• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಈಗ ಹೇಗಿದೆ?

|
   ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಈಗ ಹೇಗಿದೆ?

   ನವದೆಹಲಿ, ಆಗಸ್ಟ್ 10: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದಬ ಮಾಹಿತಿಯನ್ನು ಏಮ್ಸ್ ಆಸ್ಪತ್ರೆ ನೀಡಿದೆ.

   ರಾಜ್ಯಸಭೆ ಸದಸ್ಯರಾಗಿರುವ ಅರುಣ್ ಜೇಟ್ಲಿ, ನಿತ್ರಾಣ ಮತ್ತು ಆಯಾಸದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ದಾಖಲು ಮಾಡಲಾಗಿದೆ. ಅವರನ್ನು ಐಸಿಯುದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

   ಐಸಿಯುದಲ್ಲಿ ಅರುಣ್ ಜೇಟ್ಲಿ: ಆಸ್ಪತ್ರೆಗೆ ಮೋದಿ, ಶಾ ಭೇಟಿ

   ಏಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಅರುಣ್ ಜೇಟ್ಲಿಗೆ ಅಂತಃಸ್ರಾವಶಾಸ್ತ್ರಜ್ಞ ನೆಫ್ರಾಲಜಿಸ್ಟ್‌ಗಳು ಮತ್ತು ಹೃದ್ರೋಗ ತಜ್ಞರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೇಟ್ಲಿ ಆರೋಗ್ಯ ವಿಚಾರಿಸಲು ಶುಕ್ರವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ನಾಯಕರು ಏಮ್ಸ್ ಗೆ ಭೇಟಿ ನೀಡಿದ್ದರು. ಇಂದು ಬೆಳಿಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಏಮ್ಸ್ ತಲುಪಿದ್ದಾರೆ.

   ಏಮ್ಸ್ ನಿಂದ ವೈದ್ಯಕೀಯ ಬುಲೆಟಿನ್ ನೀಡಲಾಗಿದೆ. ಕಳೆದ ವರ್ಷ ಮೂತ್ರ ಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅರುಣ್ ಜೇಟ್ಲಿ, ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಈ ಬಾರಿ ಮೋದಿ ಸಂಪುಟದಲ್ಲಿ ತಮ್ಮನ್ನು ಸೇರಿಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೇಟ್ಲಿ ಮನವಿ ಮಾಡಿದ್ದರು.

   ಮೋದಿ ಅವರ ಹಿಂದಿನ ಸರ್ಕಾರದಲ್ಲಿ ಅರುಣ್ ಜೇಟ್ಲಿ ಸರ್ಕಾರದ ಪ್ರಬಲ ಮಂತ್ರಿಯಾಗಿದ್ದರು. ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ, ಮೋದಿ ಸರ್ಕಾರವು ನೋಟು ರದ್ಧತಿ ಮತ್ತು ಜಿಎಸ್ಟಿ ಅಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು.

   ಶುಕ್ರವಾರ ರಾತ್ರಿ ಏಮ್ಸ್ ಹೊರಡಿಸಿದ ವೈದ್ಯಕೀಯ ಬುಲೆಟಿನ್ ನಲ್ಲಿ ಅರುಣ್ ಜೇಟ್ಲಿಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಜೇಟ್ಲಿ ಅವರ ರಕ್ತದೊತ್ತಡ ಸಾಮಾನ್ಯವಾಗಿದೆ. ಅವರ ಆರೋಗ್ಯವನ್ನು ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಮೇಲ್ವಿಚಾರಣೆ ಮಾಡುತ್ತಿದೆ. ಅರುಣ್ ಜೇಟ್ಲಿ ಹೃದಯ-ನರ ವಿಭಾಗದ ಐಸಿಯುನಲ್ಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭಿಸಿದೆ.

   ಅರುಣ್ ಜೇಟ್ಲಿ ಅವರು ಕಳೆದ ವರ್ಷ ಮೂರು ತಿಂಗಳ ಕಾಲ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

   English summary
   Arun Jaitley Health Condition Is Stable, responding to the treatment and his condition is stable.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X