ಬಜೆಟ್ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಅರುಣ್ ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 1: ಕೇಂದ್ರ ಬಜೆಟ್ ಬಗ್ಗೆ ಇರುವ ಗೊಂದಲ, ಅಭಿಪ್ರಾಯ, ಬಜೆಟ್ನ ಲೋಪ ದೋಷಗಳೇನು? ನಿರೀಕ್ಷೆಗಳೇನಿತ್ತು? ಒಟ್ಟಾರೆ ಬಜೆಟ್ಟಿನ ಅನಿಸಿಕೆ ಮತ್ತು ಪ್ರಶ್ನೆಗಳಿಗೆ ಅರ್ಥಸಚಿವ ಅರುಣ್ ಜೇಟ್ಲಿ ಸಂಜೆ ಉತ್ತರಿಸುವುದಾಗಿ ಎಂದು ಟ್ವೀಟ್ ಮಾಡಿದ್ದಾರೆ.

ಅದೂ ಉತ್ತರವನ್ನೂ ಸಹ ಟ್ವೀಟ್ ನಲ್ಲಿಯೇ ಮಾಡಲಿದ್ದಾರೆ. ಇಂದು(ಫೆ.1) ಸಂಜೆ 6:30 ಕ್ಕೆ ಅರ್ಥ ಸಚಿವ ಅರುಣ್ ಜೇಟ್ಲಿ ಅವರು ಶ್ರೀ ಸಾಮಾನ್ಯರು ಕೇಳುವ ಪ್ರಶ್ನೆಗಳನ್ನು ಉತ್ತರಿಸುವ ಭರವಸೆ ನೀಡಿದ್ದಾರೆ.

ಪ್ರಶ್ನೆ ಕೇಳಲು ಏನು ಮಾಡಬೇಕು?

ಇನ್ನು ಪ್ರಶ್ನೆಕೇಳಲು ಮಾಡಲ ಬೇಕಾಗಿರುವುದು ಇಷ್ಟೆ ನೀವು ನಿಮ್ಮ ಟ್ವಿಟರ್ ಖಾತೆಯಲ್ಲಿ #AskYourFM ಈ ಹ್ಯಾಶ್ ಟ್ಯಾಗ್ ಬಳಸಿಕೊಂಡು ನಿಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಿ, ಜೇಟ್ಲಿ ಅವರಿಂದ ಉತ್ತರ ಪಡೆಯಿರಿ

ಇದು ಯೂಟೂಬ್ ಅಲ್ಲಿ ಲೈವ್ ಸ್ಟ್ರೀಮ್ ನಡೆಯಲಿದೆ. ಅದಕ್ಕಾಗಿ ಲೈವ್ ಸ್ಟ್ರೀಮಿನ ಪರದೆಯಲ್ಲಿ ಕೌಂಟ್ ಡೌನ್ ಕೂಡ ಪ್ರಾರಂಭವಾಗಿದೆ.ಇನ್ನು ನೀವು ಸಂಜೆ ಪ್ರಾರಂಭವಾಗುವ ಬಜೆಟ್ ಮಾತಕತೆಯನ್ನು ಯೂಟೂಬ್ ಮೂಲದ ನೇರವಾಗಿ ವೀಕ್ಷಸಬಹುದಾಗಿದೆ.

ತಂತ್ರಜ್ಞಾನವನ್ನು ಬಿಜೆಪಿ ಚುನಾವಣಾ ಕಾಲದಿಂದಲೂ ಚೆನ್ನಾಗಿ ಬಳಸಿಕೊಂಡುಬಂದಿದೆ ಈಗಲೂ ಅದರ ಬಳಕೆಯ ಸಾಕ್ಷಿ ನಿಮ್ಮಮುಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Finance Minister Arun Jaitely will present Union Budget 2017-18 in Lok Sabha. Ask your questions to FM using #MyQuestionToFM
Please Wait while comments are loading...