ಆತ್ಮನಿರ್ಭರ್ ಭಾರತ: ಹೊಸ ಉದ್ಯೋಗಗಳಿಗೆ ಪ್ರೋತ್ಸಾಹ; 2023 ರ ವೇಳೆಗೆ 22,810 ಕೋಟಿ ರೂ. ವೆಚ್ಚ
ನವದೆಹಲಿ,
ಡಿಸೆಂಬರ್ 09: ಇಂದು ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಪ್ರಮುಖ ನಿರ್ಧಾರ ಹೊರಬಿದ್ದಿದ್ದು, ಹೊಸ ಉದ್ಯೋಗ ಯೋಜನೆಗೆ ಕೇಂದ್ರ ಸಚಿವ ಸಂಪುಟ 22,810 ಕೋಟಿ ರೂ. ಖರ್ಚು ಮಾಡಲು ಒಪ್ಪಿಗೆ ಸೂಚಿಸಿದೆ. id="toptextpromo"> id='are-slot-1' class='oiad oi-axt oiadv'>ಕೇಂದ್ರ
ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಮಾತನಾಡಿ, ''ಆತ್ಮನಿರ್ಭರ್ ಭಾರತ ಯೋಜನೆಯಡಿ, ಎರಡು ವರ್ಷಗಳ ಕಾಲ ಕಂಪನಿಗಳು ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ನೌಕರರು ಮತ್ತು ಕಂಪನಿಗಳ ಪರವಾಗಿ ಸರ್ಕಾರವು ನಿವೃತ್ತಿ ನಿಧಿಗೆ ಕೊಡುಗೆ ನೀಡಲಿದೆ. ಈ ಯೋಜನೆಗೆ 2023 ರ ವೇಳೆಗೆ 22810 ಕೋಟಿ ರೂ. ವೆಚ್ಚವಾಗಲಿದ್ದು, 58.5 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ'' ಎಂದು ಕೇಂದ್ರ ಕಾರ್ಮಿಕ ಸಚಿವರು ಹೇಳಿದ್ದಾರೆ. id='are-slot-2' class='oiad oi-axt oiadv'>
1584 ಕೋಟಿ ರೂ. ಖರ್ಚು
ಈ ಯೋಜನೆಗಾಗಿ ನಿಗದಿಪಡಿಸಿದ 22,810 ಕೋಟಿ ರೂ.ಗಳಲ್ಲಿ 1584 ಕೋಟಿ ರೂ.ಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಖರ್ಚು ಮಾಡಲಾಗುವುದು. ಆತ್ಮನಿರ್ಭರ್ ರೋಜ್‌ಗಾರ್ ಯೋಜನೆ ಅಡಿಯಲ್ಲಿ, ಹೊಸದಾಗಿ ನೇಮಕಗೊಂಡವರು ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಹಣಕಾಸಿನ ನೆರವು ಪಡೆಯುತ್ತಾರೆ.

ಎರಡು ವರ್ಷಗಳ ಕಾಲ ಪಿಎಫ್ ಹಣ ಪಾವತಿ
ಕಾರ್ಮಿಕರು ಮತ್ತು ಕಂಪನಿಗಳು (ನೇಮಕ ಮಾಡುವ ಸಂಸ್ಥೆಗಳು) ಎರಡು ವರ್ಷಗಳ ಕಾಲ ಪಿಎಫ್ ನಿಧಿಗೆ ನೀಡುವ ಕೊಡುಗೆಯನ್ನು ಸಬ್ಸಿಡಿ ಒಳಗೊಂಡಿರುತ್ತದೆ. ಪಿಎಫ್ ಪ್ರತಿ ತಿಂಗಳು ನೌಕರನ ಮೂಲ ವೇತನದ ಶೇಕಡಾ 12ರಷ್ಟಿದೆ. ಕಂಪನಿಯು ಇದಕ್ಕೆ ಹೆಚ್ಚಿನ ಹಣವನ್ನು ನೀಡುತ್ತದೆ, ಅಂದರೆ ಒಟ್ಟು ಮೊತ್ತವು ಶೇಕಡಾ 24 ಆಗುತ್ತದೆ. ಈ ಎರಡು ಮೊತ್ತವನ್ನು ಸರ್ಕಾರ ಪಾವತಿಸಲಿದೆ.

ಸಬ್ಸಿಡಿ ಪಡೆಯಲು ಕಂಪನಿಗಳಿಗೆ ನಿಯಮ ಅನ್ವಯ
ಈ ಯೋಜನೆಯಡಿ ಸಬ್ಸಿಡಿ ಪಡೆಯಲು ಕಂಪನಿಗಳಿಗೆ ಕೆಲವು ನಿಯಮ ಅನ್ವಯಿಸುತ್ತದೆ. ಆತ್ಮನಿರ್ಭರ್ ಭಾರತ ಉದ್ಯೋಗ ಯೋಜನೆಯಡಿ, ಇಪಿಎಫ್‌ನಲ್ಲಿ ನೋಂದಾಯಿಸಲ್ಪಟ್ಟ ಪ್ರತಿಯೊಂದು ಕಂಪನಿಯು ಹೊಸ ಜನರನ್ನು ನೇಮಿಸಿಕೊಳ್ಳುವ ಮೂಲಕ ಸಬ್ಸಿಡಿಯ ಲಾಭವನ್ನು ಪಡೆಯುತ್ತದೆ. ಆದರೆ ಇಲ್ಲಿ ಒಂದು ಮಿತಿ ಹೊಂದಿದ್ದು, ಗರಿಷ್ಠ 50 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯು ಕನಿಷ್ಠ ಎರಡು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಮತ್ತೊಂದೆಡೆ, ಒಂದು ಕಂಪನಿಯಲ್ಲಿ 50 ಜನರು ಕೆಲಸ ಮಾಡುತ್ತಿದ್ದರೆ, ಆ ಕಂಪನಿಯು ಕನಿಷ್ಠ 5 ಹೊಸ ಜನರನ್ನು ನೇಮಿಸಿಕೊಳ್ಳಬೇಕಾಗುತ್ತದೆ.

ಉದ್ಯೋಗಿಗಳಿಗೂ ನಿಯಮವಿದೆ!
ಆತ್ಮನಿರ್ಭರ್ ಭಾರತ್ ಉದ್ಯೋಗ ಯೋಜನೆಯಡಿ, ಇಪಿಎಫ್‌ಒನಲ್ಲಿ ನೋಂದಾಯಿಸಲ್ಪಟ್ಟ ನೌಕರರಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಅವರ ಸಂಬಳ (ಮಾಸಿಕ) 15,000 ರೂ.ಗಿಂತ ಕಡಿಮೆ ಇರಬೇಕು. ಇನ್ನೊಂದು ವಿಷಯವೆಂದರೆ ಕೊರೊನಾ ಅವಧಿಯಲ್ಲಿ ಉದ್ಯೋಗವನ್ನು ತೊರೆದ ಜನರು ಮತ್ತು ಅಕ್ಟೋಬರ್ 1 ರಂದು ಅಥವಾ ನಂತರ ಅವರಿಗೆ ಮತ್ತೆ ಕೆಲಸ ಸಿಕ್ಕಿದ ಜನರು ಸಹ ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ, ವೇತನವು 15,000 ರೂ.ಗಿಂತ ಕಡಿಮೆಯಿರಬೇಕು.












Click it and Unblock the Notifications