ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ದುರಂಹಕಾರಿ ಕಾಂಗ್ರೆಸ್ಸಿಗರು ಠೇವಣಿ ಕಳೆದುಕೊಳ್ಳಲಿದ್ದಾರೆ: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಮಾರ್ಚ್ 11: ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅದು ಸಾಧ್ಯವಾಗದೇ ಇದ್ದಾಗ, ಅವರ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.

ಮುಸ್ತಫಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್, ಕಾಂಗ್ರೆಸ್ಸಿಗರು ದುರಂಹಕಾರಿಗಳು, ದೆಹಲಿ ವ್ಯಾಪ್ತಿಯಲ್ಲಿರುವ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.

ಪುಲ್ವಾಮಾ: ಮೋದಿ ಸರಕಾರದ ವಿರುದ್ದ ಕೇಜ್ರಿವಾಲ್ ಬೆಚ್ಚಿಬೀಳಿಸುವ ಹೇಳಿಕೆಪುಲ್ವಾಮಾ: ಮೋದಿ ಸರಕಾರದ ವಿರುದ್ದ ಕೇಜ್ರಿವಾಲ್ ಬೆಚ್ಚಿಬೀಳಿಸುವ ಹೇಳಿಕೆ

ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸೋಣ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಿದೆ, ಮೈತ್ರಿಯ ಪ್ರಾಮುಖ್ಯತೆಯನ್ನು ಅವರು ಅರಿಯದೇ ಹೋದರು. ಅವರ ಪಕ್ಷದ ಕೆಲವು ಮುಖಂಡರ ದುರಂಹಕಾರದ ನಡೆಗೆ, ಪಕ್ಷ ಹಿನ್ನಡೆ ಅನುಭವಿಸಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Congress being arrogant, will lose deposits, says Arvind Kejriwal

ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಮುಸ್ತಫಾಬಾದ್ ನಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, ನಿಮ್ಮ ಮತ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಡಿವೈಡ್ ಆಗಿ, ಬಿಜೆಪಿಗೆ ಅನುಕೂಲ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿಯನ್ನು ಸೋಲಿಸಲು ಶಕ್ತಿಯಿರುವುದು ಆಮ್ ಆದ್ಮಿ ಪಕ್ಷಕ್ಕೇ ಮಾತ್ರ ಎಂದಿರುವ ಕೇಜ್ರಿವಾಲ್, ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಕ್ಕೆ ನಾವು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ AAP ಪಾಲಿಗೆ ಕಾಂಗ್ರೆಸ್ 'ಮುಚ್ಚಿದ ಬಾಗಿಲು'ದೆಹಲಿಯಲ್ಲಿ AAP ಪಾಲಿಗೆ ಕಾಂಗ್ರೆಸ್ 'ಮುಚ್ಚಿದ ಬಾಗಿಲು'

ದೆಹಲಿಯ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದಬಾರಿ ಜಯಭೇರಿ ಬಾರಿಸಿತ್ತು. ಜೊತೆಗೆ, ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್, ಅಜಯ್ ಮೇಕನ್, ಜೈಪ್ರಕಾಶ್ ಅಗರವಾಲ್ ಸೇರಿದಂತೆ ಎಲ್ಲರೂ ಮೂರನೇ ಸ್ಥಾನದಲ್ಲಿದ್ದರು.

English summary
After the Congress said it would go it alone in the general elections, Delhi Chief Minister and AAP supremo Arvind Kejriwal termed the party "arrogant" and claimed that its candidates would lose their deposits in the polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X