತೀಚಿನ ಡಾನ್, ಅಗ್ನಿಪಥ್, ಬ್ಲ್ಯಾಕ್, ಪಾ, ಪಿಕು ಚಿತ್ರಗಳು ಅವರಿಗೆ ವಿಶೇಷ ಮನ್ನಣೆ, ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟವು.

1942 ರ ಅಕ್ಟೋಬರ್ 11 ರಂದು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ಅಮಿತಾಭ್ ಬಚ್ಚನ್ ಅವರ ಮೊದಲ ಹೆಸರು ಇನ್ ಖಿಲಾಬ್ ಶ್ರೀವಾಸ್ತವ್. ಪ್ರಖ್ಯಾತ ಕವಿಯಾಗಿದ್ದ ಅಮಿತಾಬ್ ಬಚ್ಚನ್ ರ ತಂದೆ ಡಾ.ಹರಿವಂಶ್ ರಾಯ್, "ಬಚ್ಚನ್" ಎಂಬ ಕಾವ್ಯ ನಾಮದಲ್ಲೇ ಹಲವು ಕೃತಿಗಳನ್ನು ರಚಿಸಿ, ನಂತರ ಮನೆತನದ ಹೆಸರೂ ಬಚ್ಚನ್ ಎಂದು ಬದಲಾಯಿತು. ಅಮಿತಾಭ್ ತಾಯಿ ಸಿಖ್ ಪಂಗಡದ ತೇಜಿ ಬಚ್ಚನ್.

ದೆಹಲಿಯ ವಿಶ್ವವಿದ್ಯಾಲಯದ ಕಿರೊರಿ ಮಾಲ್ ಕಾಲೇಜಿಗೆ ತೆರಳಿ ಬಿಎಸ್ಸಿ ಪದವಿ ಪಡೆದರು. ನಂತರ ಹಡಗು ಸಾಗಣೆಯ ದಲ್ಲಾಳಿಯಾಗಿದ್ದ ಅಮಿತಾಬ್, ಚಿತ್ರರಂಗದ ಆಕರ್ಷಣೆಯೊಂದಿಗೆ ಅಭಿನಯ ಪ್ರಪಂಚಕ್ಕೆ ಬಂದರು. ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಮಿತಾಭ್ ಬಚ್ಚನ್, 'ಕೌನ್ ಬನೇಗಾ ಕರೋಡ್ ಪತಿ' ಎಂಬ ಕ್ವಿಜ್ ಕಾರ್ಯುಕ್ರಮದ ನಿರೂಪಕರಾಗಿ, ತಮ್ಮ ಸೌಜನ್ಯ, ಸರಳತೆಯಿಂದ ಮತ್ತಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ.

ಅವರ ಜನ್ಮದಿನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಟ್ವಿಟ್ಟರ್ ನಲ್ಲಿ ಶುಭಹಾರೈಸಿದ್ದಾರೆ.

ನರೇಂದ್ರ ಮೋದಿ

ಅಮಿತಾಭ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಮತ್ತು ಹಲವು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿರುವ ರೀತಿ ಭಾರತ ಹೆಮ್ಮೆ ಪಡುವಂಥದು. ಅವರ ಆಯುರಾರೋಗ್ಯಕ್ಕಾಗಿ ನಾನುದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಜಾನ್ ಅಬ್ರಾಹಂ

ನಾನು ಚಿತ್ರರಂಗಕ್ಕೆ ಬಂದಾಗ ನನ್ನ ಕೈಹಿಡಿದು ಮುನ್ನಡೆಸಿದ ಅಮಿತಾಬ್ ಬಚ್ಚನ್ ಅವರ ಜೊತೆ ನಾನೆಂದಿಗೂ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ನಟ ಜಾನ್ ಅಬ್ರಾಹಂ ಟ್ವೀಟ್ ಮಾಡಿದ್ದಾರೆ.

ಸುದರ್ಶನ್ ಪಟ್ನಾಯಕ್

ಬಾಲಿವುಡ್ ನ ದಂತಕತೆಗೆ ಎಪ್ಪತೈದನೇ ಹುಟ್ಟುಹಬ್ಬದ ಶುಭಾಶಯಗಳು ಎಂದು, ತಮ್ಮ ಮರಳು ಶಿಲ್ಪದೊಂದಿಗೆ ಶುಭಹಾರೈಸಿದ್ದಾರೆ, ಖ್ಯಾತ ಮರಳು ಶಿಲ್ಪ ತಜ್ಞ ಸುದರ್ಶನ್ ಪಟ್ನಾಯಕ್.

ಮೊಹಮ್ಮದ್ ಕೈಫ್

ಜೀವಂತ ದಂತಕತೆ ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರೂ ಅಲಹಾಬಾದಿನವರು ಎನ್ನಲು ಹೆಮ್ಮೆಯಾಗುತ್ತದೆ.

ವೀರೇಂದ್ರ ಸೆಹ್ವಾಗ್

ದಂತಕತೆಗೆ ಜನ್ಮದಿನದ ಶುಭಾಶಯಗಳು. ಅವರು ನಮ್ಮ ದೇಶದ ಮಹಾನ್ ಸೂಪರ್ ಸ್ಟಾರ್ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಚೇತನ್ ಭಗತ್

ನಿಮ್ಮ ಚಿತ್ರಗಳನ್ನು ನೋಡುವುದಕ್ಕೆಂದೇ ವಿಸಿಆರ್ ಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಕಾಲದಿಂದ, ಇದೀಗ ನಿಮ್ಮ ಕೌನ್ ಬನೇಗಾ ಕರೋಡ್ ಪತಿ ನೋಡುವವರೆಗೂ ಅದೊಂದು ಸಂಭ್ರಮದ ಹೊತ್ತು. ಹುಟ್ಟು ಹಬ್ಬದ ಶುಭಾಶಯ ಎಂದು ಪ್ರಖ್ಯಾತ ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ.

ಮೋಹನ್ ಲಾಲ್

ಭಾರತೀಯ ಸಿನೆಮಾ ರಂಗದ ದಂತಕತೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ನಟ ಮೋಹನ್ ಲಾಲ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Big B, India's legendary film actor Amitabh Bachchan is celebrating his 75th birthday today(Oct 11). Including Prime minister Narendra Modi, many celebrities wish him. Here are few twitter statements.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ