ಸ್ಪೈಸ್‌ಜೆಟ್ ವಿಮಾನದೊಳಗೆ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

ನವದೆಹಲಿ,ಜುಲೈ 25: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಮಾರ್ಗಮಧ್ಯದಲ್ಲೇ ಆರು ತಿಂಗಳ ಮಗು ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ.

ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬವು ಪಾಟ್ನಾದಿಂದ ದೆಹಲಿಗೆ ಪ್ರಯಾಣ ಬೆಳೆಸಿತ್ತು.

ರಚಿತಾ ಕುಮಾರಿ( ಮೃತ ಮಗು) ಮಗುವಿಗೆ ಹೃದಯದಲ್ಲಿ ರಂಧ್ರವಿತ್ತು, ಅದನ್ನೂ ಹೊರತುಪಡಿಸಿ ಹೃದಯಕ್ಕೆ ಸಂಬಂಧಿಸಿದ ಇನ್ನೊಂದು ಕಾಯಿಲೆಯಿಂದಲೂ ಮಗು ಬಳಲುತ್ತಿತ್ತು. ಮಾರ್ಗಮಧ್ಯದಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು ಎಂದು ಏರ್‌ಪೋರ್ಟ್ ಪೊಲೀಸ್ ಆಯುಕ್ತ ಸಂಜಯ್ ಭಾಟಿಯಾ ತಿಳಿಸಿದ್ದಾರೆ.

Baby dies in Delhi patna spicejet flight

ದೆಹಲಿಯಲ್ಲಿರುವ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಲಾಗುತ್ತಿತ್ತು.

ಕೆಲವೇ ದಿನಗಳ ಹಿಂದೆ ಸ್ಪೈಸ್‌ಜೆಟ್ ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದ ಕಾರಣ ದೆಹಲಿಗೆ ಹೊರಟಿದ್ದ ವಿಮಾನವನ್ನು ವಾರಣಾಸಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಗಿತ್ತು. ಅವರು ಬ್ಯಾಂಕಾಂಕ್‌ನಿಂದ ದೆಹಲಿಗೆ ಬರುವವರಿದ್ದರು.

ಹಾರುತ್ತಿದ್ದ ವಿಮಾನವೊಂದರಿಂದ ವ್ಯಕ್ತಿಯೊಬ್ಬನ ದೇಹ ಲಂಡನ್‌ನ ಮನೆಯೊಂದರ ಉದ್ಯಾನದಲ್ಲಿ ಬಿದ್ದ ಘಟನೆ ನಡೆದಿತ್ತು. ಕೀನ್ಯಾದ ನೈರೋಬಿಯಿಂದ ಹೊರಟಿದ್ದ ಕೀನ್ಯಾ ಏರ್‌ವೇಸ್ ವಿಮಾನವು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲೇ ವ್ಯಕ್ತಿಯ ದೇಹ ನೆಲಕ್ಕೆ ಬಿದ್ದಿದೆ.

ವಿಮಾನದ ಅಡಿಭಾಗದ ಕ್ಯಾರಿಯೇಜ್‌ನಲ್ಲಿ ಆತ ಅಡಗಿ ಕುಳಿತಿದ್ದ ಎಂದು ಶಂಕಿಸಲಾಗಿತ್ತು. A380 ವಿಮಾನದ ಜಗತ್ತಿನ ಅತ್ಯಂತ ಹತ್ತಿರ ಮಾರ್ಗದ ಸೇವೆ ಆರಂಭ ಭಾನುವಾರ ಮಧ್ಯಾಹ್ನ 3.41ರ ಸುಮಾರಿಗೆ ದಕ್ಷಿಣ ಲಂಡನ್‌ನ ಕ್ಲಾಫಮ್‌ನಲ್ಲಿರುವ ತೋಟದಲ್ಲಿ ವ್ಯಕ್ತಿಯ ದೇಹ ಬಿದ್ದಿದೆ.

ಆತ ಯಾರು? ಯಾವ ದೇಶದವನು ಎಂಬ ಮಾಹಿತಿ ಗೊತ್ತಾಗಿಲ್ಲ. ವಿಮಾನದ ಕಂಪಾರ್ಟ್‌ಮೆಂಟ್ ಒಂದರಲ್ಲಿ ಚೀಲ, ನೀರು ಮತ್ತು ಸ್ವಲ್ಪ ಆಹಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+