ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು, ಮೈಸೂರಿಗೆ ಕೇಂದ್ರದಿಂದ ಬಂಪರ್ ಕೊಡುಗೆ

|
Google Oneindia Kannada News

ನವದೆಹಲಿ, ಫೆ.26 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರದ ಯುಪಿಎ ಸರ್ಕಾರ ರಾಜ್ಯಕ್ಕೆ ಮತ್ತೊಂದು ಕೊಡುಗೆ ನೀಡಿದೆ. ಜವಾಹರಲಾಲ್ ನೆಹರೂ ನಗರಪ್ರದೇಶ ನವೀಕರಣ ಯೋಜನೆ (ಜೆನರ್ಮ್)ಯಡಿ 1,41,276.21 ಕೋಟಿ ಮೊತ್ತದ ಹತ್ತು ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಒಳಪಡಲಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಈ ಯೋಜನೆಗಳು ಎರಡೂ ನಗರಗಳಲ್ಲಿ ಅನುಷ್ಠಾನಗೊಳ್ಳಲಿವೆ. ಯೋಜನೆಗೆ ಕೇಂದ್ರ ಸರ್ಕಾರ 52,440 ಕೋಟಿ ರೂ ಒದಗಿಸಲಿದೆ. ಮೊದಲ ಕಂತಿನಲ್ಲೇ ಕರ್ನಾಟಕಕ್ಕೆ ನೀಡುವ ಮೊತ್ತ 13, 111 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

Manmohan Singh

ಈ ಯೋಜನೆಗಳು ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಅನುಷ್ಠಾನಗೊಳ್ಳಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿನಲ್ಲಿ 6662.23 ಕೋಟಿಯ ನಾಲ್ಕು ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಯೋಜನೆಯ ವಿವರಗಳು ಹೀಗಿವೆ. [ನರ್ಮ್ ಯೋಜನೆಯಡಿ ಸಿಕ್ತು 2000 ಬಸ್]

ಬೆಂಗಳೂರಿಗೆ ಸಿಕ್ಕಿದ್ದೇನು?
* ಈಜಿಪುರ ಮುಖ್ಯರಸ್ತೆ ಜಂಕ್ಷನ್-ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಕೇಂದ್ರೀಯ ಸದನದ ನಡುವೆ ಎಲಿವೇಟೆಡ್ ಕಾರಿಡಾರ್ ಯೋಜನೆ. ಯೋಜನೆ ಒಟ್ಟು ವೆಚ್ಚ 16,335 ಕೋಟಿ, ಕೇಂದ್ರ ಸರ್ಕಾರದ ಪಾಲು 5, 717.25 ಕೋಟಿ.

* ಮಿನರ್ವ್ ಸರ್ಕಲ್ ಜಂಕ್ಷನ್‌ನಿಂದ ಹಡ್ಸನ್ ವೃತ್ತದವರೆಗೆ ಎಲಿವೇಟೆಡ್ ರಸ್ತೆ. ಒಟ್ಟು ವೆಚ್ಚ 12,910 ಕೋಟಿ. ಇದಕ್ಕೆ ಕೇಂದ್ರ ಸರ್ಕಾರ 4,518.50 ಕೋಟಿ ರೂ. ನೀಡಲಿದೆ.

* 37479.45 ಕೋಟಿ ವೆಚ್ಚದಲ್ಲಿ ದಾಸರಹಳ್ಳಿ ವಲಯ-1ರಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಯೋಜನೆ ಕೇಂದ್ರ ಸರ್ಕಾರದ ಪಾಲು 13,117.81 ಕೋಟಿ. ದಾಸರಹಳ್ಳಿ ವಲಯ-2ರಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 15,303.12 ಕೋಟಿ ಇದರಲ್ಲಿ ಕೇಂದ್ರದ ಪಾಲು 5356.09 ಕೋಟಿ.

* ಮಹದೇವಪುರ ಮೊದಲ ಹಂತದಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 30,504.69 ಕೋಟಿ. ಯೋಜನೆ. ಇದಕ್ಕೆ ಕೇಂದ್ರ ಸರ್ಕಾರ 10,676.64 ಕೋಟಿ ರೂ ನೀಡಲಿದೆ. ಮಹದೇವಪುರ ನಗರಸಭೆ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿಗೆ 1018 ಕೋಟಿ ಯೋಜನೆ.

* ಯಲಹಂಕ ವಲಯ ಯೋಜನೆ-2ರಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 22082.23 ಕೋಟಿಯ ಯೋಜನೆ ಇದರಲ್ಲಿ ಕೇಂದ್ರ ಸರ್ಕಾರದ ಪಾಲು 7728.78 ಕೋಟಿ.

ಮೈಸೂರಿಗೆ ಸಿಕ್ಕಿದ್ದೇನು?

* ಬೆಂಗಳೂರು-ಮೈಸೂರು ರಸ್ತೆ ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ, ಇದಕ್ಕೆ ಒಟ್ಟು 1462.65 ಕೋಟಿ ಯೋಜನೆ ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರ 1170.12 ಕೋಟಿ ರೂ. ನೀಡಲಿದೆ.

* ಜೆಎಸ್‌ಎಸ್-ನಂಜನಗೂಡು ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಒಟ್ಟು 2698.75 ಕೋಟಿ ರೂ. ಯೋಜನೆ ಇದಕ್ಕೆ ಕೇಂದ್ರ 2159 ಕೋಟಿ ರೂ. ಅನುದಾನ ನೀಡಲಿದೆ. ಹುಣಸೂರು ರಸ್ತೆ-ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಒಟ್ಟು 1214.60 ಕೋಟಿ ವೆಚ್ಚ ಕೇಂದ್ರದಿಂದ 303.65 ಕೋಟಿ ಅನುದಾನ.

* ಕೆಆರ್‌ಎಸ್ ರಸ್ತೆ-ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ 982.58 ಕೋಟಿ ವೆಚ್ಚ ಕೇಂದ್ರ ಸರ್ಕಾರದ ಪಾಲು 196.52 ಕೋಟಿ ರೂ.

English summary
The Center on Tuesday, Feb 25 approved 10 infrastructure projects including building of flyovers, grade separators and diversion of sewerage waters in Bangalore and Mysore, involving expenditure of Rs 1412.76 core under the Centrally sponsored Jawaharlal Nehru National Urban Renewal Mission (JnNURM).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X