ರಾಜ್ಯಸಭೆಯಲ್ಲಿ ಬುಧವಾರ ಹೈಡ್ರಾಮ, ಸಂಸದರಿಂದ ಗದ್ದಲ
ನವದೆಹಲಿ,
ಫೆ.19 : ಲೋಕಸಭೆಯಲ್ಲಿ ಪತ್ಯೇಕ ತೆಲಂಗಾಣ ರಾಜ್ಯ ಮಸೂದೆ ಮಂಡನೆ ವೇಳೆ ಪೆಪ್ಪರ್ ಸ್ಪ್ರೇ ಎರಚಿ ಗದ್ದಲವೆಬ್ಬಿಸಿದ ಪ್ರಸಂಗ ಮರೆಯುವ ಮುನ್ನವೇ ರಾಜ್ಯಸಭೆಯಲ್ಲಿಯೂ ಸಂಸದರ ಗುಂಡಾವರ್ತನೆ ನಡೆದಿದೆ. ಬುಧವಾರ ತೆಲಂಗಾಣ ಮಸೂದೆ ಮಂಡನೆ ವೇಳೆ ಸೀಮಾಂಧ್ರ ಹಾಗೂ ತೆಲುಗು ದೇಶಂ ಪಕ್ಷದ ಸಂಸದರು ಅಸಭ್ಯ ವರ್ತನೆ ತೋರಿದ್ದು, ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅವರ ಮೇಲೆ ಹಲ್ಲೆಯನ್ನು ನಡೆಸಿ ಗುಂಡಾಗಿರಿ ಪ್ರದರ್ಶಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಬುಧವಾರ
ರಾಜ್ಯಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಪ್ರಧಾನ ಕಾರ್ಯದರ್ಶಿ ಮಂಡಿಸಲು ತಯಾರಿ ನಡೆಸುತ್ತಿದ್ದ ವೇಳೆಯಲ್ಲಿ ಸಭಾಪತಿಗಳ ಪೀಠದ ಮುಂದಿನ ಬಾವಿಗೆ ಬಂದ ಟಿಡಿಪಿ ಸಂಸದ ರಮೇಶ್ ಗೂಂಡಾ ವರ್ತನೆ ತೋರಿದ್ದಾರೆ. ಪ್ರಧಾನ ಕಾರ್ಯದರ್ಶಿ ಅವರು ಮಂಡಿಸುತ್ತಿದ್ದ ಕಾಗದ ಪತ್ರಗಳನ್ನು ಕಸಿದುಕೊಂಡು ಹರಿದು ಹಾಕಲು ಯತ್ನಿಸಿದ್ದು, ಅಲ್ಲದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಚಿತ್ರಗಳಲ್ಲಿid='are-slot-2' class='oiad oi-axt oiadv'>

ರಾಜ್ಯಸಭೆಯಲ್ಲಿ ಸಂಸದರ ಗದ್ದಲ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಪ್ರಧಾನ ಕಾರ್ಯದರ್ಶಿ ಮಂಡಿಸಲು ಸಿದ್ಧವಾದಾಗ ಟಿಡಿಪಿ ಸಂಸದ ರಮೇಶ್ ಕಾರ್ಯದರ್ಶಿ ಕೈಯಲ್ಲಿದ್ದ ಕಾಗದ ಪತ್ರಗಳನ್ನು ಕಸಿದುಕೊಂಡು ಹರಿದು ಹಾಕಲು ಯತ್ನಿಸಿದ್ದು, ಅಲ್ಲದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಬೆಳಗ್ಗಿನಿಂದಲೂ ಗದ್ದಲ
ಮಂಗಳವಾರ ಲೋಕಸಭೆಯಲ್ಲಿ ತೆಲಂಗಾಣ ವಿಧೇಯಕಕ್ಕೆ ಅಂಗೀಕಾರ ದೊರಕಿತ್ತು. ಬುಧವಾರ ಬೆಳಗ್ಗೆಯಿಂದ ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ ವೇಳೆ ಸೀಮಾಂಧ್ರ ಸಂಸದರು ಗದ್ದಲ ಎಬ್ಬಿಸಿದರು. ಇದರಿಂದ ಪದೇಪದೇ ಸದನವನ್ನು ಮುಂದೂಡಲಾಯಿತು.

ಪೆಪ್ಪರ್ ಸ್ಪ್ರೇ ಎರಚಿದ್ದರು
ಲೋಕಸಭೆಯಲ್ಲಿ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ವಿಜಯವಾಡ ಸಂಸದ ರಾಜಗೋಪಾಲ್ ಪೆಪ್ಪರ್ ಸ್ಪ್ರೇ ಎರಚಿ, ಮೈಕ್ ಕಿತ್ತುಹಾಕಿ ಗುಂಡಾವರ್ತನೆ ಪ್ರದರ್ಶಿಸಿದ್ದರು. ಇಂದು ಮತ್ತೆ ಸಂಸದರು ಗುಂಡಾವರ್ತನೆ ಪ್ರದರ್ಶಿಸಿದ್ದು, ಸಂಸದೀಯ ಇತಿಹಾಸಕ್ಕೆ ಮಸಿ ಬಳಿಸಿದ್ದಾರೆ. [ಪೆಪ್ಪರ್ ಸ್ಪ್ರೇ ಬಳಕೆ]

ಸಭಾಪತಿ ಅತೃಪ್ತಿ
ಸಂಸದರ ಗುಂಡಾವರ್ತನೆಯನ್ನು ಸಭಾಪತಿ ಹಾಗೂ ಸದನದ ಹಿರಿಯ ಸದಸ್ಯರು ಖಂಡಿಸಿದರು. ರಾಜ್ಯಸಭೆಯಲ್ಲಿ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ರಮೇಶ್ ಪ್ರಧಾನ ಕಾರ್ಯದರ್ಶಿಯವರ ಕ್ಷಮೆಯನ್ನು ಯಾಚಿಸಿದರು.












Click it and Unblock the Notifications