ಕರ್ನಾಟಕ; ಹೈ-ಸ್ಪೀಡ್ ರೈಲು, ವಿಮಾನ ಸೇವೆ, ಟೌನ್‌ಶಿಪ್ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ
ರಾಜ್ಯದಲ್ಲಿ ಸಾರಿಗೆ ಮೂಲಸೌಕರ್ಯ ಹೊಸ ಯೋಜನೆಗಳಿಗೆ ಭೂ ಸ್ವಾಧೀನ, ಹೊಸ ರೈಲು ಯೋಜನೆ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆರಂಭಿಕ ವೇಗ ತೊರೆತಿದೆ. ಕಾರಣ ಕರ್ನಾಟಕ ಸರ್ಕಾರ ಗುರುವಾರ (ಏಪ್ರಿಲ್ 30) ನಡೆದ ಸಚಿವ ಸಂಪುಟ ಸಭೆಯ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಪ್ರಮುಖ ರಸ್ತೆ ಕಾರಿಡಾರ್, ಹೈ-ಸ್ಪೀಡರ್ ರೈಲು ಕಾರಿಡಾರ್, ವಿಮಾನ ಸೇವೆ ಹಾಗೂ ಭೂಸ್ವಾಧೀನದಂತಹ ಯೋಜನೆಗಳು ಇವೆ. ಅನುಮೋದಿ ಅಂಶಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಮಾಹಿತಿ ಮುಂದಿದೆ.
ಕರ್ನಾಟಕ ಸಚಿವ ಸಂಪುಟ ಏಪ್ರಿಲ್ 30ರಂದು ಹಲವಾರು ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿನ ಸಚಿವ ಸಂಪುಟ ಸಭೆಯು ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ 18,133 ಕೋಟಿ ರೂ. ವೆಚ್ಚದ ಸಮಗ್ರ ಉಪನಗರ ಟೌನ್‌ಶಿಪ್ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಇನ್ನೂ ಬೆಂಗಳೂರು-ಹೈದರಾಬಾದ್ ಮತ್ತು ಚೆನ್ನೈ-ಬೆಂಗಳೂರು ನಡುವೆ ಅತೀ ವೇಗದ ರೈಲು ಕಾರಿಡಾರ್‌ಗಳಿಗೂ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ (HSR) ತಾತ್ವಿಕ ಅನುಮೋದನೆ ಕೊಡಲಾಗಿದೆ. ಈ ನಿರ್ಧಾರಗಳು ಕೈಗೊಳ್ಳಲಾಯಿತು. ರಾಮನಗರ ತಾಲೂಕಿನ ಒಂಬತ್ತು ಹಳ್ಳಿಗಳಲ್ಲಿ 7,404 ಎಕರೆ ಭೂಸ್ವಾಧೀನ ಕಾರ್ಯ ಆರಂಭಿಸಲಾಗುತ್ತಿದೆ. ಸರ್ಕಾರ 7,500 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡಲಿದೆ.
ಕಾನೂನು ಸಚಿವ ಎಚ್.ಕೆ. ಪಾಟೀಲ್, 2013ರ ಭೂಸ್ವಾಧೀನ ಕಾಯ್ದೆ ಅನ್ವಯ ನ್ಯಾಯಯುತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದ್ದಾರೆ. ರೈತರ ಪ್ರತಿಭಟನೆಗಳ ಹೊರತಾಗಿಯೂ, ಪ್ರತಿ ಎಕರೆಗೆ 9,693 ಚದರ ಅಡಿ ಅಭಿವೃದ್ಧಿಪಡಿಸಿದ ಜಾಗ ಅಥವಾ ಸಮಾನ ಮೌಲ್ಯವನ್ನು ನೀಡಲಾಗುವುದು ಎಂದರು.
ಸಚಿವ ಸಂಪುಟದ ತಾತ್ವಿಕ ಅನುಮೋದನೆ ಪಡೆದಿರುವ ರೈಲು ಕಾರಿಡಾರ್‌ಗಳಲ್ಲಿ 607 ಕಿ.ಮೀ. ಉದ್ದದ ಬೆಂಗಳೂರು-ಹೈದರಾಬಾದ್ ಮತ್ತು 306 ಕಿ.ಮೀ. ಉದ್ದದ ಚೆನ್ನೈ-ಬೆಂಗಳೂರು ಮಾರ್ಗಗಳು ಸೇರಿವೆ. ಈ ಯೋಜನೆಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನ ಸಂಪರ್ಕ ಜಾಲವನ್ನು ಮತ್ತಷ್ಟು ಬಲಪಡಿಸಿ, ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ ಎಂದು ಸರ್ಕಾರವು ತಿಳಿಸಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಹಾದು ಹೋಗುತ್ತೆ ಹೊಸ ರೈಲು ಮಾರ್ಗ
ಬೆಂಗಳೂರು-ಹೈದರಾಬಾದ್ 607 ಕಿ.ಮೀ. ಮಾರ್ಗದ 101 ಕಿ.ಮೀ. ಕರ್ನಾಟಕದಲ್ಲಿ ಹಾದುಹೋಗುತ್ತದೆ. ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಲಿಪುರ, ದೇವನಹಳ್ಳಿ, ಕೊಡಿಗೆಹಳ್ಳಿ ನಿಲ್ದಾಣಗಳು ಬರಲಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ದೇವನಹಳ್ಳಿ ನಿಲ್ದಾಣವು ವಿಮಾನ ನಿಲ್ದಾಣ ಮತ್ತು ಪ್ರಾದೇಶಿಕ ಸಂಪರ್ಕ ಸುಧಾರಿಸಲಿದೆ. ಕೊಡಿಗೆಹಳ್ಳಿ, ದೇವನಹಳ್ಳಿ, ಆಲಿಪುರ, ಹಿಂದೂಪುರ, ಅನಂತಪುರ, ಕರ್ನೂಲ್, ಮಹಬೂಬ್‌ನಗರ, ಶಂಶಾಬಾದ್ ಮೂಲಕ ಈ ಮಾರ್ಗ ಸಾಗಲಿದೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈ-ಬೆಂಗಳೂರು ಕಾರಿಡಾರ್ 306 ಕಿ.ಮೀ. ಉದ್ದವಿದ್ದು, ಸುಮಾರು 100 ಕಿ.ಮೀ. ಕರ್ನಾಟಕದಲ್ಲಿ ಸಾಗುತ್ತದೆ. ಕೋಲಾರ, ಕೊಡಿಗೆಹಳ್ಳಿ, ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ ಪ್ರಮುಖ ನಿಲ್ದಾಣಗಳು. ಮನಿ ಕಂಟ್ರೋಲ್ ವರದಿಯಂತೆ, ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್‌ನಲ್ಲಿ ಭೂಗತ ನಿಲ್ದಾಣಗಳು ಬರಲಿವೆ. ಈ ಯೋಜನೆಗಳು ಮೆಟ್ರೋ ಹಾಗೂ ಉಪನಗರ ರೈಲು ಜಾಲಗಳೊಂದಿಗೆ ಸಂಯೋಜನೆಗೊಳ್ಳಲಿವೆ.
HSR ಕಾರಿಡಾರ್ ಯೋಜನೆಗೆ ವೇಗ
ಮಹತ್ವಾಕಾಂಕ್ಷೆಯ ಹೈದರಾಬಾದ್-ಬೆಂಗಳೂರು ಎಚ್‌ಎಸ್‌ಆರ್ ಕಾರಿಡಾರ್ ಅನುಷ್ಠಾನಕ್ಕೆ ಮೂಲಸೌಕರ್ಯ ಅಭಿವೃದ್ಧಿ ಆದ್ಯತೆ ನೀಡಲಾಗಿದೆ. ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ಅಧಿಕಾರ ನೀಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು. ಈ ಯೋಜನೆಯು ಬೆಂಗಳೂರನ್ನು ಅಂತಾರಾರಾಷ್ಟ್ರೀಯ ಸಂಚಾರ ಕೇಂದ್ರವಾಗಿ ಬಲಪಡಿಸಲಿದೆ. ಆರ್ಥಿಕ ಕಾರಿಡಾರ್‌ಗಳ ಸಂಪರ್ಕ ಸುಧಾರಿಸುತ್ತದೆ. ಯೋಜನೆ ಜಾರಿಗೆ ಭಾರತ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಬೆಂಗಳೂರು ಬೀದರ್ ಮತ್ತು ಕಲಬುರಗಿ ವಿಮಾನ ಸೇವೆ
ಕಲ್ಯಾಣ ಕರ್ನಾಟಕ ಪ್ರದೇಶದ ವಾಯು ಸಂಪರ್ಕ ಸುಧಾರಣೆಗೆ ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ಆರ್ಥಿಕ ಸಹಾಯಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ಸಂಪರ್ಕ ಕಲ್ಪಿಸುವ ವಿಮಾನ ಮಾರ್ಗಗಳಿಗೆ ಇದು ಅನ್ವಯ. ಬೆಂಗಳೂರಿಗೆ 12 ಗಂಟೆಗಳಿಗಿಂತ ಹೆಚ್ಚು ರಸ್ತೆ ಪ್ರಯಾಣ ಸಮಯ ತೆಗೆದುಕೊಳ್ಳುವ ಪ್ರದೇಶಗಳಲ್ಲಿ ಸಂಪರ್ಕ ಸುಧಾರಣೆ ಇದರ ಗುರಿಯಾಗಿದೆ. ಒಟ್ಟು ಯೋಜನೆ ವೆಚ್ಚ 28.47 ಕೋಟಿ ವೆಚ್ಚವೆಂದು ಎಂದು ಅಂದಾಜಿಸಲಾಗಿದೆ. ಹೀಗೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡು ಸಂಪುಟದಿಂದ ಒಪ್ಪಿಗೆ ನೀಡಿದೆ. ಆಯಾ ಯೋಜನೆಗಳು ವೇಗ ಪಡೆದುಕೊಳ್ಳಲಿವೆ.














Click it and Unblock the Notifications