ಲೋಕಸಭೆಯಲ್ಲಿ ಭೀಮ ಕೊರೆಗಾಂವ್ ಗಲಭೆ ಚರ್ಚೆ, ಗದ್ದಲ

ನವದೆಹಲಿ, ಜನವರಿ 03: ಭೀಮ ಕೊರೆಗಾಂವ್ ಹಿಂಸಾಚಾರ ಇಂದು ಲೋಕಸಭೆಯಲ್ಲಿ ಆಡಳಿತ ಪ್ರತಿಪಕ್ಷದ ನಡುವೆ ಕೋಲಾಹಲ ಉಂಟುಮಾಡಿದೆ.

ಭೀಮ ಕೊರೆಗಾಂವ್ ಗಲಭೆಯಲ್ಲಿ ಆರ್ಎಸ್ಎಸ್ ಕೈವಾಡವಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗಂಭಿರ ಆರೋಪ ಮಾಡಿದ್ದು, ಮರಾಠಾ ಹಾಗೂ ಮಹರ್ ಸಮುದಾಯದವರ ನಡುವೆ ವೈಷಮ್ಯ ಹುಟ್ಟುಹಾಕಲು ಆರ್ಎಸ್ಎಸ್ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರವೇ ಗಲಭೆಗೆ ನೇರ ಹೊಣೆ ಎಂದ ಮಲ್ಲಿಕಾರ್ಜುನ್ ಖರ್ಗೆ ಅವರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

Bhima Koregaon issue discused in Parliment today

ಭಾರತದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದ ಅವರು ಪ್ರಧಾನಿ ಮೋದಿ ಅವರು ಇದಕ್ಕೆ ಉತ್ತರ ನೀಡಬೇಕು ಎಂದರು.

ಲೋಕಸಭೆಯಲ್ಲಿ ಉತ್ತರ ನೀಡಿದ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು ಭೀಮ ಕೊರೆಗಾಂವ್ ಗಲಭೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಪ್ರತಿ ಆರೋಪ ಮಾಡಿದ್ದಾರೆ. ಅನಂತ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಸದಸ್ಯರು ಕೆರಳಿದ್ದು, ಲೋಕಸಭೆ ಗದ್ದಲದ ಗೂಡಾಯಿತು.

ಗದ್ದಲ ಹೆಚ್ಚಾದ ಕಾರಣ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಕಲಪವನ್ನು 15 ನಿಮಿಷ ಮುಂದೂಡಿದರು. ನಂತರ ಕಲಾಪ ಪ್ರಾರಂಭವಾದಾಗಲೂ ಕಾಂಗ್ರೆಸ್ ಸದಸ್ಯರು ಮೋದಿ ಅವರು ಕಲಾಪಕ್ಕೆ ಹಾಜರಾಗಬೇಕೆಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+