ಸ್ವದೇಶಿ ಶಸ್ತ್ರಾಸ್ತ್ರಗಳಲ್ಲೆ ಮುಂದಿನ ಯುದ್ಧ ಎದುರಿಸಬೇಕಿದೆ ಭಾರತ: ರಾವತ್

Posted By:
Subscribe to Oneindia Kannada

ನವದೆಹಲಿ, ಜನವರಿ 08: "ಮುಂದಿನ ಯುದ್ಧವನ್ನು ಭಾರತ, ತನ್ನದೇ ಸ್ವದೇಶಿ ಶಸ್ತ್ರಾಸ್ತ್ರಗಳಿಂದ ಎದುರಿಸುವಂತಾಗಬೇಕಿದೆ... " ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಸೇನಾ ತಂತ್ರಜ್ಞಾನ ಸೆಮಿನಾರ್ ವೊಂದರಲ್ಲಿ ಮಾತನಾಡುತ್ತಿದ್ದ ರಾವತ್, ಚಾಣಕ್ಯನ ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿಗಳಲ್ಲಿರುವ ಸೂಚನೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಇದು ಸಕಾಲ ಎಂದಿದ್ದಾರೆ.

ಕಾರ್ಯಪ್ಪ ಅವರಿಗೆ ಭಾರತರತ್ನ ಸಿಗಬೇಕು: ಸೇನಾ ಮುಖ್ಯಸ್ಥ ಬಿಪಿನ್

"ಭಾರತೀಯ ಸೇನಾ ಪಡೆಯಲ್ಲಿ ಉಪಯೋಗಿಸುವ ತಂತ್ರಜ್ಞಾನಗಳು ಆಧುನೀಕರಣ ಗೊಳ್ಳಬೇಕಿದೆ. ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಬದಲು, ದೇಶಿಯವಾಗಿಯೇ ಉತ್ಪಾದಿಸುವ ಅಗತ್ಯವಿದೆ" ಎಂದ ಅವರು, ಮುಂದಿನ ಯುದ್ಧವನ್ನು ಭಾರತ ತನ್ನದೇ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಬಳಸಿ ಎದುರಿಸುವಂತಾಗಬೇಕು" ಎಂಬ ಇಂಗಿತ ವ್ಯಕ್ತಪಡಿಸಿದರು.

Army chief Bipin Rawat called for Modernisation of armed forces

"ಈಗಾಗಲೇ ಹಗುರವಾದ ಬುಲೆಟ್ ಪ್ರೂಫ್ ಗಳನ್ನು ಮತ್ತ ಫ್ಯೂಯೆಲ್ ಸೆಲ್ ತಂತ್ರಜ್ಜಚಾನವನ್ನು ಅಳವಡಿಸಿಕೊಳ್ಳುವತ್ತ ದಾಪುಗಾಲಿಡುತ್ತಿದ್ದೇವೆ. ಈ ಪಯಣ ಈಗಷ್ಟೇ ಆರಂಭವಾಗಿದೆ. ಇದು ನಿರಂತರವಾಗಬೇಕು. ಸೇನಾ ತಂತ್ರಜ್ಞಾನ ಆಧುನೀಕರಣಗೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ರಾವತ್ ಹೇಳಿದರು.

ಮಾನವ ಹಕ್ಕು ಉಲ್ಲಂಘನೆಯಾಗಲು ಬಿಡುವುದಿಲ್ಲ : ರಾವತ್

"ನಾವು ಸೇನೆಯಲ್ಲಿ ಬಳಸುವ ಶಸ್ತ್ರಾಸ್ತ್ರಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಈ ಅವಲಂಬನೆ ಖಂಡಿತ ಒಳ್ಳೆಯದಲ್ಲ. ನಾವು ಸ್ವಾವಲಂಬಿಗಳಾಗಬೇಕಿದೆ. ಏಕೆಂದರೆ ಮುಂದೊಮ್ಮೆ ನಮ್ಮದೇ ದೇಶದಲ್ಲಿ ಉತ್ಪಾದನೆಯಾದ ಶಸ್ರಾಸ್ತ್ರಗಳಿಂದ ಮಾತ್ರವೇ ನಾವು ಯುದ್ಧ ಎದುರಿಸಬೇಕಾದ ಕಾಲ ಬಂದೀತು" ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Army Chief General Bipin Rawat on Jan 08th called for modernisation of the armed forces, adding the time has come to look take cues from the 'Arthashastra' and 'Chanakya Niti'. General Rawat also said that every arm and service was looking for upgrades as the future wars would be fought in more difficult circumstances.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ